More

    ಬೆಟ್ಟ ಹತ್ತಿ ವಿದ್ಯಾರ್ಥಿಗೆ ಪಾಠ

    ಯಶೋಧರ ವಿ.ಬಂಗೇರ, ಮೂಡುಬಿದಿರೆ
    ಪಣಪಿಲ ಗ್ರಾಮದ ಜಿಪಂ ಹಿರಿಯ ಪ್ರಾಥಮಿಕ ಶಾಲೆಯ ಮೂವರು ಶಿಕ್ಷಕಿಯರು ಬೆಟ್ಟ ಪ್ರದೇಶದಲ್ಲಿರುವ ಏಳನೇ ತರಗತಿಯ ವಿದ್ಯಾರ್ಥಿಯೊಬ್ಬನಿಗೆ ಪಾಠ ಹೇಳಿಒಡಲು ಕಳೆದ ಮೂರು ತಿಂಗಳಿನಿಂದ 10 ಕಿ.ಮೀ.ಕಾಡಿನ ದುರ್ಗಮ ಹಾದಿಯಲ್ಲಿ 10 ಕಿ.ಮೀ ಕ್ರಮಿಸುತ್ತಿದ್ದಾರೆ!

    ಪಣಪಿಲ ಗ್ರಾಮದ ಓಂಟೆಕಜೆ ಬೆಟ್ಟದಲ್ಲಿ ಹಲವು ವರ್ಷಗಳಿಂದ ಮೂರು ಮಲೆಕುಡಿಯ ಕುಟುಂಬಗಳು ಜೀವನ ಸಾಗಿಸುತ್ತಿವೆ. ಕೃಷಿ ಅವರ ಮುಳ್ಯ ಕಸುಬು. ವಿದ್ಯುತ್ ಸಹಿತ ಮೂಲಸೌಕರ್ಯದಿಂದ ವಂಚಿತರಾಗಿರುವ ಈ ಕುಟುಂಬಗಳು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವಲ್ಲಿ ಹೆಚ್ಚಿನ ಆಸ್ಥೆ ಹೊಂದಿದ್ದಾರೆ. ಬೆಟ್ಟದಲ್ಲಿರುವ ಎರಡು ಕುಟುಂಬಗಳಲ್ಲಿ ಶಾಲೆ, ಕಾಲೇಜಿಗೆ ಹೋಗುವ ಮಕ್ಕಳೂ ಇದ್ದಾರೆ.

    ಪಣಪಿಲ ಶಾಲೆಯಲ್ಲಿ ಕಲಿತ ವಿದ್ಯಾರ್ಥಿನಿಯೊಬ್ಬಳು ಸದ್ಯ ಮೂಡುಬಿದಿರೆ ಜೈನ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಅಳಿಯೂರಿನವರೆಗೆ ಪ್ರತಿದಿನ 10ಕಿ.ಮೀ.ನಡೆದು ಬಂದು ಬಳಿಕ ಅಲ್ಲಿಂದ 10 ಕಿ.ಮೀ.ಬಸ್‌ನಲ್ಲಿ ತೆರಳುವ ಅನಿವಾರ್ಯತೆ ಇದೆ. ಇನ್ನೊಬ್ಬ ವಿದ್ಯಾರ್ಥಿ ಅಳಿಯೂರಿನ ಪ್ರೌಢಶಾಲೆಯಲ್ಲಿ, ಒಬ್ಬ ವಿದ್ಯಾರ್ಥಿ ರೆಂಜಾಳದಲ್ಲಿ ಶಾಲೆಗೆ ಹೋಗುತ್ತಿದ್ದಾರೆ. ರವಿ ಎನ್ನುವ ಹುಡುಗ ಪಣಪಿಲ ಶಾಲೆಗೆ ಹೋಗುತ್ತಿದ್ದು, ಈ ಬಾರಿ ಏಳನೇ ತರಗತಿಗೆ ಪಾಸಾಗಿದ್ದಾನೆ.

    ವಠಾರ ಪಾಠ: ಕರೊನಾ ಸಂಕಷ್ಟದ ಕಾರಣ ವಠಾರ ತರಗತಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಮನೆಮನೆಗೆ ತೆರಳಿ ಮಕ್ಕಳ ವಿಧ್ಯಾಭ್ಯಾಸದ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದೆ. ಜೂನ್ ತಿಂಗಳಿನಿಂದ ಪಣಪಿಲ ಶಾಲೆಯ ಮೂವರು ಶಿಕ್ಷಕಿಯರು ವಾರಕೊಮ್ಮೆ ರವಿಯ ಮನೆಗೆ ತೆರಳಿ ಪಾಠ ಮಾಡುತ್ತಿದ್ದಾರೆ.

    ದುರ್ಗಮ ಕಾಡು
    ಶಾಲೆಯ ಮುಖ್ಯಶಿಕ್ಷಕಿ ಸುಜಾತಾ ಜೈನ್, ಸಹ ಶಿಕ್ಷಕಿಯರಾದ ರಶ್ಮಿ ಭಟ್ ಹಾಗೂ ನವ್ಯಾ ವಾರಕ್ಕೊಂದು ದಿನ ಬೆಟ್ಟಕ್ಕೆ ತೆರಳಿ ರವಿಗೆ ಪಾಠ ಹೇಳಿಕೊಡುತ್ತಿದ್ದಾರೆ. ಜತೆಗೆ ಇತರ ಮಕ್ಕಳಿಗೂ ಮಾರ್ಗದರ್ಶನ ಮಾಡುತ್ತಿದ್ದಾರೆ. ಬೆಟ್ಟ ಹತ್ತಿ ಇಳಿಯಲು ಸರಿಯಾದ ದಾರಿ ಇಲ್ಲ. ಕಲ್ಲುಮುಳ್ಳು, ಬಂಡೆ ಹಾಗೂ ಅಲ್ಲಲ್ಲಿ ಸಿಗುವ ತೊರೆಯನ್ನು ದಾಟಬೇಕಾಗಿದೆ. ದುರ್ಗಮ ಕಾಡಿನಲ್ಲಿ ಶಿಕ್ಷಕಿಯರು ಮಾತ್ರ ಹೋಗುವುದು ಕಷ್ಟಕರ. ಸ್ಥಳೀಯರಾದ ಸುನೀಲ್ ಪಣಪಿಲ, ಹರೀಶ್, ದಿನೇಶ್, ವಿಶ್ವನಾಥ್, ಹಾಗೂ ಶಾಲೆಯ ಅಡುಗೆ ಸಿಬ್ಬಂದಿ ವನಿತಾ ಕೂಡ ಶಿಕ್ಷಕಿಯರ ಜತೆಗೆ ಸಾಗುತ್ತಿದ್ದಾರೆ.

    ಓಂಟೆಕಜೆ ಬೆಟ್ಟದಲ್ಲಿರುವ ಮಕ್ಕಳು ಶಾಲೆಯಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದಾಗ ಅವರ ಪಾಲಕರು ಶಾಲೆಗೆ ಬಿಟ್ಟು ಹೋಗುತ್ತಿದ್ದರು. ಸಂಜೆ ಬಂದು ಕರೆದುಕೊಂಡು ಹೋಗುತ್ತಿದ್ದರು. ಕರೊನಾ ಸಂದರ್ಭದಲ್ಲಿ ಈ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ನಾವು ಅವರಿದ್ದಲ್ಲಿಗೇ ತೆರಳಿ ಪಾಠ ಮಾಡುತ್ತಿದ್ದೇವೆ.
    ಸುಜಾತಾ ಜೈನ್, ಮುಖ್ಯಶಿಕ್ಷಕಿ, ಪಣಪಿಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts