More

    ದೀಪ ಆರಿಸಿದರೆ ಪವರ್‌ಗ್ರಿಡ್‌ಗೆ ಹಾನಿ ಎಂಬ ವದಂತಿ: ಸುಳ್ಳು ಸುದ್ದಿಯ ಹಿಂದಿತ್ತು ಐಎಸ್‌ಐ ಕೈವಾಡ!

    ನವದೆಹಲಿ: ಕರೊನಾ ವೈರಸ್‌ ಹೋರಾಟದ ವಿರುದ್ಧ ಒಗ್ಗಟ್ಟು ಪ್ರದರ್ಶಿಸಲು ದೇಶಾದ್ಯಂತ ಏಕಕಾಲದಲ್ಲಿ ವಿದ್ಯುದ್ದೀಪ ಆರಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ಕರೆ ಕೊಟ್ಟ ಬೆನ್ನಲ್ಲೇ, ಹೀಗೆ ಮಾಡಿದರೆ ಪವರ್‌ಗ್ರಿಡ್‌ಗೆ ಭಾರಿ ಹಾನಿಯಾಗುತ್ತದೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಎಲ್ಲೆಡೆ ಹರಡಿಬಿಟ್ಟಿತ್ತು. ಈ ನಡುವೆಯೇ ಕೇಂದ್ರ ಇಂಧನ ಸಚಿವಾಲಯ ಈ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದೂ ಸ್ಪಷ್ಟಪಡಿಸಿತ್ತು.

    ಹಾಗಿದ್ದರೆ ಇಂಥದ್ದೊಂದು ಸುಳ್ಳು ಸುದ್ದಿ ಹರಡಲು ಕಾರಣವೇನು? ವದಂತಿ ಹರಡಿಸಿದವರು ಯಾರು ಎಂಬ ಪ್ರಶ್ನೆಯ ಬೆನ್ನಟ್ಟಿ ಹೋದ ಭಾರತೀಯ ಭದ್ರತಾ ಏಜೆನ್ಸೀಸ್‌ಗೆ ಸಿಕ್ಕ ಆತಂಕಕಾರಿ ಸತ್ಯ ಎಂದರೆ, ಇದರ ಹಿಂದಿದ್ದದ್ದು ಪಾಕಿಸ್ತಾನದ ಐಎಸ್‌ಐ (ಇಂಟರ್‌ ಸರ್ವೀಸ್‌ ಇಂಟಲಿಜೆನ್ಸ್‌).

    ಹೌದು. ಭಾರತದಲ್ಲಿ ಸದ್ಯ ಏನೇ ಆದರೂ ಅದನ್ನು ವಿರೋಧಿಸುವುದನ್ನೇ ಗುರಿಯಾಗಿಸಿ, ಭಾರತದಲ್ಲಿನ ಜನರ ಹಾದಿಯನ್ನೂ ತಪ್ಪಿಸುವಲ್ಲಿ ಕಾರ್ಯನಿರತವಾಗಿರುವ ‍ಪಾಕಿಸ್ತಾನ ಹೀಗೊಂದು ವದಂತಿ ಹರಡಿತ್ತು. ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿತು. ನಂತರ ಈ ಬಗ್ಗೆ ಮಹಾರಾಷ್ಟ್ರದ ಇಂಧನ ಸಚಿವ ಕಾಂಗ್ರೆಸ್‌ನ ನಿತಿನ್‌ ರಾವತ್‌ ಕೂಡ ಪವರ್‌ಗ್ರಿಡ್‌ಗೆ ಹಾನಿಯಾಗುವ ಕುರಿತಂತೆ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದರು. ನಂತರ ಈ ಸುದ್ದಿ ಎಲ್ಲೆಡೆ ಹರಿದಾಡಿತು.

    ಈ ಸುದ್ದಿಯ ಮೂಲ ಹುಡುಕಿದಾಗ ಈಗ ನಿಜಾಂಶ ಬೆಳಕಿಗೆ ಬಂದಿದೆ. ಇಷ್ಟೆಲ್ಲಾ ವದಂತಿ ಹರಡಿದ ಮೇಲೂ, ಭಾರತದಲ್ಲಿ ದೀಪ ಬೆಳಗುವ ಪ್ರಕ್ರಿಯೆ ಯಶಸ್ವಿಯಾದ ಹಿನ್ನೆಲೆಯಲ್ಲಿ, ಅಷ್ಟಕ್ಕೇ ಸುಮ್ಮನಾಗದ ಪಾಕ್‌ನ ಐಎಸ್‌ಐ, ಹಲವಾರು ನಕಲಿ ವೀಡಿಯೋಗಳನ್ನು ಹರಿಬಿಟ್ಟು, ದೀಪ ಬೆಳಗಿದ್ದರಿಂದ ಹಲವೆಡೆ ಭಾರಿ ಅವಘಡಗಳು ಸಂಭವಿಸಿವೆ ಎಂದು ಸುದ್ದಿಗಳನ್ನೂ ಹರಡಿದೆ. ಈ ವೀಡಿಯೋಗಳು ಕೂಡ ಸಾಕಷ್ಟು ಆತಂಕ ಸೃಷ್ಟಿಸಿದ್ದು, ಹಲವಾರು ಮಂದಿ ಇದನ್ನು ನಿಜ ಎಂದು ನಂಬಿದ್ದಾರೆ.

    ವಿದೇಶಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿಯೂ ಭಾರತದಲ್ಲಿನ ಕರೊನಾ ವೈರಸ್‌ ಕುರಿತಂತೆ ಐಎಸ್‌ಐ ಆತಂಕ ಸೃಷ್ಟಿ ಮಾಡಿದೆ. ಈ ವಿದ್ಯಾರ್ಥಿಗಳಿಗೆ ವಾಪಸ್‌ ಭಾರತಕ್ಕೆ ಬರಲು ಸಾಧ್ಯವಾಗುವುದಿಲ್ಲ ಎನ್ನುವುದೂ ಸೇರಿದಂತೆ ಹಲವಾರು ರೀತಿಯಲ್ಲಿ ಗೊಂದಲ ಮೂಡಿಸಿದೆ. ಇದರಿಂದ ವಿಚಲಿತರಾಗಿರುವ ಅಲ್ಲಿಯ ವಿದ್ಯಾರ್ಥಿಗಳು ಮೇಲಿಂದ ಮೇಲೆ ಕರೆ ಮಾಡುತ್ತಿದ್ದು, ಅವರನ್ನೆಲ್ಲಾ ಸಮಾಧಾನ ಪಡಿಸುವುದೇ ದೊಡ್ಡ ಕೆಲಸವಾಗಿದೆ ಎಂದಿದ್ದಾರೆ ಅಧಿಕಾರಿಗಳು.

    ಇಡೀ ವಿಶ್ವವು ಕರೊನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ನಿಂತಿದ್ದರೆ ಪಾಕ್‌ನ ಐಎಸ್‌ಐ, ಇದನ್ನೇ ಬಂಡವಾಳ ಮಾಡಿಕೊಂಡು ಭಾರತದ ಮೇಲೆ ದಾಳಿ ನಡೆಸಲು ಭಯೋತ್ಪಾದನಾ ಸಂಘಟನೆಯ ಜತೆ ಚರ್ಚಿಸುತ್ತಿರುವುದು ಕೂಡ ಬೆಳಕಿಗೆ ಬಂದಿದೆ.

    ಕಳೆದೆರಡು ದಿನಗಳಲ್ಲಿ ಭಾರತೀಯ ಯೋಧಕರು ಒಂಬತ್ತು ಮಂದಿ ಉಗ್ರರನ್ನು ಹತ್ಯೆಗೈದಿದ್ದಾರೆ. ಈ ಪೈಕಿ ನಾಲ್ವರು ಭಯೋತ್ಪಾದಕರು ದಕ್ಷಿಣ ಕಾಶ್ಮೀರದಲ್ಲಿ ನೆಲೆಸಿರುವವರನ್ನು ಹತ್ಯೆ ಮಾಡಿದ್ದರು. (ಏಜೆನ್ಸೀಸ್​)

    ಪದವಿ ವಿದ್ಯಾರ್ಥಿಗಳಿಗೂ ಪರೀಕ್ಷೆ ಇಲ್ಲದೆ ಮುಂದಿನ ತರಗತಿಗೆ ಬಡ್ತಿ ನೀಡಿ…. ವಿಶ್ವವಿದ್ಯಾಲಯಕ್ಕೆ ಪಾಧ್ಯಾಪಕರಿಂದಲೇ ಸಲಹೆ

    ಜೀವರಕ್ಷಕ ಔಷಧಿಗಳು ಮೊದಲು ಭಾರತೀಯರಿಗೆ ಮಾತ್ರ ದೊರೆಯಬೇಕು; ಆನಂತರ ಇತರೆ ರಾಷ್ಟ್ರಗಳಿಗೆ ನೆರವಾಗಲಿ: ರಾಹುಲ್​ ಗಾಂಧಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts