More

    ಮತ್ತೆ ಭಾರತದೊಂದಿಗೆ ವ್ಯಾಪಾರಕ್ಕೆ ಮುಂದಾದ ಪಾಕ್​; ಸಕ್ಕರೆ, ಹತ್ತಿಗಾಗಿ ಬೇಡಿಕೆ

    ನವದೆಹಲಿ: ಕಳೆದ 19 ತಿಂಗಳುಗಳಿಂದ ಭಾರತದೊಂದಿಗಿನ ವ್ಯಾಪಾರ ವ್ಯವಹಾರವನ್ನು ಸ್ಥಗಿತಗೊಳಿಸಿದ್ದ ಪಾಕಿಸ್ತಾನ ಇದೀಗ ವ್ಯವಹಾರವನ್ನು ಪುನರಾರಂಭಿಸಲು ಮುಂದಾಗಿದೆ. ಭಾರತದಿಂದ ಸಕ್ಕರೆ ಮತ್ತು ಹತ್ತಿಯನ್ನು ಆಮದು ಮಾಡಿಕೊಳ್ಳುವುದಾಗಿ ಪಾಕ್​ ತಿಳಿಸಿದೆ.

    ಭಾರತದಲ್ಲಿ ಸಕ್ಕರೆ ದರ ಕಡಿಮೆಯಿದೆ. ಖಾಸಗಿ ವಲಯಕ್ಕೆ ಜೂನ್​ 30ರಿಂದ ಭಾರತದಿಂದ ಸಕ್ಕರೆ ಮತ್ತು ಹತ್ತಿಯನ್ನು ಆಮದು ಮಾಡಿಕೊಳ್ಳಲು ಪಾಕಿಸ್ತಾನದ ಆರ್ಥಿಕ ಸಮನ್ವಯ ಸಮಿತಿ (ಇಸಿಸಿ) ಅನುಮತಿ ನೀಡಿದೆ. 5 ಲಕ್ಷ ಟನ್​ ಸಕ್ಕರೆ ಆಮದು ಮಾಡಿಕೊಳ್ಳಲಾಗುವುದು ಎಂದು ಆರ್ಥಿಕ ಸಚಿವ ಹಮ್ಮದ್​ ಅಜರ್​ ಬುಧವಾರದಂದು ತಿಳಿಸಿದ್ದಾರೆ.

    2019ರ ಆಗಸ್ಟ್​ನಲ್ಲಿ ಭಾರತ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿತ್ತು. ಅದಾದ ನಂತರ ಭಾರತ ಮತ್ತು ಪಾಕ್​ ನಡುವಿನ ಸಂಬಂಧ ಹಳಸಿತ್ತು. ಅದೇ ತಿಂಗಳಲ್ಲಿ ಭಾರತದಿಂದ ಆಮದನ್ನು ಪಾಕ್​ ನಿಲ್ಲಿಸಿತ್ತು. (ಏಜೆನ್ಸೀಸ್​)

    ಗಡಿ ಭದ್ರತೆಗೆ ಬಿಳೇಕಲ್ ಸಹೋದರಿಯರು; ಅಪ್ಪನ ಆಸೆ ಈಡೇರಿಸಿದ ಯುವತಿ

    ಗಂಡನಿಗೆ ಸರ್ಕಾರಿ ಕೆಲಸ ಸಿಗಲೆಂದು, ಲವರ್​ ಜತೆ ಸೇರಿ ಮಾವನ ಕೊಲೆಗೆ ಸುಪಾರಿ ಕೊಟ್ಟ ಸೊಸೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts