More

    ಮೊದಲ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದ ಅಪ್ಪ-ಮಗ! : ಪಾಕ್ ಎದುರು ಡಚ್ಚರ ಹೋರಾಟ ವ್ಯರ್ಥ

    ಹೈದರಾಬಾದ್: ಯುವ ಆಲ್ರೌಂಡರ್ ಬಸ್ ಡಿ ಲೀಡೆ (67 ರನ್, 68 ಎಸೆತ, 6 ಬೌಂಡರಿ, 2 ಸಿಕ್ಸರ್, 62ಕ್ಕೆ 4 ವಿಕೆಟ್) ಆಲ್ರೌಂಡ್ ಹೋರಾಟದ ನಡುವೆಯೂ ನೆದರ್ಲೆಂಡ್ ತಂಡ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಎದುರು 81 ರನ್‌ಗಳಿಂದ ಸೋಲು ಅನುಭವಿಸಿದೆ. ಇದರೊಂದಿಗೆ ಬಾಬರ್ ಅಜಮ್ ಪಡೆ ಗೆಲುವಿನ ಆರಂಭ ಕಂಡಿದೆ.
    ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ಗೆ ಇಳಿದ ಪಾಕಿಸ್ತಾನ, ಕೀಪರ್-ಬ್ಯಾಟರ್ ಮೊಹಮದ್ ರಿಜ್ವಾನ್ (68 ರನ್, 75 ಎಸೆತ, 9 ಬೌಂಡರಿ) ಹಾಗೂ ಸೌದ್ ಶಕೀಲ್ (68 ರನ್, 52 ಎಸೆತ, 9 ಬೌಂಡರಿ, 1 ಸಿಕ್ಸರ್) ಶತಕದ ಜತೆಯಾಟದ ಬಳಿಕ, 23 ವರ್ಷದ ಡಿ ಲೀಡೆ ಮಧ್ಯಮ ವೇಗದ ದಾಳಿಗೆ ಕುಸಿದು 49 ಓವರ್‌ಗಳಲ್ಲಿ 286 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಆರಂಭದಲ್ಲಿ ಉತ್ತಮ ಪೈಪೋಟಿ ನೀಡಿದ ನೆದರ್ಲೆಂಡ್, ವಿಕ್ರಮ್‌ಜಿತ್ ಸಿಂಗ್ (52 ರನ್, 67 ಎಸೆತ, 4 ಬೌಂಡರಿ, 1 ಸಿಕ್ಸರ್) ಅರ್ಧಶತಕ ಪ್ರತಿರೋಧದ ಬಳಿಕ 41 ಓವರ್‌ಗಳಲ್ಲಿ 205 ರನ್‌ಗಳಿಗೆ ಸರ್ವಪತನ ಕಂಡಿತು.

    https://x.com/ICC/status/1710321735185129539?s=20

    1: ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಎದುರು 4 ವಿಕೆಟ್ ಹಾಗೂ ಅರ್ಧಶತಕ ಗಳಿಸಿದ ಮೊದಲ ಆಟಗಾರ ಬಸ್ ಡಿ ಲೀಡೆ. ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿದ 10ನೇ ಆಟಗಾರ.

    7: ಟಿಮ್ ಡಿ ಲೀಡೆ (2003) ಹಾಗೂ ಬಾಸ್ ಡಿ ಲೀಡೆ (2023) ಏಕದಿನ ವಿಶ್ವಕಪ್‌ನಲ್ಲಿ ಆಡಿದ 7ನೇ ಅಪ್ಪ-ಮಗ ಎನಿಸಿದರು.

    ಮೊದಲ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದ ಅಪ್ಪ-ಮಗ!: ಟಿಮ್ ಡಿ ಲೀಡೆ ಹಾಗೂ ಬಸ್ ಡಿ ಲೀಡೆ ವಿಶ್ವಕಪ್ ಪದಾರ್ಪಣಾ ಪಂದ್ಯದಲ್ಲಿ 4 ವಿಕೆಟ್ ಪಡೆದ ಅಪ್ಪ-ಮಗ ಎನಿಸಿದರು. 2003ರಲ್ಲಿ ಭಾರತ ವಿರುದ್ಧ ಟಿಮ್ ಡಿ ಲೀಡೆ 4 ವಿಕೆಟ್ ಕಬಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

    https://x.com/ICC/status/1710274142904201531?s=20

    ಪಂದ್ಯ ಶ್ರೇಷ್ಠ: ಸೌದ್ ಶಕೀಲ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts