More

    ಪಡುಬಿದ್ರಿ ಬಂಟರ ಸಂಘದಲ್ಲಿ ನಿತ್ಯಾನಂದ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ

    ಪಡುಬಿದ್ರಿ: ಅವಧೂತ ಪರಂಪರೆಗೆ ದೊಡ್ಡ ಕೊಡುಗೆ ನೀಡಿದವರು ನಿತ್ಯಾನಂದ ಸ್ವಾಮಿಗಳು. ಹಲವರನ್ನು ಅಜ್ಞಾನದಿಂದ ಸುಜ್ಞಾನಕ್ಕೆ ಕೊಂಡು ಹೋದ ಕೀರ್ತಿಯೂ ಅವರಿಗೆ ಸಲ್ಲುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

    ಪಡುಬಿದ್ರಿ ಬಂಟರ ಸಂಘದಲ್ಲಿ ಗುರುವಾರ ಆಯೋಜಿಸಿದ್ದ ಸದ್ಗುರು ನಿತ್ಯಾನಂದ ಪರಮ ಗುರುಗಳ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಪ್ರೀತಿ ಭಾವದಲ್ಲಿ ಬದುಕಬೇಕು. ಜಗದ್ಗುರು ನಿತ್ಯಾನಂದ ಸ್ವಾಮಿಗಳು ಹಾಕಿಕೊಟ್ಟ ದಾರಿ ಬಲು ಹೊಡ್ಡದು. ಇಂದು ಮಾನವೀಯ ಮೌಲ್ಯದ ಕೊರತೆಯಿದೆ. ಅಂದು ಅದನ್ನು ಅವರು ಎತ್ತಿ ಹಿಡಿದಿದ್ದರು. ಜನರಲ್ಲಿ ಕವಿದಿದ್ದ ಕತ್ತಲನ್ನು ದೂರ ಮಾಡಿ ಬೆಳಕು ನೀಡುವ ಕೆಲಸವನ್ನು ನಿತ್ಯಾನಂದ ಸ್ವಾಮಿ ಮಾಡಿದ್ದರು ಎಂದರು.

    ಯು.ರಾಘವೇಂದ್ರ ಉಪಾಧ್ಯಾಯ ಮೂರ್ತಿ ಪ್ರತಿಷ್ಠಾಪನೆ ಸಹಿತ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಪಡುಬಿದ್ರಿ ಬೀಡು ಅರಸರಾದ ರತ್ನಾಕರರಾಜ್ ಅರಸ್ ಕಿನ್ಯಕ್ಕ ಬಲ್ಲಾಳ್, ಪಡುಬಿದ್ರಿ ಬ್ರಹ್ಮಸ್ಥಾನದ ಪಾತ್ರಿ ಪಿ.ಜಿ.ನಾರಾಯಣ ರಾವ್, ಪದ್ಮನಾಭ ಕೊರ್ನಾಯ, ಶ್ರೀಪತಿ ಕೊರ್ನಾಯ, ಕಾಂಞಗಾಡು ವಿಜಯಾನಂದ ಸ್ವಾಮೀಜಿ, ದಾನಿಗಳಾದ ಬೋಳ ರಘುರಾಮ ಕೆ. ಶೆಟ್ಟಿ ಮತ್ತು ಭವಾನಿ ಆರ್. ಶೆಟ್ಟಿ, ಕೃಷ್ಣ ವೈ. ಶೆಟ್ಟಿ ಮತ್ತು ಉಮಾ ಕೆ.ಶೆಟ್ಟಿ, ಎರ್ಮಾಳು ಚಂದ್ರಹಾಸ ಶೆಟ್ಟಿ ಪುಣೆ, ಬಾಲಚಂದ್ರ ಶೆಟ್ಟಿ, ಪೂಣೆ ಬಂಟರ ಸಂಘ ಅಧ್ಯಕ್ಷ ಸಂತೋಷ್ ಶೆಟ್ಟಿ ಕುರ್ಕಿಲ್‌ಬೆಟ್ಟು ಇನ್ನಾ, ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು, ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ವೈ. ಶಶಿಧರ ಶೆಟ್ಟಿ, ಸಿರಿಮುಡಿ ದತ್ತಿನಿಧಿ ಸ್ಥಾಪಕ ಸಾಂತೂರು ಭಾಸ್ಕರ ಶೆಟ್ಟಿ, ಬಂಟರ ಸಂಘ ಪದಾಧಿಕಾರಿಗಳಾದ ಸಂತೋಷ್ ಶೆಟ್ಟಿ ಪಲ್ಲವಿ, ರವಿ ಶೆಟ್ಟಿ ಗುಂಡ್ಲಾಡಿ, ಪ್ರಕಾಶ್ ಶೆಟ್ಟಿ ಪಡುಹಿತ್ಲು, ಶ್ರೀನಾಥ್ ಹೆಗ್ಡೆ, ಅನಿಲ್‌ಕುಮಾರ್ ಶೆಟ್ಟಿ ಪೇಟೆಮನೆ, ನವೀನ್ ಎನ್. ಶೆಟ್ಟಿ, ನೇತ್ರಾವತಿ ಆರ್. ಶೆಟ್ಟಿ, ಶಿವಪ್ರಸಾದ್ ಶೆಟ್ಟಿ ಎಲ್ಲದಡಿ, ಮಾಧವ ಶೆಟ್ಟಿ, ವಿನಯ ಶೆಟ್ಟಿ ಎರ್ಮಾಳು, ಮುರಳಿನಾಥ ಶೆಟ್ಟಿ, ಜಯ ಶೆಟ್ಟಿ ಪದ್ರ, ಧನಪಾಲ್ ಶೆಟ್ಟಿ, ಹರೀಶ್ ಶೆಟ್ಟಿ ಪಾದೆಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.

    ಪವಾಡ ಪುರುಷ, ಜಗತ್ತಿಗೆ ಕಲ್ಯಾಣ ಕಾರ್ಯದ ದಾರಿ ತೋರಿಸಿ ಜಗತ್ತಿನ ನೋವು ತಾನುಂಡು, ಜಗತ್ತಿಗೆ ಬೆಳಕು ನೀಡಿದವರು ನಿತ್ಯಾನಂದ ಗುರುಗಳು. ಬಂಟ ಸಮಾಜಕ್ಕೆ ಹೆಮ್ಮೆಯ ಅನುಗ್ರಹ ಮಾಡಿದವರು. ಪಡುಬಿದ್ರಿ ಬಂಟರ ಸಂಘ ಅವರನ್ನೂ ಗುರುತು ಮಾಡಿರುವುದು ಮೆಚ್ಚುವಂತದ್ದಾಗಿದೆ. ಜಗತ್ತಿನಲ್ಲಿಯೇ ಸ್ವಯಂ ಆಲಯ ನಿರ್ಮಿಸಿಕೊಂಡ ನಿತ್ಯಾನಂದರ ಅನುಗ್ರಹದ ಚೈತನ್ಯ ನಮಗಾಗಲಿ.
    – ಶ್ರೀ ರಾಜಶೇಖರಾನಂದ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts