More

    ಭತ್ತ ಖರೀದಿ ಕೇಂದ್ರ ಶೀಘ್ರ ಆರಂಭಿಸಿ, ರೈತ ಸಂಘ-ಹಸಿರು ಸೇನೆ ಒತ್ತಾಯ

    ಕಂಪ್ಲಿ: ಭತ್ತ ಕಟಾವಿಗೆ ಅನುಮತಿ ಹಾಗೂ ಭತ್ತ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ ಬಣ) ನಗರ ಘಟಕ ಶುಕ್ರವಾರ ತಹಸೀಲ್ದಾರ್ ಎಂ.ರೇಣುಕಾಗೆ ಮನವಿ ಸಲ್ಲಿಸಿತು.

    ಸಂಘದ ಅಧ್ಯಕ್ಷ ಕೊಟ್ಟೂರು ರಮೇಶ್ ಮಾತನಾಡಿ, ರೈತರ ಹಿತ ದೃಷ್ಟಿಯಿಂದ ಭತ್ತ ಖರೀದಿ ಕೇಂದ್ರ ತೆರೆಯಬೇಕು. ಕರೊನಾ ಮುಂಜಾಗ್ರತಾ ನೆಪದಲ್ಲಿ ಪೊಲೀಸರಿಂದ ರೈತರು, ಕೃಷಿ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ. ಹೊಲ ಗದ್ದೆಗಳಿಗೆ ತೆರಳುತ್ತಿದ್ದ ವೇಳೆ ಲಾಠಿಯಿಂದ ಹೊಡೆಯಲಾಗುತ್ತಿದೆ. ಆ ರೈತರ ಮೇಲೆ ಲಾಠಿ ಎತ್ತದಂತೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.

    ತಹಸೀಲ್ದಾರ್ ರೇಣುಕಾ ಮಾತನಾಡಿ, ಕೃಷಿ ವಾಹನ ಬಳಕೆ, ಕೃಷಿ ಸಾಮಗ್ರಿ ರವಾನೆ, ರಸಗೊಬ್ಬರ, ಕ್ರಿಮಿನಾಶಕ ಖರೀದಿ, ಕೊಯ್ಲು ಯಂತ್ರ ಸಾಗಣೆ ಸೇರಿ ಇತರ ಕೃಷಿ ಚಟುವಟಿಕೆಗೆ ತಹಸಿಲ್ ಕಚೇರಿಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯುವಂತೆ ತಿಳಿಸಿದರು.

    ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ವಿ.ಗೌಡ, ನಗರ ಘಟಕ ಗೌರವಾಧ್ಯಕ್ಷ ಟಿ.ಗಂಗಣ್ಣ, ಮುಖಂಡರಾದ ಎಂ.ಮಂಜುನಾಥ, ಸತ್ಯಪ್ಪ, ಪೋಲೂರು ಸತ್ಯನಾರಾಯಣ, ಪುಲ್ಲಾರೆಡ್ಡಿ, ಡಿ.ಕೃಷ್ಣಂರಾಜು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts