More

    ರೈಲಲ್ಲಿ ಬಂದ 100 ಭತ್ತ ಕಟಾವು ಯಂತ್ರಗಳು!

    ಮಂಗಳೂರು: ಕರಾವಳಿಯಿಂದ ಅಡಕೆ ಸಾಗಾಟಕ್ಕೆ ಕಿಸಾನ್ ರೈಲು ಬಳಕೆಯಾದಂತೆಯೇ ಕೃಷಿಕರ ನೆರವಿಗೆ ಬೇಕಾದ ಹಾರ್ವೆಸ್ಟರ್ ಉಪಕರಣಗಳು ಇದೇ ಮೊದಲ ಬಾರಿಗೆ ರೈಲಿನಲ್ಲಿ ಬಂದಿವೆ.
    ಹಿಂದೆಲ್ಲ ಲಾರಿಗಳಲ್ಲಿ ಈ ಬಾಡಿಗೆ ಯಂತ್ರಗಳು ಈ ಭಾಗಕ್ಕೆ ಆಗಮಿಸುತ್ತಿದ್ದವು. ಈಗ ಸರಕು ಸಾಗಾಟದ ರೋರೋ ಮಾದರಿಯಲ್ಲಿ ಗೂಡ್ಸ್ ರೈಲಿನಲ್ಲಿ ಕೃಷಿ ಉಪಕರಣಗಳ ಸಾಗಾಟ ನಡೆದಿದೆ. ಕರಾವಳಿ ಹಾಗೂ ಮಲೆನಾಡಿನ ರೈತರಿಗೆ ಹಾಗೂ ಕೃಷಿಕರಿಗೆ ಇದು ಮುಂದಿನ ದಿನಗಳಲ್ಲಿ ಉಪಯುಕ್ತವಾಗಲಿದೆ. ಕೃಷಿ ಉಪಕರಣ ಹಾರ್ವೆಸ್ಟರ್ ಹೊತ್ತ ಗೂಡ್ಸ್ ರೈಲು ಗುರುವಾರ ಮಂಗಳೂರಿನ ಸುರತ್ಕಲ್ ರೈಲು ನಿಲ್ದಾಣಕ್ಕೆ ಗುರುವಾರ ಆಗಮಿಸಿದೆ.
    ಭತ್ತ ಕೊಯ್ಯುವ ಹಾಗೂ ಸಂಸ್ಕರಿಸಿ ಪ್ಯಾಕ್ ಮಾಡುವ ಅತ್ಯಾಧುನಿಕ ಮಾದರಿಯ ಕೃಷಿ ಯಂತ್ರ ಇದಾಗಿದೆ. ಸುಮಾರು 100 ಭತ್ತ ಕಟಾವು ಮಾಡುವ ಯಂತ್ರಗಳು ಇದೇ ಮೊದಲ ಬಾರಿಗೆ ಕರಾವಳಿಗೆ ಆಗಮಿಸಿವೆ. ಮಂಗಳೂರಿಗೆ ತಮಿಳುನಾಡಿನ ಚಿನ್ನಸೇಲಂನಿಂದ 32 ವ್ಯಾಗನ್‌ಗಳಲ್ಲಿ ಒಂದೇ ಬಾರಿಗೆ ಆಗಮಿಸಿವೆ.
    ಈ ಮೊದಲು ಚಿನ್ನಸೇಲಂನಿಂದ 80 ಹಾರ್ವೆಸ್ಟರ್ ಮಷಿನ್‌ಗಳನ್ನು ಅ.12ರಂದು ತೆಲಂಗಾಣದ ನಲಗೊಂಡಕ್ಕೆ ಸಾಗಿಸಲಾಗಿತ್ತು.
    ಸುರತ್ಕಲ್‌ಗೆ ಆಗಮಿಸಿರುವ ಮಷಿನ್‌ಗಳು ಕರಾವಳಿಯಲ್ಲಿ ಅಲ್ಲದೆ ಒಳನಾಡಿಗೂ ತೆರಳಿ ಕಟಾವು ಕಾರ್ಯ ಕೈಗೊಳ್ಳಲಿವೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts