More

    ಕೊಡಗಿನಲ್ಲಿ ಭತ್ತದ ಬೇಸಾಯ ಭೂಮಿ ಕ್ಷೀಣ

    ಮಡಿಕೇರಿ:

    ಕೊಡಗಿನ ಸಾಂಪ್ರದಾಯಿಕ ಬೆಳೆಯಾದ ಭತ್ತ ಬೆಳೆಯುವ ಪ್ರದೇಶ ವ?ರ್ದಿಂದ ವ?ರ್ಕ್ಕೆ ಕ್ಷೀಣಿಸುತ್ತಿದೆ. ಈ ಜಾಗದಲ್ಲಿ ವಾಣಿಜ್ಯ ಬೆಳೆ ಕಾಫಿ, ಅಡಿಕೆ, ಬಾಳೆ ಹಾಗೂ ಶುಂಠಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಈಗಿನ ಜಲಕ್ಷಾಮಕ್ಕೆ ಇದೂ ಒಂದು ಕಾರಣ ಎಂದು ವಿಶ್ಲೇಶಿಸಲಾಗುತ್ತಿದೆ.

    ಭತ್ತ ಬೆಳೆಯುವಲ್ಲಿ ರೈತ ಆಸಕ್ತಿ ಕಳೆದುಕೊಳ್ಳಲು ವಿವಿಧ ಕಾರಣಗಳಿವೆ. ಪ್ರಮುಖವಾಗಿ ಭತ್ತದ ಬೇಸಾಯ ಲಾಭದಾಯಕ ಆಗಿಲ್ಲ ಎನ್ನುವುದು ಎಲ್ಲಾ ರೈತರ ಸಾಮಾನ್ಯ ಅಭಿಪ್ರಾಯ. ಇದಲ್ಲದೆ ಈಗ ಹವಾಮಾನ ವೈಪರಿತ್ಯದ ಕಾರಣದಿಂದ ಕಾಲಕ್ಕೆ ಸರಿಯಾಗಿ ಮಳೆ ಬರುತ್ತಿಲ್ಲ. ಜೂನ್‌ನಲ್ಲಿ ಬರುತ್ತಿದ್ದ ಮಳೆ ಈಗ ಆಗಸ್ಟ್, ಸೆಪ್ಟೆಂಬರ್ ತನಕ ಮುಂದಕ್ಕೆ ಹೋಗಿದೆ. ಇದರಿಂದಾಗಿ ಮಳೆ ಆಶ್ರಯದಲ್ಲಿ ಭತ್ತದ ಬೆಳೆಯುತ್ತಿದ್ದ ಬೇಸಾಯದ ಚಕ್ರವೇ ಏರುಪೇರಾಗಿದೆ.

    ಭತ್ತ ಬಿತ್ತನೆ ಮಾಡಬೇಕಾದ ಸಮಯದಲ್ಲಿ ಈಗ ಮಳೆ ಸಿಗುವುದಿಲ್ಲ. ನಾಟಿ ಮಾಡುವ ವೇಳೆ ಗದ್ದೆಗಳಲ್ಲಿ ನೀರೇ ಇರುವುದಿಲ್ಲ. ಹೇಗೋ ಶ್ರಮವಹಿಸಿ ನಾಟಿ ಮಾಡಿದರೆ ಭತ್ತದ ಕೊಯ್ಲು ಕಾಲಕ್ಕೆ ಮಳೆ ಶುರುವಾಗಿ ಬೆಳೆದ ಭತ್ತ ರೈತನ ಮನೆ ಸೇರುವುದಿಲ್ಲ. ಹಾಗಾಗಿ ಈ ತಲೆನೋವೇ ಬೇಡ ಎಂದು ರೈತ ವಾಣಿಜ್ಯ ಬೆಳೆಗಳ ಮೊರೆ ಹೋಗಿದ್ದಾನೆ.

    ಬಹುತೇಕ ಭತ್ತದ ಗದ್ದೆಗಳಲ್ಲಿ ಕಾಫಿ ತೋಟ ಎದ್ದು ನಿಂತಿದೆ. ಅಡಿಕೆಯೂ ಭತ್ತ ಬೆಳೆಯುವ ಜಾಗಗಳನ್ನು ಆಕ್ರಮಿಸಿಕೊಂಡಿದೆ. ಬಾಳೆ, ಶುಂಠಿಯೂ ದೊಡ್ಡ ಮಟ್ಟದಲ್ಲಿ ಪೈಪೋಟಿ ಕೊಡುತ್ತಿದೆ. ಇದರ ಜತೆಗೆ ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಭತ್ತದ ಗದ್ದೆಗಳು ಭೂಪರಿವರ್ತನೆಗೊಂಡು ನಿವೇಶನಗಳಾಗಿ ಬದಲಾಗಿದ್ದು, ಮನೆಗಳು ತಲೆ ಎತ್ತಿವೆ.

    ಭತ್ತದ ಕೃಷಿಗೂ ಅಂತರ್ಜಲಕ್ಕೂ ಪರಸ್ಪರ ನಂಟಿದೆ ಎನ್ನುತ್ತಾರೆ ತಜ್ಞರು. ಸಾಂಪ್ರದಾಯಿಕವಾಗಿ ಭತ್ತ ಬೆಳೆಯುವಲ್ಲಿ ನಾಟಿ ಮಡಿದ ನಂತರ ಗದ್ದೆಯಲ್ಲಿ ಸಾಮಾನ್ಯವಾಗಿ ಸುಮಾರು ೪ ಇಂಚುಗಳಷ್ಟು ನೀರು ನಿಲ್ಲಿಸಲಾಗುತ್ತದೆ. ನಾಟಿ ಮಾಡಿದ ನಂತರ ಭತ್ತ ತೆನೆ ಕಟ್ಟುವ ಅವಧಿ ತನಕವೂ ಈ ರೀತಿಯಲ್ಲಿ ನೀರು ಕಟ್ಟಲಾಗುತ್ತದೆ. ಇದರಿಂದಾಗಿ ಭೂಮಿಯೊಳಗೆ ನೀರು ಇಂಗಲು ಅನುಕೂಲ ಆಗುತ್ತದೆ. ಅಂತರ್ಜಲ ಮಟ್ಟವೂ ವೃದ್ಧಿಯಾಗುತ್ತದೆ.

    ಈ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಮಳೆಯಾಶ್ರಿತ ಪ್ರದೇಶದಲ್ಲಿ ೨೬,೬೦೦ ಹೆಕ್ಟೇರ್ ಭತ್ತ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ೧೭೦೦೨ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಕಾರ್ಯ ನಡೆದಿದೆ. ನೀರಾವರಿ ಪ್ರದೇಶದಲ್ಲಿ ೨,೪೦೦ ಹೆಕ್ಟೇರ್ ಬಿತ್ತನೆ ಗುರಿ ಇದ್ದಲ್ಲಿ ೨೧೫೦ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಮೂಲಕ ಒಟ್ಟು ಶೇ. ೬೬.೦೪ರಷ್ಟು ಮಾತ್ರ ಗುರಿ ಸಾಧಿಸಲಾಗಿದೆ. ಈ ವರ್ಷ ಮಳೆಯ ಕೊರತೆ ಇದಕ್ಕೆ ಒಂದು ಕಾರಣವಾದರೆ, ರೈತರು ಭತ್ತ ಕೃಷಿ ಮೇಲಿನ ಆಸಕ್ತಿ ಕಳೆದುಕೊಳ್ಳುತ್ತಿರುವುದು ಇನ್ನೊಂದು ಕಾರಣವಾಗಿದೆ.

    ಆದರೆ ಈಗ ಭತ್ತ ಬೆಳೆಯುವ ಪ್ರದೇಶ ಕ್ಷೀಣಿಸಿರುವುದರಿಂದ ಅಂತರ್ಜಲ ಮಟ್ಟದ ಮೇಲೆ ಪರಿಣಾಮ ಬೀರಿದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಭತ್ತ ಬೆಳೆಯುವ ರೈತರಿಗೆ ಸರ್ಕಾರ ಪ್ರೋತ್ಸಾಹ ನೀಡುವುದು, ಭತ್ತಕ್ಕೆ ಬೆಂಬಲ ಬೆಲೆ ನಿಗದಿ ಮಾಡುವುದು ಮತ್ತಿತರ ಕ್ರಮಗಳಿಂದ ಮತ್ತೆ ಭತ್ತ ಬೆಳೆಯುವುದನ್ನು ಉತ್ತೇಜಿಸಬಹುದು. ಈ ಬಗ್ಗೆ ವಿಜಯವಾಣಿ ಓದುಗರು ಲೌಡ್‌ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

    ಕೊಡಗಿನ ಸಾಂಪ್ರದಾಯಿಕ ಬೆಳೆಯಾದ ಭತ್ತ ಬೆಳೆಯುವ ಪ್ರದೇಶ ವ?ರ್ದಿಂದ ವ?ರ್ಕ್ಕೆ ಕ್ಷೀಣಿಸುತ್ತಿದೆ. ಈ ಜಾಗದಲ್ಲಿ ವಾಣಿಜ್ಯ ಬೆಳೆ ಕಾಫಿ, ಅಡಿಕೆ ಹಾಗೂ ಶುಂಠಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಈ ಶುಂಠಿ ಬೆಳೆ ಬೆಳೆಯುವ ಜಾಗದಲ್ಲಿ ಮರಗಳ ಮರಣಹೋಮ ನಡೆಯುವುದರಿಂದ ಮಳೆ ಕಡಿಮೆ ಆಗಲು ಕಾರಣವಾಗುತ್ತಿದೆ. ಭತ್ತದ ಗದ್ದೆಯಲ್ಲಿ ಭತ್ತ ಬೆಳೆಯಲು ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಇದಕ್ಕೆ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸಬೇಕು.
    ಹ?ರ್, ಶನಿವಾರಸಂತೆ ನಿವಾಸಿ

    ಭತ್ತಕ್ಕೆ ಬೆಂಬಲ ಬೆಲೆ ಇಲ್ಲದೆ ಮತ್ತು ಸರಿಯಾದ ಕಾರ್ಮಿಕರು ಸಿಗದೆ ಕೃಷಿ ಕ್ಷೀಣಿಸುತ್ತಿದೆ. ಅದೇ ಜಾಗದಲ್ಲಿ ವಾಣಿಜ್ಯ ಬೆಳೆಗಳು ಬರುತ್ತಿದೆ. ಭತ್ತ ಬೆಳೆಯುವಾಗ ಯಥೇಚ್ಛವಾಗಿ ನೀರು ಸಂಗ್ರಹವಾಗುತಿತ್ತು. ಆದರೆ ಈಗ ನೀರು ಬಸಿದು ಹೋಗುತ್ತಿದೆ. ಅಂತರ್ಜಲಕ್ಕೆ ನೀರಿಲ್ಲದಂತೆ ಆಗುತ್ತಿದೆ. ಹೀಗೆ ಆದರೆ ಅಂತರ್ಜಲ ಮಟ್ಟ ಕುಸಿಯುವ ಸಾಧ್ಯತೆ ಹೆಚ್ಚು.
    ಆರ್. ಸುಭೀಶ್, ಸಾಮಾಜಿಕ ಕಾರ್ಯಕರ್ತ, ಗೋಣಿಕೊಪ್ಪ

    ವಾಣಿಜ್ಯ ಬೆಳೆಗಳಾದ ಶುಂಠಿ, ಕಾಫಿಗಳಿಂದ ರೈತರು ಸಾಕ?್ಟು ಆರ್ಥಿಕವಾಗಿ ಲಾಭ ಕಂಡಿದ್ದಾರೆ. ಆದರೆ ಆ ಬೆಳೆಗಳ ಉತ್ತಮ ಫಸಲಿಗಾಗಿ ಭೂಮಿಗೆ ಹಲವು ರೀತಿಯ ಔ?ಧಗಳನ್ನು ಹಾಕಿ ಫಲವತ್ತಾದ ಭೂಮಿಯನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ಅದರಿಂದ ಅಂತರ್ಜಲ ಕುಸಿತವಾಗಿದೆ. ಕೇರಳದಲ್ಲಿ ಶುಂಠಿ ಬೆಳೆಯುವುದನ್ನು ಸರ್ಕಾರ ನಿರ್ಬಂಧಿಸಿರುವಂತೆ ನಮ್ಮಲ್ಲೂ ಮಾಡಬೇಕು. ರೈತರೇ ಈಗ ದುಡ್ಡು ಕೊಟ್ಟು ಅಕ್ಕಿ ಖರೀದಿಸುವ ಮಟ್ಟಕ್ಕೆ ಬಂದಿದ್ದಾರೆ. ಸರ್ಕಾರವೂ ಭತ್ತ ಬೆಳೆಗಾರರಿಗೆ ವಿಶೇ? ಯೋಜನೆ ಜಾರಿಗೆ ತರಬೇಕು.
    ಮಧುಸೂದನ್, ರೈತ, ಗೊಂದಿಬಸವನಹಳ್ಳಿ, ಕುಶಾಲನಗರ

    ಕೊಡಗಿನ ಸಾಂಪ್ರದಾಯಿಕ ಬೆಳೆಗಳಿಗೆ ನುರಿತ ಕೆಲಸಗಾರರ ಕೊರತೆ ಕಾಡುತ್ತಿದೆ. ಸಮಯಕ್ಕೆ ಸರಿಯಾಗಿ ಮಳೆಯಾಗದಿರುವುದು ಕೂಡ ಸಾಂಪ್ರದಾಯಿಕ ಬೆಳೆಗಳಿಂದ ವಿಮುಖರಾಗಲು ಪ್ರಮುಖ ಕಾರಣವಾಗಿದೆ. ಕಾಫಿ, ಅಡಿಕೆ, ಶುಂಠಿ ಬೆಳೆಗಳಿಗೆ ಸಾಂದರ್ಭಿಕ ಮಳೆ ಸಾಕಾಗುತ್ತದೆ. ಸಾಂಪ್ರದಾಯಿಕ ಬೆಳೆಗಳಿಗೆ ಹೋಲಿಸಿದರೆ ವಾಣಿಜ್ಯ ಬೆಳೆಗಳಿಂದ ಲಾಭವೂ ಹೆಚ್ಚು. ಜಾಗತಿ ತಾಪಮಾನವೂ ಮಳೆ ಕೊರತೆಗೆ ಕಾರಣವಾಗಿದೆ.
    ಕಾಂಡಂಡ ಜೋಯಪ್ಪ, ಕಾಫಿ ಬೆಳೆಗಾರ, ಕೊಳಕೇರಿ ಗ್ರಾಮ, ನಾಪೋಕ್ಲು

    ಕೊಡಗಿನ ಸಾಂಪ್ರದಾಯಿಕ ಬೆಳೆಯಾದ ಭತ್ತ ಇತ್ತೀಚಿನ ದಿನಗಳಲ್ಲಿ ಗೆದ್ದೆಗಳಿಂದ ಕಣ್ಮರೆಯಾಗುತ್ತಿದೆ. ಲಾಭದಾಯಕ ದೃಷ್ಟಿಯಿಂದ ರೈತ ಶುಂಠಿ, ಬಾಳೆ ಮುಂತಾದ ಕೃಷಿ ಚಟುವಟಿಕೆಗಳ ಮೊರೆ ಹೋಗುತ್ತಿದ್ದಾನೆ. ಇದಕ್ಕೆ ಪ್ರಮುಖ ಕಾರಣ ಇತ್ತೀಚಿನ ವ?ರ್ಗಳಲ್ಲಿ ಬಂದಿರುವ ಸರ್ಕಾರದ ಧೋರಣೆ. ಮುಂದಿನ ದಿನಗಳಲ್ಲಿ ಸರ್ಕಾರ ಭತ್ತ ಬೆಳೆಯುವ ರೈತರಿಗೆ ಬೆಂಬಲ ಬೆಲೆ ಘೋ?ಣೆ ಮಾಡಬೇಕು.
    ಅನಿಲ್, ಸಂಚಾಲಕ, ನಾಗರಿಕ ಹೋರಾಟ ಸಮಿತಿ, ಸಿದ್ದಾಪುರ

    ಇಂದಿನ ಯುವ ಜನರು ಭತ್ತ ಕೃಷಿಯ ಬಗ್ಗೆ ಒಲವು ತೋರಿಸದಿರುವುದು ವಿ?ಾದನೀಯ. ಇದರಿಂದ ಜಲಕ್ಷಾಮ, ಅಕ್ಕಿ ಬೆಲೆಯಲ್ಲಿ ಹೆಚ್ಚಳ ಮತ್ತಿತರ ಸಮಸ್ಯೆ ಎದುರಿಸುವ ಹಾಗೆ ಆಗಿದೆ. ಆಹಾರ ಧಾನ್ಯದ ಉತ್ಪಾದನೆ ಪ್ರಮಾಣ ಕುಸಿದು ಆಹಾರ ಕೊರತೆಯಾಗಿ ಭೂಮಿಯ ಫಲವತ್ತತೆ ಕಡಿಮೆಯಾಗಲಿದೆ. ವಿಶೇ?ವಾಗಿ ಯುವ ಜನತೆ ಸಾಂಪ್ರದಾಯಿಕ ಕೃಷಿಯನ್ನು ಬಿಟ್ಟು ವಾಣಿಜ್ಯ ಬೆಳೆಗಳತ್ತ ಮುಖ ಮಾಡುತಿದ್ದು ಇದರಿಂದ ಕೃಷಿ ಭೂಮಿಯಲ್ಲಿ ನೀರು ಇಂಗುವ ಪ್ರಮಾಣ ಕಡಿಮೆಯಾಗಿದೆ.
    ಬಿ.ಎನ್. ಸ್ವಾತಿ, ಬೇಟೋಳಿ, ವಿರಾಜಪೇಟೆ

    ಪೂರ್ವಜರಿಂದ ಬಳುವಳಿಯಾಗಿ ಬಂದ ಭತ್ತದ ಬೆಳೆ ಇಂದು ಸಂಪೂರ್ಣ ನಿರ್ಲಕ್ಷ್ಯ ಕಾಣುತ್ತಿದೆ. ಭತ್ತದ ಗದ್ದೆಗಳ ಸ್ಥಾನವನ್ನು ಶುಂಠಿ, ಕಾಫಿ, ಅಡಿಕೆ ಹಾಗೂ ಇನ್ನಿತರ ವಾಣಿಜ್ಯ ಬೆಳೆಗಳು ಆಕ್ರಮಿಸಿದೆ. ಭತ್ತ ಬೆಳೆ ಬೆಳೆಸುವಾಗ ನಿರಂತರ ಆರು ತಿಂಗಳುಗಳ ಕಾಲ ಗದ್ದೆಯಲ್ಲಿ ನೀರನ್ನು ಹಾಯಿಸಿ ಗದ್ದೆಗಳಲ್ಲಿ ತೇವಾಂಶವನ್ನು ಉಳಿಸಿ ನೀರು ಭೂಮಿಯಲ್ಲಿ ಇಂಗುವ ಹಾಗೆ ಮಾಡುತ್ತಿದ್ದರು. ಇದು ಅಂತರ್ಜಲ ವೃದ್ಧಿಗೆ ಕಾರಣವಾಗುತ್ತಿತ್ತು. ಜಲ ಕ್ಷಾಮಕ್ಕೆ ಭತ್ತದ ಬೆಳೆಯ ನಿರ್ಲಕ್ಷ ಮೂಲ ಕಾರಣವಾಗಿದೆ.
    ಬಿ.ಎಸ್. ಭಾನುಪ್ರಕಾಶ್, ರೈತ, ಬೇಟೋಳಿ ಗ್ರಾಮ

    ಭತ್ತ ಕೃಷಿ ನಶಿಸದಂತೆ ಸರ್ಕಾರ ಎಚ್ಚರ ವಹಿಸಬೇಕು. ಸೌಲಭ್ಯಗಳನ್ನು ಒದಗಿಸಬೇಕು. ಇದು ಪ್ರಮುಖ ಆಹಾರ ಬೆಳೆಯೂ ಆಗಿದೆ. ಪ್ರಕೃತಿಯ ಅಸಮತೋಲನದಿಂದ ಭತ್ತ ಕೃಷಿ ತ್ಯಜಿಸಲಾಗುತ್ತಿದೆ. ನಾಲ್ಕೈದು ತಿಂಗಳು ಭತ್ತದ ಗದ್ದೆಗಳಲ್ಲಿ ನೀರು ನಿಲ್ಲುತ್ತಿತ್ತು. ಅಂತರ್ಜಲಕ್ಕೆ ಸಮಸ್ಯೆಯಾಗುತ್ತಿರಲಿಲ್ಲ. ಈಗ ಸಮಸ್ಯೆ ಬಿಗಡಾಯಿಸುತ್ತಿದೆ.
    -ಆಶಾ ಯೋಗೇಂದ್ರ, ಗೃಹಿಣಿ, ಸೋಮವಾರಪೇಟೆ

    ಸೋಮವಾರಪೇಟೆ ತಾಲೂಕನ್ನು ಭತ್ತದ ಕಣಜ ಎಂದೇ ಕರೆಯಲಾಗುತ್ತಿತ್ತು. ಎರಡು ದಶಕದ ಹಿಂದೆ ಎಲ್ಲಾ ರೈತರು ಭತ್ತ ಬೆಳೆಯುತ್ತಿದ್ದರು. ಉತ್ತಮ ಮಳೆಯಾಗುತ್ತಿತ್ತು. ಕ್ರಮೇಣ ಅಕಾಲಿಕ ಮಳೆಯಿಂದ, ರೋಗಬಾಧೆಯಿಂದ ಭತ್ತ ಕೃಷಿ ಲಾಭದಾಯಕವಾಗಲಿಲ್ಲ. ಈ ಸಂದರ್ಭದಲ್ಲಾದರೂ ಸರ್ಕಾರ ಭತ್ತ ಕೃಷಿ ಪುನಶ್ಚೇತನಕ್ಕೆ ಯೋಜನೆ ರೂಪಿಸಬೇಕಿತ್ತು. ಈಗ ಮನೆಗೆ ಬೆಂಕಿ ಬಿದ್ದ ಮೇಲೆ ಬಾವಿ ತೆಗೆದರೆ ಪ್ರಯೋಜನವಿಲ್ಲದಂತಾಗಿದೆ. ಅಂತರ್ಜಲ ಕಾಪಾಡಿಕೊಳ್ಳಲು ಸಾಧ್ಯವಿಲ್ಲದಂತಾಗಿದೆ.
    ಹರೀಶ್ ಕುಮಾರ್, ಕೃಷಿಕ, ಕುಮಾರಳ್ಳಿ ಗ್ರಾಮ

    ಭತ್ತ ಕೃಷಿಗೂ ಅಂತರ್ಜಲಕ್ಕೂ ನೇರ ಸಂಬಂಧ ಇದೆ. ಭತ್ತ ಬೆಳೆಯಬೇಕಾದರೆ ನೀರು ನಿಲ್ಲಿಸಲೇಬೇಕಿರುವುದರಿಂದ ಭೂಮಿಯೊಳಗೆ ನೀರು ಇಂಗಿ ಅಂತರ್ಜಲ ಮಟ್ಟ ಸ್ಥಿರತೆ ಕಪಾಡಿಕೊಳ್ಳಲು ಸಹಕರಿಸುತ್ತದೆ. ವಾಣಿಜ್ಯ ಬೆಳೆಗಳಿಂದ ಇದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ವಾಣಿಜ್ಯ ಬೆಳೆಗಳನ್ನು ಬೆಳೆಯುವ ಸಂದರ್ಭ ಬಸಿಗಾಲುವೆ ತೋಟಬೇಕಾಗುತ್ತದೆ. ಇದರಿಂದ ತೋಟದಲ್ಲಿ ನೀರು ನಿಲ್ಲುವುದಿಲ್ಲ. ಅಂತರ್ಜಲ ಮಟ್ಟ ಹೆಚ್ಚಿಸಲು ಭತ್ತ ಬೆಳೆಗೆ ಪ್ರೋತ್ಸಾಗ ನೀಡುವುದರ ಜತೆಗೆ ಆದಷ್ಟು ಹೆಚ್ಚಿನ ಪ್ರಮಾಣದಲ್ಲಿ ಇಂಗುಗುಂಡಿಗಳನ್ನು ನಿರ್ಮಿಸುವ ಅಗತ್ಯವಿದೆ.

    ಡಾ. ವೀರೇಂದ್ರ ಕುಮಾರ್, ವಿಜ್ಞಾನಿ, ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts