More

    ಕೋವಿಡ್ ಮೃತರ ಪ್ಯಾಕಿಂಗ್​ಗೆ ಕಿಟ್ ಕೊರತೆ!; ಪ್ಲಾಸ್ಟಿಕ್​ನಲ್ಲಿ ಶವ ಸುತ್ತಿ ಹಸ್ತಾಂತರ, ಸೋಂಕು ಹರಡುವ ಭೀತಿಯಲ್ಲಿ ಕುಟುಂಬಸ್ಥರು

    | ಶಿವಮೂರ್ತಿ ಹಿರೇಮಠ ರಾಯಚೂರು

    ಕರೊನಾ ಸೋಂಕು ಹರಡದಂತೆ ಸಾಕಷ್ಟು ಮುಂಜಾಗ್ರತೆ ಕೈಗೊಳ್ಳಲಾಗುತ್ತಿದೆ. ಆದರೆ, ಚಿಕಿತ್ಸೆ ಫಲಿಸದೆ ಸೋಂಕಿತರು ಮೃತರಾದಲ್ಲಿ ಕುಟುಂಬದವರಿಗೆ ಮೃತದೇಹಗಳನ್ನು ನೀಡುವಾಗ ಮುಂಜಾಗ್ರತೆ ಕ್ರಮ ಅನುಸರಿಸದೆ ಇರುವುದರಿಂದ ಸೋಂಕು ಮತ್ತಷ್ಟು ಹರಡುವ ಭೀತಿ ಎದುರಾಗಿದೆ.

    ಆಸ್ಪತ್ರೆಯಲ್ಲಿ ಕುಟುಂಬಸ್ಥರಿಗೆ ಮೃತದೇಹವನ್ನು ಕೊಡುವ ಮುನ್ನ ಅದನ್ನು ಸ್ಯಾನಿಟೈಸ್ ಮಾಡಿ, ನಂತರ ಕಿಟ್​ನಲ್ಲಿ ಪ್ಯಾಕ್ ಮಾಡಬೇಕು. ಆದರೆ, ಬೆಂಗಳೂರಿನಿಂದ ಕಿಟ್​ಗಳು ಬಾರದ ಕಾರಣ ಪ್ಲಾಸ್ಟಿಕ್ ಹಾಗೂ ಬಟ್ಟೆಯಿಂದ ಮೃತದೇಹವನ್ನು ಸುತ್ತಿ ಸಂಬಂಧಿಸಿದವರಿಗೆ ನೀಡಲಾಗುತ್ತಿದೆ. ಕೋವಿಡ್ ನಿಯಮದಂತೆ ಮೃತದೇಹವನ್ನು ಪ್ಯಾಕ್ ಮಾಡದೆ ಇರುವುದರಿಂದ ಕುಟುಂಬದ ಸದಸ್ಯರಲ್ಲಿ ಆತಂಕ ಮೂಡಿಸಿದೆ.

    ಜಿಲ್ಲೆಯಲ್ಲಿ ಪ್ರತಿನಿತ್ಯ 15ಕ್ಕೂ ಹೆಚ್ಚು ಜನ ಸೋಂಕಿನಿಂದ ಸಾವಿಗೀಡಾಗುತ್ತಿದ್ದು, ಬಹುತೇಕ ಸಂದರ್ಭಗಳಲ್ಲಿ ಸಂಬಂಧಿಕರೇ ಮೃತದೇಹಗಳ ಅಂತ್ಯಕ್ರಿಯೆ ನಡೆಸುತ್ತಿದ್ದಾರೆ. ಕಳೆದ ವರ್ಷ ಇದೇ ರೀತಿ ಮೃತದೇಹಗಳನ್ನು ನೀಡಿದ್ದರಿಂದ ಕುಟುಂಬದ ಎಲ್ಲರಿಗೂ ಸೋಂಕು ತಗುಲಿದ ಉದಾಹರಣೆಗಳಿವೆ. ಮೃತದೇಹಗಳನ್ನು ಹಾಗೆಯೆ ತೆಗೆದುಕೊಂಡು ಹೋಗುವಂತೆ ಸೋಂಕಿತರ ಮೃತದೇಹಗಳ ವಿಲೇವಾರಿ ಉಸ್ತುವಾರಿ ತಿಳಿಸುತ್ತಿದ್ದಾರೆ ಎನ್ನುವ ಆರೋಪಗಳಿವೆ. ಈ ಬಗ್ಗೆ ರಿಮ್್ಸ ಹಿರಿಯ ಅಧಿಕಾರಿಗಳು ಗಮನ ಹರಿಸಬೇಕಿದೆ.

    ಸಾವಿಗೀಡಾದ ಸೋಂಕಿತರ ಮೃತದೇಹ ಗಳನ್ನು ಹಸ್ತಾಂತರಿಸುವಾಗ ಸಮರ್ಪಕವಾಗಿ ಪ್ಯಾಕ್ ಮಾಡಿಯೇ ಕುಟುಂಬದವರಿಗೆ ನೀಡಲಾಗುತ್ತಿದೆ. ಬೆಂಗಳೂರಿನಿಂದ ಶವಗಳನ್ನು ಪ್ಯಾಕ್ ಮಾಡುವ ಕಿಟ್​ಗಳು ಬರಬೇಕಾಗಿವೆ. ಪರ್ಯಾಯ ಸಾಮಗ್ರಿಗಳನ್ನು ಬಳಸಿ ಪ್ಯಾಕ್ ಮಾಡಲಾಗುತ್ತಿದೆ. ಯಾರಿಗೂ ಪ್ಯಾಕ್ ಮಾಡದೆ ಮೃತ ದೇಹಗಳನ್ನು ನೀಡುತ್ತಿಲ್ಲ.

    | ಡಾ.ಬಸವರಾಜ ಪೀರಾಪುರ ನಿರ್ದೇಶಕ, ರಿಮ್ಸ್​, ರಾಯಚೂರು.

    ಮಂಗಳೂರಿನಲ್ಲೂ ಸಮಸ್ಯೆ: ಕರೊನಾ ಸೋಂಕಿನಿಂದ ಮೃತಪಟ್ಟವರ ಮೃತದೇಹವನ್ನು ಸ್ಯಾನಿಟೈಸ್ ಮಾಡಿ ಕೊಡುವ ಕಿಟ್ ಕೊರತೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲೂ ಇದೆ. ಸದ್ಯ ಪ್ಲಾಸ್ಟಿಕ್​ನಲ್ಲಿ ಮೃತದೇಹಗಳನ್ನು ಪ್ಯಾಕ್ ಮಾಡಿಕೊಡಲಾಗುತ್ತಿದೆ. ಕಳೆದ ಎರಡು ವಾರಗಳಿಂದ ಕಿಟ್ ಬೆಂಗಳೂರಿನಿಂದ ಪೂರೈಕೆ ಆಗಿಲ್ಲ. ಅದೇ ಮಾದರಿಯ ದಪ್ಪನೆಯ ಪ್ಲಾಸ್ಟಿಕ್​ನಲ್ಲಿ ಪ್ಯಾಕ್ ಮಾಡಿ ಮೃತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತಿದೆ. ಕಿಟ್ ಪೂರೈಸುವಂತೆ ಬೆಂಗಳೂರಿಗೆ ಬೇಡಿಕೆ ಸಲ್ಲಿಸಲಾಗಿದೆ. ಶೀಘ್ರ ಬರುವ ನಿರೀಕ್ಷೆ ಇದೆ. ಅಷ್ಟರ ತನಕ ಪರ್ಯಾಯವಾಗಿ ಸೂಕ್ತ ರೀತಿಯಲ್ಲಿ ಪ್ಲಾಸ್ಟಿಕ್​ನಲ್ಲಿ ಪ್ಯಾಕ್ ಮಾಡಿ ಕೊಡುವುದು ಅನಿವಾರ್ಯ ಎಂದು ವೆನ್ಲಾಕ್ ಮೂಲಗಳು ತಿಳಿಸಿವೆ.

    ಒಂದೇ ಮನೆಯ ನಾಲ್ವರು ಕರೊನಾಗೆ ಬಲಿ; 2- 3 ದಿನಗಳ ಅಂತರದಲ್ಲಿ ಇಬ್ಬಿಬ್ಬರ ಸಾವು!

    ಕರೊನಾಗೆ ಬಲಿಯಾದ ತಾಯಿಯ ಅಂತ್ಯಸಂಸ್ಕಾರದ ಬಳಿಕ ಮಗನಿಗೂ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts