More

    ಓಯೊ ಮುಖ್ಯಸ್ಥ ಮದುವೆಗೆ ಸಿದ್ಧ; ಪ್ರಧಾನಿ ಮೋದಿಗೆ ಆಮಂತ್ರಣ

    ಬೆಂಗಳೂರು: ಓಯೊ ಮುಖ್ಯಸ್ಥ ರಿತೇಶ್ ಅಗರ್​ವಾಲ್​ ಮುಂದಿನ ತಿಂಗಳು ಮದುವೆಯಾಗಲು ಸಜ್ಜಾಗಿದ್ದು ಇಂದು (ಫೆ.18) ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿ ಅವರನ್ನು ಆಹ್ವಾನಿಸಿದ್ದಾರೆ.

    ರಿತೇಶ್ ಅಗರ್​ವಾಲ್​, ಪ್ರಧಾನಿ ನಿವಾಸಕ್ಕೆ ತಮ್ಮ ತಾಯಿ ಮತ್ತು ಅವರ ಭಾವಿ ಪತ್ನಿಯೊಂದಿಗೆ ತೆರಳಿ ಆಮಂತ್ರಿಸಿದ್ದು ಭೇಟಿಯ ಫೋಟೊಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ರಿತೇಶ್​ ಅಗರ್​ವಾಲ್​ ಹಂಚಿಕೊಂಡಿರುವ ಫೋಟೋಗಳಲ್ಲಿ ಭಾವಿ ದಂಪತಿ ಪ್ರಧಾನಿಯ ಪಾದಗಳನ್ನು ಸ್ಪರ್ಶಿಸುತ್ತಿರುವುದು ಕಂಡುಬಂದಿದೆ. ಈ ಸಂದರ್ಭ ಅಗರ್ವಾಲ್ ಕೂಡ ಪ್ರಧಾನಿಯವರ ಭುಜಕ್ಕೆ ಶಾಲು ಹೊದಿಸಿದರು.

    ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಓಯೊ ಮುಖ್ಯಸ್ಥ “ಪ್ರಧಾನ ಮಂತ್ರಿ ಅವರ ಆಶೀರ್ವಾದದೊಂದಿಗೆ, ನಾವು ಹೊಸ ಜೀವನಕ್ಕೆ ಸಿದ್ಧರಾಗಿದ್ದೇವೆ” ಎಂದು ಅವರು ಬರೆದಿದ್ದಾರೆ. “ಅವರು ನಮ್ಮನ್ನು ಸ್ವೀಕರಿಸಿದ ರೀತಿಯನ್ನು ಪದಗಳು ಬಣ್ಣಿಸಲು ಸಾಧ್ಯವಿಲ್ಲ” ಎಂದಿದ್ದಾರೆ.

    ಇನ್ನು ಈ ಪೊಸ್ಟ್​ನ ಕಾಮೆಂಟ್​ ವಿಭಾಗದಲ್ಲಿ ಬಹುತೇಕ ಜನರು ಶುಭವನ್ನು ಹಾರೈಸಿದ್ದಾರೆ. ಇನ್ನೂ ಕೆಲವರು ಪ್ರೇಮಿಗಳನ್ನು ತಮ್ಮ ಹೋಟೇಲುಗಳ ಮೂಲಕ ಒಂದಾಗಿಸಿದ ಓಯೊವನ್ನು ಪ್ರಶಂಸಿದ್ದಾರೆ.

     

    View this post on Instagram

     

    A post shared by Ritesh Agarwal (@riteshagar)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts