More

    ಆಮ್ಲಜನಕ ಪೂರೈಸಿದ ಶ್ರೀ ಕ್ಷೇತ್ರ ಧರ್ಮಸ್ಥಳ

    ಬೆಳ್ತಂಗಡಿ: ಆಮ್ಲಜನಕ ಕೊರತೆ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಬಳ್ಳಾರಿಯ ಜಿಂದಾಲ್ ಸ್ಟೀಲ್‌ಪ್ಲಾಂಟ್ ಅಧಿಕಾರಿಗಳ ಜತೆ ಮಾತುಕತೆ ನಡೆಸಿ, ಮಂಗಳವಾರ ಮಂಗಳೂರಿನ ವೆನ್ಲಾಕ್ ಹಾಗೂ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಒಟ್ಟು 5.5 ಟನ್ ಆಮ್ಲಜನಕ ತರಿಸಿಕೊಟ್ಟಿದ್ದಾರೆ.

    ಇದರಿಂದ ವೆನ್‌ಲಾಕ್ ಆಸ್ಪತ್ರೆಗೆ ಮೂರು ದಿನಕ್ಕೆ ಅಗತ್ಯವಿರುವಷ್ಟು ಆಮ್ಲಜನಕ ಪೂರೈಸಿದಂತಾಗಿದೆ. ಬಳ್ಳಾರಿಯ ತೋರಣ ಗಲ್‌ನಿಂದ ಆಮ್ಲಜನಕ ತಂದ ಟ್ಯಾಂಕರನ್ನು ಮಂಗಳೂರಿನಲ್ಲಿ ಆಸ್ಪತ್ರೆ ಆರೋಗ್ಯಾಧಿಕಾರಿ ಡಾ.ಸದಾಶಿವ್ ಶ್ಯಾನ್‌ಭೋಗ್ ಮತ್ತಿತರರ ಸಮ್ಮುಖ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಖ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಮತ್ತು ಜಿಲ್ಲಾ ಸಹಾಯಕ ಔಷಧ ನಿಯಂತ್ರಣಾಧಿಕಾರಿ ರಮಾಕಾಂತ್ ಕುಂಟೆ ಬರಮಾಡಿಕೊಂಡು, ಆಮ್ಲಜನಕವನ್ನು ಆಸ್ಪತ್ರೆಗೆ ವರ್ಗಾವಣೆ ಮಾಡಿದರು.

    ಕ್ರಯೋಜನಿಕ್ ಟ್ಯಾಂಕರ್‌ಗಳ ಕೊರತೆ ಸಂದರ್ಭವೂ ಡಾ.ಹೆಗ್ಗಡೆಯವರ ಬೇಡಿಕೆಗೆ ತುರ್ತಾಗಿ ಸ್ಪಂದಿಸಿದ ಏರ್ ವಾಟರ್ ಇಂಡಿಯಾ ಸಂಸ್ಥೆಯ ದಕ್ಷಿಣ ಭಾರತದ ಮಾರಾಟ ಅಧಿಕಾರಿ ತ್ರಿದೇವ್ ಬ್ಯಾನರ್ಜಿ ಮತ್ತು ಹರೀಶ್ ಪ್ರಭು ಆಮ್ಲಜನಕವಿದ್ದ ಟ್ಯಾಂಕರನ್ನು ಅತ್ಯಲ್ಪ ಸಮಯದಲ್ಲೇ ಮಂಗಳೂರು ತಲುಪಿಸಿದ್ದಾರೆ.

    ಆಮ್ಲಜನಕ ಖರೀದಿ, ಸಾಗಾಟ ವೆಚ್ಚವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಭರಿಸಿದೆ. ಮುಂದಿನ ದಿನಗಳಲ್ಲಿ 100 ಟನ್ ಆಮ್ಲಜನಕ ಒದಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಅಗತ್ಯವಿದ್ದರೆ ಇತರ ಆಸ್ಪತ್ರೆಗಳಿಗೂ ಈ ಸೌಲಭ್ಯವನ್ನು ಆಮ್ಲಜನಕದ ಲಭ್ಯತೆ ಆಧಾರದಲ್ಲಿ ಒದಗಿಸಲು ಸಿದ್ಧ.
    – ಡಾ.ಎಲ್.ಎಚ್.ಮಂಜುನಾಥ್,
    ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts