More

    ತುಂಬಿ ಹರಿದ ಹಳ್ಳ-ಕೊಳ್ಳಗಳು, ಮಾನ್ವಿ ತಾಲೂಕಿನಲ್ಲಿ ಬೆಳೆ ಹಾನಿ

    ಮಾನ್ವಿ: ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಯಿಂದ ಹಳ್ಳ-ಕೊಳ್ಳಗಳು ಭರ್ತಿಯಾಗಿವೆ. ವಿವಿಧ ಬೆಳೆಗಳು ಹಾನಿಯಾಗಿದ್ದು, ಜನ ಜೀವನ ಅಸ್ವವ್ಯಸ್ತಗೊಂಡಿದೆ. ಹಳ್ಳ-ಕೊಳ್ಳಗಳು ಭರ್ತಿಯಾಗಿ ತುಂಗಭದ್ರಾ ನದಿ ಸೇರುತ್ತವೆ. ಇದರಿಂದ ಚೀಕಲಪರ್ವಿ, ಕಾತರ್ಕಿ ನದಿ ಪಾತ್ರದ ಇತರ ಗ್ರಾಮಗಳಲ್ಲಿ ಬೆಳೆಗಳು ಕೊಚ್ಚಿ ಹೋಗಿವೆ. ಹಿರೇಹಳ್ಳ, ಪೋತ್ನಾಳ, ನಂದಿಹಾಳ, ಮೂಷ್ಟೂರು ಮತ್ತು ಇತರ ಹಳ್ಳಗಳು ತುಂಬಿ ಹರಿಯುತ್ತಿವೆ. ಸತತ ಮಳೆಯಿಂದ ಹತ್ತಿ, ಮೆಣಸಿನಕಾಯಿ ಇತರ ಬೆಳೆಗಳು ಕೊಳತು ಹೋಗುತ್ತಿವೆ.

    ಮಳೆಗೆ ಗ್ರಾಮಗಳಲ್ಲಿನ ಅನೇಕ ಮನೆಗಳು ಸೋರುತ್ತಿವೆ. ಕುರ್ಡಿ, ಮಾನ್ವಿ ಮತ್ತು ಇತರ ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು ಮಳೆ ನೀರು ಹೊರಗೆ ಹಾಕುವುದರಲ್ಲಿ ಜನರು ನಿರತರಾಗಿದ್ದಾರೆ. ಹಳೇ ಮನೆಗಳು ಬೀಳುವ ಭಯದಲ್ಲಿ ಜನರಿದ್ದಾರೆ. ಚೀಕಲಪರ್ವಿ, ಮೂಷ್ಟೂರು, ಹರನಹಳ್ಳಿ ಗ್ರಾಮದ ಹಳ್ಳ ತುಂಬು ಹರಿಯುತ್ತಿದ್ದು ಗ್ರಾಮಗಳಿಗೆ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ರಂಗದಾಳ ಹಳ್ಳದ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಮಾನ್ವಿ-ಚೀಕಲಪರ್ವಿ, ಮೂಷ್ಟೀರು- ಮಾನ್ವಿ ರಸ್ತೆ ಸಂಚಾರ ಬಂದ್ ಹಾಗಿದೆ.

    ಹಳ್ಳ ಮತ್ತು ನದಿ ದಂಡೆಯಲ್ಲಿನ ವಿದ್ಯುತ್ ಪಂಪ್‌ಸೆಟ್‌ಗಳು ಮುಳಗಿವೆ. ವಿದ್ಯುತ್ ಕಂಬಗಳು ನೆಲಕ್ಕೆ ಉರಳಿದ್ದು, ಕಾತರ್ಕಿ, ಹರನಹಳ್ಳಿ ಇತರೆಡೆ ತುಂಗಭದ್ರ ನದಿ ನೀರು ಗ್ರಾಮದ ಹತ್ತಿರ ಬಂದಿದ್ದು ಬೆಳೆ ನಷ್ಟವಾಗಿವೆ. ಕುರ್ಡಿ ಗ್ರಾಮದಲ್ಲಿನ ಕೆರೆ ಒಡೆದು ಕೆರೆಯ ನೀರು ಮನೆಗೆ ನುಗ್ಗಿದೆ. ತಹಸೀಲ್ದಾರ್ ಚಂದ್ರಕಾಂತ ಎಲ್.ಡಿ., ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹೀದ್ ಭೇಟಿ ನೀಡಿ ಪರಿಶೀಲನೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts