More

    ಕರೊನಾವನ್ನು ಕೊಲ್ಲುವ ರೋಗ ನಿರೋಧಕ ಶಕ್ತಿ

    ಕರೊನಾವನ್ನು ಕೊಲ್ಲುವ ರೋಗ ನಿರೋಧಕ ಶಕ್ತಿ

    ಕೊಪ್ಪ: ಮುಂಬೈ ಹಾಗೂ ಕೇರಳದಿಂದ ಬಂದವರನ್ನು ಹರಂದೂರು ಗ್ರಾಪಂ ವ್ಯಾಪ್ತಿಯ ಮುರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಬಾಳಗಡಿ ಹಿಂದುಳಿದ ವರ್ಗದ ಹಾಸ್ಟೆಲ್​ನಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಮಹೇಂದ್ರ ಕಿರೀಟಿ ತಿಳಿಸಿದರು.

    ತಾಪಂ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸರ್ವ ಸದಸ್ಯರ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಹೊರ ರಾಜ್ಯ, ಜಿಲ್ಲೆಯಿಂದ ಬಂದವರ ಮೇಲೆ ನಿಗಾ ವಹಿಸಲಾಗಿದೆ ಎಂದರು.

    ಮುಂಬೈನಿಂದ ಬಂದವರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದ್ದು, ಅವರನ್ನು ಚಿಕ್ಕಮಗಳೂರಿನ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು, ಆಶಾ ಕಾರ್ಯಕರ್ತೆಯರ ಆರೋಗ್ಯ, ಸುರಕ್ಷತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗಿದೆ ಎಂದು ಹೇಳಿದರು.

    ಕರೊನಾ ವೈರಸ್ ಕೊಲ್ಲುವ ಶಕ್ತಿ ಭಾರತೀಯರಲ್ಲಿ ಹೆಚ್ಚು. ಇಲ್ಲಿನ ವಾತಾವರಣ, ಆಹಾರ ಪದ್ಧತಿ ರೋಗನಿರೋಧಕ ಶಕ್ತಿಯನ್ನು ಹೆಚ್ಚುಗೊಳಿಸುತ್ತದೆ. ಆದ್ದರಿಂದ ದೇಶದಲ್ಲಿ ಶೇ.80ರಷ್ಟು ಜನರಲ್ಲಿ ಕರೊನಾ ವೈರಸ್ ಬಂದರೂ ಯಾವುದೆ ಲಕ್ಷಣ ಕಾಣಿಸಿಕೊಳ್ಳದೆ ವಾಸಿಯಾಗುತ್ತದೆ. ಶೇ.15ರಷ್ಟು ಜನ ಚಿಕಿತ್ಸೆ ಪಡೆದು ಗುಣಮುಖರಾಗುತ್ತಾರೆ. ಶೇ.5ರಷ್ಟು ಜನರಿಗೆ ಮಾತ್ರ ರೋಗ ನಿರೋಧಕ ಶಕ್ತಿ ಇಲ್ಲದಿರುವುದು, ಯಾವುದಾದರೂ ಕಾಯಿಲೆಗೆ ಮೊದಲೇ ತುತ್ತಾಗಿದ್ದರೆ ಅಂಥವರು ಮೃತಪಡುತ್ತಾರೆ ಎಂದು ತಿಳಿಸಿದರು.

    ತಾಪಂ ಅಧ್ಯಕ್ಷೆ ಜಯಂತಿ ನಾಗರಾಜ್ ಮಾತನಾಡಿ, ಕರೊನಾ ತಡೆಗಟ್ಟುವಲ್ಲಿ ಆರೋಗ್ಯ ಇಲಾಖೆಯೊಂದಿಗೆ ಎಲ್ಲ ಇಲಾಖೆಯೂ ಕೈಜೋಡಿಸಿ ಕಾರ್ಯನಿರ್ವಹಿಸಬೇಕು. ತಾಪಂ ಸದಸ್ಯರು ಎಲ್ಲ ಸಮಯದಲ್ಲೂ ಅಧಿಕಾರಿಗಳೊಂದಿಗೆ ಸ್ಪಂದಿಸಲು ಸಿದ್ಧರಿರುತ್ತಾರೆ. ಗ್ರಾಪಂ ಮಟ್ಟದ ಟಾಸ್ಕ್​ಫೋರ್ಸ್ ಹೆಚ್ಚು ಸಕ್ರಿಯವಾಗಿರುವಂತೆ ಎಚ್ಚರವಹಿಸಬೇಕು ಎಂದು ಹೇಳಿದರು.

    ತಾಪಂ ಉಪಾಧ್ಯಕ್ಷೆ ಲಲಿತಾ, ಸ್ಥಾಯಿ ಸಮಿತಿ ಅಧ್ಯಕ್ಷ ಸುಧಾಕರ್, ಸದಸ್ಯರಾದ ಕಿರಣ್, ಉದಯ್, ಕೃಷ್ಣಯ್ಯ ಶೆಟ್ಟಿ, ಪ್ರವೀಣ್, ಮಧುರಾ ಶಾಂತಪ್ಪ, ಭವಾನಿ ಹೆಬ್ಬಾರ್, ಇಂದಿರಾ ಉಮೇಶ್, ತಾಪಂ ಇಒ ನವೀನ್​ಕುಮಾರ್ ಇದ್ದರು.

    ಎಸ್​ಎಸ್​ಎಲ್​ಸಿ ಪರೀಕ್ಷೆಗೆ ನಾಲ್ಕು ಕೇಂದ್ರ: ಎಸ್​ಎಸ್​ಎಲ್​ಸಿ ಪರೀಕ್ಷೆಗ ತಯಾರಿ ನಡೆಸಲಾಗುತ್ತಿದ್ದು, ತಾಲೂಕಿನಲ್ಲಿ ನಾಲ್ಕು ಸೆಂಟರ್​ಗಳನ್ನು ತೆರೆಯಲಾಗಿದೆ. ಪರಸ್ಪರ ಅಂತರ ಕಾಪಾಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿ ಆರ್.ಡಿ.ರವೀಂದ್ರ ಮಾಹಿತಿ ನೀಡಿದರು. ಮಕ್ಕಳಿಗೆ ಸ್ಯಾನಿಟೈಸರ್ ಹಾಗೂ ಮಾಸ್ಕ್​ಗಳನ್ನು ನೀಡಲು ದಾನಿಗಳಿಗೆ ಮನವಿ ಮಾಡಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ತಾಲೂಕಿನ ಮಕ್ಕಳು ಹೊರ ಜಿಲ್ಲೆಯಲ್ಲಿದ್ದರೆ ಅವರು ಅಲ್ಲಿಂದಲೇ ಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿದೆ ಎಂದರು. ಸರ್ಕಾರದ ಸೂಚನೆಯಂತೆ ಮಕ್ಕಳಿಗೆ ವಾಟ್ಸ್​ಆಪ್ ಗ್ರೂಪ್ ಮೂಲಕ ಪುನರ್ಮನನ ಮಾಡಿಸಲಾಗುತ್ತಿದೆ. ವಾಟ್ಸ್​ಆಪ್ ಇಲ್ಲದ ಮಕ್ಕಳಿಗೆ ದೂರವಾಣಿ ಮೂಲಕ ಕಾನ್ಪರೆನ್ಸ್ ಕೆರೆ ಮಾಡಿ ಪಠ್ಯದ ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts