More

    ಅಮೆಜಾನ್ ಪ್ರೈಂನಲ್ಲಿ ಆಸ್ಕರ್ ಪ್ರಶಸ್ತಿ ಪಡೆದ ಈ ಸಿನಿಮಾ ಈಗ ಲಭ್ಯ!

    3 ದಶಕದ ಹಿಂದಿನ ರಾಮಾಯಣ ಮತ್ತು ಮಹಾಭಾರತ ಪ್ರೇಕ್ಷಕರ ಒತ್ತಾಯದ ಮೇರೆಗೆ ಟಿವಿಯಲ್ಲಿ ಮರುಪ್ರಸಾರ ಆರಂಭಿಸಿವೆ. ಇದೀಗ ಮೊನ್ನೆಯಷ್ಟೇ ಆಸ್ಕರ್ ಪ್ರಶಸ್ತಿ ಪಡೆದ ಕೊರಿಯನ್ ಸಿನಿಮಾ ಓಟಿಟಿ ವೇದಿಕೆಗೆ ಆಗಮಿಸಿದೆ. ಅಂದರೆ, ಅಮೆಜಾನ್ ಪ್ರೈಂಗೆ ಎಂಟ್ರಿಕೊಟ್ಟಿದೆ. ಕಳೆದ ತಿಂಗಳಷ್ಟೇ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದ ಪ್ಯಾರಾಸೈಟ್ ಸಿನಿಮಾ ಎಲ್ಲರ ಗಮನ ಸೆಳೆದಿತ್ತು. ಜನವರಿ 31 ರಂದು ಭಾರತದಲ್ಲಿ ಈ ಚಿತ್ರ ಬಿಡುಗಡೆಯಾದರೂ, ಅಷ್ಟಾಗಿ ಯಾರೂ ಆ ಚಿತ್ರದತ್ತ ಗಮನಹರಿಸಿರಲಿಲ್ಲ. ಆದರೆ, ಈಗ ಕ್ವಾರಂಟೈನ್ ಸಮಯದಲ್ಲಿ ಅಮೆಜಾನ್ ಪ್ರೈಂಗೆ ಪ್ಯಾರಾಸೈಟ್ ಎಂಟ್ರಿಕೊಟ್ಟಿದೆ.
    ಆಸ್ಕರ್ ಪ್ರಶಸ್ತಿಗೆ 92 ವರ್ಷದ ಇತಿಹಾಸವಿದೆ. ಅಲ್ಲಿಂದ ಇಲ್ಲಿಯವರೆಗೂ ಕೇವಲ ಹಾಲಿವುಡ್ ಸಿನಿಮಾಗಳಷ್ಟೇ ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಳ್ಳುತ್ತಿದ್ದವು. ಹೀಗಿರುವಾಗ ಮೊದಲ ಬಾರಿ 2020ರ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ವಿದೇಶಿ ಭಾಷಾ ವಿಭಾಗದಲ್ಲಿ ದಕ್ಷಿಣ ಕೊರಿಯಾ ಮೂಲದ ಪ್ಯಾರಾಸೈಟ್ ಪಡೆದುಕೊಂಡಿತ್ತು. ಬೊಂಗ್ ಜೂನ್ ಹು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಥ್ರಿಲ್ಲರ್ ಕಾಮಿಡಿ ಶೈಲಿಯಲ್ಲಿ ಈ ಸಿನಿಮಾ ಮೂಡಿಬಂದಿತ್ತು. (ಏಜೆನ್ಸೀಸ್)

    ರಾಮಾಯಣದ ಜತೆಗೆ ಮಹಾಭಾರತ ಪ್ರಸಾರವೂ ಶುರು; ಪ್ರತಿದಿನ ಮಧ್ಯಾಹ್ನ 12 ಮತ್ತು ಸಂಜೆ 7ಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts