More

  22ರಿಂದ ಗಂಗಾವತಿಯಲ್ಲಿ ಆರೋಗ್ಯ ರಕ್ಷಣೆ ಕಾರ್ಯಕ್ರಮ

  ಗಂಗಾವತಿ: ಬಡ ಜನರ ಅನುಕೂಲಕ್ಕಾಗಿ ನೇತ್ರ ಶಸ ಚಿಕಿತ್ಸಾ ಉಚಿತ ಶಿಬಿರ ಸೆ.22 ಮತ್ತು 23ರಂದು ಹಮ್ಮಿಕೊಂಡಿದ್ದು, ಆರೋಗ್ಯ ರಕ್ಷಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಲಯನ್ಸ್ ಕ್ಲಬ್ ತಾಲೂಕು ಘಟಕದ ಕಾರ್ಯದರ್ಶಿ ರವಿ ಚೈತನ್ಯರೆಡ್ಡಿ ಹೇಳಿದರು.

  ಭಾರತೀಯ ವೈದ್ಯಕೀಯ ಸಂಘ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಅಂಧತ್ವ ನಿವಾರಣ ಸಂಸ್ಥೆ ಮತ್ತು ಉಪವಿಭಾಗ ಆಸ್ಪತ್ರೆ ಸಹಯೋಗದೊಂದಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಸೆ.22ರಂದು ನಗರದ ಲಯನ್ಸ್ ಕ್ಲಬ್ ಮತ್ತು ಐಎಂಎ ಹಾಲ್‌ನಲ್ಲಿ ಕಣ್ಣಿನ ತಪಾಸಣೆ ನಡೆಯುತ್ತಿದ್ದು, 23ರಂದು ಉಪವಿಭಾಗ ಆಸ್ಪತ್ರೆಯಲ್ಲಿ ಶಸ ಚಿಕಿತ್ಸೆ ನಡೆಸಲಾಗುವುದೆಂದು ಬುಧವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

  ಬೆಂಗಳೂರಿನ ಸ್ವಾಮಿ ವಿವೇಕಾನಂದ ಸೇವಾಶ್ರಮ ಕಣ್ಣಿನ ಆಸ್ಪತ್ರೆಯ ವೈದ್ಯರ ತಂಡ ತಪಾಸಣೆ ನಡೆಸಲಿದೆ. ತಪಾಸಣೆ ಮತ್ತು ಶಸ ಚಿಕಿತ್ಸೆಗೆ ಆಗಮಿಸುವ ಜನರಿಗೆ ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. 250 ಜನರಿಗೆ ಶಸ ಚಿಕಿತ್ಸೆ ನಡೆಸುವ ಗುರಿಯಿದೆ ಎಂದರು.

  ಅಧ್ಯಕ್ಷ ಡಾ.ಅಮರೇಶ ಪಾಟೀಲ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸಾಂಕ್ರಾಮಿಕ ರೋಗ ಮತ್ತು ಕ್ಯಾನ್ಸರ್‌ದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಅಭಿಯಾನದ ಬಗ್ಗೆ ಆರೋಗ್ಯ ರಕ್ಷಣೆಯತ್ತ ಗಮನಹರಿಸಲಾಗುವುದು. ಕಣ್ಣಿನ ತಪಾಸಣೆ ಮತ್ತು ಶಸ ಚಿಕಿತ್ಸೆಯ ಉಚಿತ ಆಸ್ಪತ್ರೆ ನಿರ್ಮಾಣಕ್ಕಾಗಿ ಭೂಮಿ ಪಡೆದಿದ್ದು, ಶೀಘ್ರವೇ ಕಟ್ಟಡ ನಿರ್ಮಿಸಲಾಗುವುದು ಎಂದರು.

  ಪದಾಧಿಕಾರಿಗಳಾದ ಜೀವನಕುಮಾರ, ಚೇತನ ಹಿರೇಮಠ, ಸತೀಶ ಭೋಜಶೆಟ್ಟರ್, ಚಂದ್ರೇಗೌಡ ಪೊ.ಪಾಟೀಲ್, ರಾಘವೇಂದ್ರ ಶಿರಿಗೇರಿ, ಎಸ್.ಜಿ.ಬಾಹುಬಲಿ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts