More

    ಮಧ್ಯಪ್ರದೇಶ ರಾಜಕೀಯ ಹೈಡ್ರಾಮ: ಹೋಟೆಲ್​ಗೆ ತೆರಳಿದ್ದ 10ರಲ್ಲಿ ಆರು ಶಾಸಕರು ವಾಪಸ್​​

    ಭೋಪಾಲ್​: ಮಂಗಳವಾರ ಮಧ್ಯರಾತ್ರಿ ಮಧ್ಯಪ್ರದೇಶ ರಾಜ್ಯ ರಾಜಕೀಯದಲ್ಲಿ ಭಾರಿ ಹೈಡ್ರಾಮ ನಡೆದಿದೆ. ಸಿಎಂ ಕಮಲ್​ನಾಥ್​ ನೇತೃತ್ವದ ಕಾಂಗ್ರೆಸ್​ ಸರ್ಕಾರ ಉರುಳಿಸಲು 10 ಶಾಸಕರನ್ನು ಬಿಜೆಪಿ ಸೆಳೆದು ಗುರುಗ್ರಾಮದ ಲಕ್ಷುರಿ ಹೋಟೆಲ್​ನಲ್ಲಿ ಬಂಧಿಸಿದೆ ಎಂದು ಕಾಂಗ್ರೆಸ್​ ಆರೋಪಿಸಿದ ಬೆನ್ನಲ್ಲೇ ತನ್ನ ಆರು ಶಾಸಕರನ್ನು ಮರಳಿ ಕರೆತರುವಲ್ಲಿ ಕಾಂಗ್ರೆಸ್​ ಯಶಸ್ವಿಯಾಗಿದೆ.

    ಒಟ್ಟು 10 ಮಂದಿಯಲ್ಲಿ ಉಳಿದಿರುವ ನಾಲ್ವರು ಪಕ್ಷೇತರರು ಬಿಜೆಪಿ ವಶದಲ್ಲಿದ್ದಾರೆ. ಆದರೂ ಅವರೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಎಂದು ಕಾಂಗ್ರೆಸ್​ ನಾಯಕ ಜೈವರ್ಧನ್​ ಸಿಂಗ್​ ಹೇಳಿಕೆ ನೀಡಿದ್ದು, ಹೋಟೆಲ್​ನಲ್ಲಿ ಬಿಜೆಪಿ ನಾಯಕ ನರೋತ್ತಮ ಮಿಶ್ರಾ ಕೂಡ ಇದ್ದಾರೆಂದು ತಿಳಿಸಿದ್ದಾರೆ.

    ಶಾಸಕರನ್ನು ಭೇಟಿ ಮಾಡಲು ಕಾಂಗ್ರೆಸ್​ ಸಚಿವರು ಹೋದಾಗ ಬಿಎಸ್​ಪಿ ಶಾಸಕಿ ರಮಾಬಾಯಿ ಅವರು ಹಲ್ಲೆಗೆ ಯತ್ನಿಸಿದರು ಎಂದು ಕಾಂಗ್ರೆಸ್​ ಆರೋಪಿಸಿದೆ. ಶಾಸಕರನ್ನು ಕರೆತರಲು ಜೀತು ಪಟ್ವಾರಿ ಮತ್ತು ಜೈವರ್ಧನ್​ ಸಿಂಗ್​ ಗುರುಗ್ರಾಮದ ಹೋಟೆಲ್​ಗೆ ತೆರಳಿದ್ದರು. ನಮ್ಮೊಂದಿಗೆ ಸಂಪರ್ಕದಲ್ಲಿದ್ದ ಶಾಸಕರು ನಮ್ಮೊಂದಿಗೆ ವಾಪಸ್​ ಬರಲು ತಯಾರಿದ್ದರು. ಕರೆತರುವ ವೇಳೆ ರಮಾಬಾಯಿ ನಮ್ಮವರನ್ನು ತಡೆದು ಹಲ್ಲೆಗೆ ಮುಂದಾದರು ಎಂದು ಕಾಂಗ್ರೆಸ್​ ಹಿರಿಯ ನಾಯಕ ದಿಗ್ವಿಜಯ ಸಿಂಗ್​ ದೂರಿದ್ದಾರೆ.

    ಇದನ್ನೂ ಓದಿ: VIDEO| ಮಧ್ಯಪ್ರದೇಶದಲ್ಲಿ ರಾತ್ರೋ ರಾತ್ರಿ ರಾಜಕೀಯ ಕ್ಷಿಪ್ರಕ್ರಾಂತಿ: ಸಿಎಂ ಕಮಲ್​ನಾಥ್​ ಸರ್ಕಾರಕ್ಕೆ ಆಪತ್ತು

    ಉಳಿದ ಶಾಸಕರ ಜತೆಯಲ್ಲಿಯೂ ಸಂಪರ್ಕದಲ್ಲಿದ್ದೇವೆ. ಅವರು ಕೂಡ ಮರಳಿ ಬರುವ ವಿಶ್ವಾಸದಲ್ಲಿದ್ದೇವೆ ಎಂದು ದಿಗ್ವಿಜಯ ಸಿಂಗ್​ ಹೇಳಿದರು. ಬಿಎಸ್​ಪಿ ಶಾಸಕಿ ರಮಾಬಾಯಿ ಅವರನ್ನು ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಕಳೆದ ಡಿಸೆಂಬರ್​ನಲ್ಲೇ ಅಮಾನತು ಮಾಡಿದ್ದಾರೆ.

    ದಿಢೀರ್​ ಬೆಳವಣಿಗೆ ಬಗ್ಗೆ ಸಿಎಂ ಕಮಲ್​ನಾಥ್​ ಮಾಡಿ, ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲಿದೆ. ಎಲ್ಲ ಶಾಸಕರು ಮರಳಿ ಬರಲಿದ್ದಾರೆ ಎಂದು ತಿಳಿಸಿದ್ದಾರೆ.

    ನಮ್ಮ ಶಾಸಕರನ್ನು ಸೆಳೆಯಲು ಬಿಜೆಪಿ ಆಮಿಷವೊಡ್ಡುತ್ತಿದೆ ಎಂದು ಇದಕ್ಕೂ ಮುಂಚೆಯೇ ಕಾಂಗ್ರೆಸ್​ ನಾಯಕ ದಿಗ್ವಿಜಯ ಸಿಂಗ್​ ಆರೋಪಿಸಿದ್ದರು. ಮಾಜಿ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಮತ್ತು ನರೋತ್ತಮ್​ ಮಿಶ್ರಾ ಕಾಂಗ್ರೆಸ್​ ಶಾಸಕರಿಗೆ ಸುಮಾರು 25 ರಿಂದ 35 ಕೋಟಿ ರೂ. ಆಮಿಷವೊಡ್ಡುತ್ತಿದ್ದಾರೆ ಎಂದು ದಿಗ್ವಿಜಯ ಸಿಂಗ್​ ದೂರಿದ್ದಾರೆ. ಆದರೆ, ಬಿಜೆಪಿ ದಿಗ್ವಿಜಯ ಸಿಂಗ್​ ದೂರನ್ನು ಅಲ್ಲಗೆಳೆದಿದ್ದಾರೆ.

    ಮಧ್ಯಪ್ರದೇಶಲ್ಲಿ ಒಟ್ಟು 230 ವಿಧಾನಸಭಾ ಸ್ಥಾನಗಳಿದ್ದು, ಇಬ್ಬರು ಶಾಸಕ ಮರಣದಿಂದ 228ಕ್ಕೆ ಇಳಿದಿದೆ. ಅದರಲ್ಲಿ ಮ್ಯಾಜಿಕ್​ ನಂಬರ್​ಗೆ 215 ಸ್ಥಾನಗಳು ಬೇಕಾಗಿದ್ದು, ಸದ್ಯ ಕಾಂಗ್ರೆಸ್​ 114, ಬಿಜೆಪಿ 107 ಚುನಾಯಿತ ಪ್ರತಿನಿಧಿಗಳನ್ನು ಹೊಂದಿದೆ. ಉಳಿದಂತೆ ಬಿಎಸ್​ಪಿ 2, ಎಸ್​ಪಿ 1 ಹಾಗೂ ಪಕ್ಷೇತರರು ನಾಲ್ವರು ಶಾಸಕರಿದ್ದು, ದಿಢೀರ್​ ಬೆಳವಣಿಗೆಯಿಂದ ಮಧ್ಯಪ್ರದೇಶ ರಾಜಕೀಯ ಯಾವೆಲ್ಲಾ ತಿರುವುಗಳು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts