More

    ಸೈಬರ್ ಕ್ರೈಂ ವಿರುದ್ಧ ಸಿಬಿಐಯಿಂದ ಆಪರೇಷನ್ ಚಕ್ರ-2 ಅಸ್ತ್ರ

    ಬೆಂಗಳೂರು: ಸಂಘಟಿತ ಸೈಬರ್ ಕ್ರೈಂ ತೊಡೆದು ಹಾಕಲು ಸಿಬಿಐ ‘ಆಪರೇಷನ್ ಚಕ್ರ-2’ ಅನ್ನು ಕರ್ನಾಟಕ, ಉತ್ತರ ಪ್ರದೇಶ ಸೇರಿ ರಾಷ್ಟ್ರವ್ಯಾಪಿ 76 ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿದೆ.

    ಅಂತಾರಾಷ್ಟ್ರೀಯ ಸಂಘಟಿತ ಸೈಬರ್ ಅಪರಾಧ ಜಾಲಗಳ ವಿರುದ್ಧ ಕಾರ್ಯಾಚರಣೆಯನ್ನು ಸಿಬಿಐ ಮುಂದುವರಿಸಿದೆ. ಸೈಬರ್ ಕ್ರೈಂ ಮತ್ತು ಆರ್ಥಿಕ ಅಪರಾಧಗಳನ್ನು ತೊಡೆದು ಹಾಕಲು ಖಾಸಗಿ ಸಂಸ್ಥೆಗಳು ಮತ್ತು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಏಜೆನ್ಸಿಗಳ ಸಹಯೋಗದೊಂದಿಗೆ ಗುರುವಾರ ದೇಶವ್ಯಾಪಿ ಕಾರ್ಯಾಚರಣೆ ನಡೆಸಲಾಗಿದೆ.

    ಮಧ್ಯಪ್ರದೇಶ, ಉತ್ತರ ಪ್ರದೇಶ, ಕರ್ನಾಟಕ, ಹರಿಯಾಣ, ಕೇರಳ, ತಮಿಳುನಾಡು, ಪಂಜಾಬ್, ಬಿಹಾರ, ದೆಹಲಿ, ಪಶ್ಚಿಮ ಬಂಗಾಳ ಮತ್ತು ಹಿಮಾಚಲಪ್ರದೇಶ ಸೇರಿ 76 ಸ್ಥಳಗಳಲ್ಲಿ 5 ಪ್ರಕರಣ ಸಂಬಂಧ ಸಿಬಿಐ ತೀವ್ರ ಶೋಧ ನಡೆಸಿದೆ. 32 ಮೊಬೈಲ್, 48 ಲ್ಯಾಪ್‌ಟಾಪ್,ಹಾರ್ಡ್ ಡಿಸ್ಕ್, 2 ಸರ್ವರ್ ಇಮೇಜ್, 33 ಸಿಮ್ ಕಾರ್ಡ್, ಪೆನ್‌ಡ್ರೈವ್ ಮತ್ತು ಹಲವು ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಸಿಬಿಐ 15 ಇಮೇಲ್ ಖಾತೆಗಳ ದತ್ತಾಂಶವನ್ನು ವಶಕ್ಕೆ ಪಡೆದು ಸೈಬರ್ ಕಳ್ಳರ ಜಾಲವನ್ನು ಪತ್ತೆಹಚ್ಚಿದೆ.

    ಅಂತಾರಾಷ್ಟ್ರೀಯ ಐಟಿ ಕಂಪನಿಗಳು ವಂಚನೆ ಜಾಲಕ್ಕೆ ಬೆಂಬಲಿಸಿವ ಹಗರಣ ಬೆಳಕಿಗೆ ಬಂದಿವೆ. ಆನ್‌ಲೈನ್ ವ್ಯಾಪಾರ ವೇದಿಕೆ ಮತ್ತು ಬಹುರಾಷ್ಟ್ರೀಯ ಸಂಸ್ಥೆಗಳಂತೆ ನಟಿಸಿ ಮೋಸ ಮಾಡುತ್ತಿದ್ದಾರೆ. 5 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 9 ಕಾಲ್ ಸೆಂಟರ್‌ಗಳನ್ನು ಸ್ಥಾಪಿಸಿ ತಾಂತ್ರಿಕ ಬೆಂಬಲ ಮತ್ತು ಪ್ರತಿನಿಧಿಗಳನ್ನು ಬಳಸಿಕೊಂಡು ವಿದೇಶಿ ಪ್ರಜೆಗಳನ್ನು ಮೋಸ ಮಾಡುತ್ತಿದ್ದ ಜಾಲ ಬೆಳಕಿಗೆ ಬಂದಿದೆ.

    ಇದಲ್ಲದೆ, ಎಫ್‌ಐಯು ಇಂಡಿಯಾ ಸಂಸ್ಥೆ ನೀಡಿದ ಗುಪ್ತಚರ ಮಾಹಿತಿಯಿಂದ ಆಪರೇಷನ್ ಚಕ್ರ-2 ಕಾರ್ಯಾಚರಣೆಯಲ್ಲಿ ಕ್ರಿಪ್ರೋ ಕರೆನ್ಸಿ ವಂಚನೆ ಜಾಲವನ್ನು ಭೇದಿಸಲಾಗಿದೆ. ನಕಲಿ ಕ್ರಿಪ್ಟೋ ಜಾಲದ ಸೈಬರ್ ಕಳ್ಳರು ಭಾರತೀಯ ನಾಗರಿಕರನ್ನು ಟಾರ್ಗೆಟ್ ಮಾಡಿ ಮೋಸ ಮಾಡುತ್ತಿದ್ದರು. ಪರಿಣಾಮ ದೇಶದ ಸಂತ್ರಸ್ತರಿಗೆ 100 ಕೋಟಿ ರೂಪಾಯಿಗೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

    ಸಂತ್ರಸ್ತರ ಪತ್ತೆಹಚ್ಚಿ ಸಹಾಯ

    ಆಪರೇಷನ್ ಚಕ್ರ-2 ಕಾರ್ಯಾಚರಣೆಯಲ್ಲಿ ಸಂಗ್ರಹಿಸಿದ ಪುರಾವೆಗಳ ಆಧಾರದ ಮೇಲೆ ಸಂತ್ರಸ್ತರ ವಿವರ ಸಂಗ್ರಹ ಮಾಡಲಾಗುತ್ತದೆ. ಕಾನೂನಬಾಹಿರ ದಲ್ಲಾಳಿಗಳು, ಆರೋಪಿತ ವಿರುದ್ಧ ಕ್ರಮ ಕೈಗೊಳ್ಳಲು ಅಂತಾರಾಷ್ಟ್ರೀಯ ಕಾನೂನು ಜಾರಿ ಸಂಸ್ಥೆಗಳ ನೆರವು ಪಡೆಯಲಾಗುತ್ತದೆ.

    ಅಂತಾರಾಷ್ಟ್ರೀಯ ಸಂಸ್ಥೆಗಳ ನೆರವು

    ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್, ಸೈಬರ್ ಕ್ರೈಂ ಡೈರೆಕ್ಟರೇಟ್ ಆ್ಯಂಡ್ ಐಎ್ಸಿಎಸಿಸಿ ಇಂಟರ್ಪೋಲ್, ಯುನೈಟೆಡ್ ಕಿಂಗ್‌ಡಮ್ ನ್ಯಾಷನಲ್ ಕ್ರೈಂ ಏಜೆನ್ಸಿ, ಸಿಂಗಾಪುರ್ ಪೊಲೀಸ್ ಮತ್ತು ಜರ್ಮನಿಯ ಬಿಕೆಎ ಸೇರಿ ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಗಳು ಹಾಗೂ ಅಂತಾರಾಷ್ಟ್ರೀಯ ಪೊಲೀಸರ ಸಹಕಾರದಲ್ಲಿ ಸಿಬಿಐ ಆಪರೇಷನ್ ಚಕ್ರ-2 ನಡೆಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts