More

    ರಾಹುಲ್​-ಡಿಕಾಕ್​ ಕ್ಲಾಸ್​, ಸೂಪರ್​ ಕಿಂಗ್ಸ್​ ಶಾಕ್​ : ಸಿಎಸ್​ಕೆಗೆ ಸೋಲು

    ಲಖನೌ: ನಾಯಕ, ಕನ್ನಡಿಗ ಕೆಎಲ್​ ರಾಹುಲ್​ (82 ರನ್​, 53 ಎಸೆತ, 9 ಬೌಂಡರಿ, 3 ಸಿಕ್ಸರ್​) ಹಾಗೂ ಎಡಗೈ ಬ್ಯಾಟರ್​ ಕ್ವಿಂಟನ್​ ಡಿಕಾಕ್​ (54 ರನ್​, 43 ಎಸೆತ, 5 ಬೌಂಡರಿ, 1 ಸಿಕ್ಸರ್​) ಭರ್ಜರಿ ಬ್ಯಾಟಿಂಗ್​ ನೆರವಿನಿಂದ ಲಖನೌ ಸೂಪರ್​ ಜೈಂಟ್ಸ್​ ತಂಡ ಐಪಿಎಲ್​&17ರಲ್ಲಿ ಹಾಲಿ ಚಾಂಪಿಯನ್​ ಚೆನ್ನೆ$ ಸೂಪರ್​ ಕಿಂಗ್ಸ್​ ತಂಡವನ್ನು 8 ವಿಕೆಟ್​ಗಳಿಂದ ಮಣಿಸಿದೆ. ಇದರೊಂದಿಗೆ ರಾಹುಲ್​ ಪಡೆ ಜಯದ ಹಾದಿಗೆ ಮರಳಿದ್ದು, ಋತುರಾಜ್​ ಗಾಯಕ್ವಾಡ್​ ಬಳಗ ಮೂರನೇ ಸೋಲಿನ ನಡುವೆಯೂ 3ನೇ ಸ್ಥಾನ ಕಾಯ್ದುಕೊಂಡಿದೆ.

    ಏಕನಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಸಿಎಸ್​ಕೆ, 90 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡಿತು. ಆಗ ಜತೆಯಾದ ಆಲ್ರೌಂಡರ್​ ರವೀಂದ್ರ ಜಡೇಜಾ (57* ರನ್​, 40 ಎಸೆತ, 5 ಬೌಂಡರಿ, 1 ಸಿಕ್ಸರ್​)&ಮೊಯಿನ್​ ಅಲಿ (30) ಜತೆಯಾಟ ಹಾಗೂ ಕೊನೆಯಲ್ಲಿ ಎಂಎಸ್​ ಧೋನಿ (28* ರನ್​, 9 ಎಸೆತ, 3 ಬೌಂಡರಿ, 2 ಸಿಕ್ಸರ್​) ಚಿನಕುರುಳಿ ಆಟದ ಬಲದಿಂದ 6 ವಿಕೆಟ್​ಗೆ 176 ರನ್​ಗಳ ಪೈಪೋಟಿಯುತ ಮೊತ್ತ ಕಲೆಹಾಕಿತು. ಪ್ರತಿಯಾಗಿ ರಾಹುಲ್​&ಡಿಕಾಕ್​ ಒದಗಿಸಿದ ಭದ್ರ ಅಡಿಪಾಯದ ನೆರವಿನಿಂದ 19 ಓವರ್​ಗಳಲ್ಲಿ 2 ವಿಕೆಟ್​ಗೆ 180 ರನ್​ಗಳಿಸಿ ಸುಲಭ ಗೆಲುವು ಕಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts