More

    ಉಡುಪಿಯ ಏಕೈಕ ಪಾರಂಪರಿಕ ಕಟ್ಟಡ ನೆಲಸಮಕ್ಕೆ ಆದೇಶ; ಕಾಂತಾರ ಶೂಟಿಂಗ್​ ನಡೆದದ್ದೂ ಇಲ್ಲೇ!

    ಉಡುಪಿ: ಉಡುಪಿಯಲ್ಲಿರುವ ಏಕೈಕ ಪಾರಂಪರಿಕ ಕಟ್ಟಡವನ್ನು ನೆಲಸಮ ಮಾಡುವಂತೆ ನಗರಸಭೆ ಆದೇಶ ಹೊರಡಿಸಿದೆ.

    ಉಡುಪಿಯ ಏಕೈಕ ಪಾರಂಪರಿಕ ಕಟ್ಟಡವನ್ನು ಸ್ವಾತಂತ್ರ ಪೂರ್ವದಲ್ಲಿ ನಿರ್ಮಿಸಲಾಗಿದ್ದು ಇದಕ್ಕೆ ಸರಿಸುಮಾರು 117 ವರ್ಷಗಳ ಇತಿಹಾಸ ಇದೆ. ಅಂದ ಹಾಗೆ ಇದು ಉಡುಪಿಯ ಹಳೆ ಸಬ್‌ಜೈಲು. ನಗರಸಭೆಯ ಈ ಕ್ರಮಕ್ಕೆ ಆರ್ಕಿಟೆಕ್ಟ್‌ಗಳು ಹಾಗೂ ಕಲಾವಿದರಿಂದ ಭಾರಿ ವಿರೋಧ ವ್ಯಕ್ತವಾಗಿದೆ.

    ಇದನ್ನೂ ಓದಿ: ಕಾಂತಾರ ಸಿನಿಮಾದಲ್ಲಿ ರಿಷಬ್​​ ಪತ್ನಿ ಉಟ್ಟಿದ್ದ 32ವರ್ಷ ಹಳೆಯ ಸೀರೆ!

    ನಗರಸಭೆ, ಹೊಸ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲು ಮುಂದಾಗಿದ್ದು ಅದಕ್ಕಾಗಿ ಪಾರಂಪರಿಕ ಜೈಲನ್ನು‌ ಕೆಡವಲು ಮುಂದಾಗಿದೆ. ಸದ್ಯ ಕಟ್ಟಡದ ರಚನೆಯ ದಾಖಲೀಕರಣ ಕಾರ್ಯವನ್ನು ಇಂಡಿಯನ್ ನ್ಯಾಶನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್(ಇಂಟ್ಯಾಕ್) ಮಂಗಳೂರು ಶಾಖೆ ಮಾಡುತ್ತಿದೆ.

    ಉಡುಪಿ, ಮಂಗಳೂರಿನ 12 ಕಲಾವಿದರು ಕಟ್ಟಡದ ಕಲಾಕೃತಿಗಳನ್ನು ರಚಿಸಿ ಜಾಗೃತಿ ಮೂಡಿಸುತ್ತಿದ್ದು ಪರ್ಯಾಯವಾಗಿ ಮ್ಯೂಸಿಯಂ, ಪಾರಂಪರಿಕ ವಸ್ತುಸಂಗ್ರಹಾಲಯ ಮಾಡಲು ಒತ್ತಾಯ ಮಾಡುತ್ತಿದ್ದಾರೆ. ಕಲಾವಿದರಲ್ಲದೇ, ಉಡುಪಿಯ ನಾಗರಿಕರೂ ಕಟ್ಟಡ ನೆಲಸಮಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

    ಇದನ್ನೂ ಓದಿ: ವಿಶ್ವಸಂಸ್ಥೆಯಲ್ಲೂ ‘ಕಾಂತಾರ’ ಹವಾ; ಭಾರತದ ಪ್ರತಿನಿಧಿಯಾಗಿ ಕನ್ನಡದಲ್ಲೇ ಮಾತನಾಡಿದ ರಿಷಬ್​ ಶೆಟ್ಟಿ

    ಇದೇ ಜೈಲಿನಲ್ಲಿ ಕಾಂತಾರ ಸಿನಿಮಾ ಚಿತ್ರೀಕರಣಗೊಂಡಿದ್ದು!

    ಇದೀಗ ಉಡುಪಿ ನಗರಸಭೆ ಕೆಡವಲು ಮುಂದಾಗಿರುವ ಜೈಲು ಕಟ್ಟಡದಲ್ಲೇ ಜಗತ್ತಿನಾದ್ಯಂತ ಸದ್ದು ಮಾಡಿದ್ದ ಕಾಂತಾರ ಸಿನಿಮಾ ಚಿತ್ರೀಕರಣಗೊಂಡಿತ್ತು. ಕಾಂತಾರ ಚಿತ್ರದ ಪಾತ್ರ ಶಿವ, ಬಂಧಿತನಾಗಿದ್ದಾಗ ಇದೇ ಜೈಲಿನಲ್ಲಿ ವಾಸವಿದ್ದ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts