More

    ಆನ್‌ಲೈನ್ ವಂಚಕರ ದಂಧೆ ಜೋರು : ಗೂಗಲ್, ಫೋನ್ ಪೇ ಮೂಲಕ ಹಣ ಕಳಿಸಲು ಮನವಿ

    ಚನ್ನಪಟ್ಟಣ : ಗಣ್ಯರ ಹಾಗೂ ಸಾರ್ವಜನಿಕರ ಹೆಸರಿನಲ್ಲಿ ನಕಲಿ ಮುಖಪುಟ ತೆರೆದು ಹಣ ಕೀಳುವ ಆನ್‌ಲೈನ್ ಖದೀಮರ ದಂಧೆ ಜೋರಾಗಿ ನಡೆಯುತ್ತಿದೆ.
    ಫೇಸ್‌ಬುಕ್ ಮೆಸೆಂಜರ್ ಮೂಲಕ ಸಂದೇಶ ಕಳುಹಿಸಿ ಹಣ ಕೀಳುವ ಜಾಲವೊಂದು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಹಲವಾರು ತಿಂಗಳಿಂದ ಇದು ವ್ಯಾಪಕವಾಗಿದೆ. ಸಮಾಜದಲ್ಲಿನ ಪ್ರತಿಷ್ಠಿತರು, ಗಣ್ಯವ್ಯಕ್ತಿಗಳು ಹಾಗೂ ಫೇಸ್‌ಬುಕ್ ಹೆಚ್ಚಾಗಿ ಬಳಸುವ ಸಾರ್ವಜನಿಕರ ಮುಖಪುಟವನ್ನು ನಕಲಿ ಮಾಡುವ ಈ ತಂಡ, ನಕಲಿ ಅಕೌಂಟ್ ಮೂಲಕ, ಸಂದೇಶ ಕಳಿಸಿ, ತುರ್ತಾಗಿ ಹಣದ ಅವಶ್ಯಕತೆ ಇದ್ದು, ಗೂಗಲ್ ಅಥವಾ ಫೋನ್ ಪೆೇ ಮೂಲಕ ಹಣ ಕಳುಹಿಸುವಂತೆ ಮನವಿ ಮಾಡುತ್ತಿದ್ದಾರೆ.

    ಸಮಾಜದಲ್ಲಿ ಪ್ರತಿಷ್ಠತ ವ್ಯಕ್ತಿಗಳ ಮುಖಪುಟವನ್ನೆ ಟಾರ್ಗೆಟ್ ಮಾಡುತ್ತಿರುವ ಈ ತಂಡ, ಅವರ ಸ್ನೇಹಿತರ ಪಟ್ಟಿಯಲ್ಲಿರುವ ಮಂದಿಗೆ ಮೊದಲು ಹಾಯ್, ಹಲೋ, ಹೇಗಿದ್ದೀರಾ ಎಂಬ ಸಂದೇಶ ಕಳಿಸುತ್ತಾರೆ. ಆ ಕಡೆಯಿಂದ ಪ್ರತಿಕ್ರಿಯೆ ಬಂದ ತಕ್ಷಣ ನೇರವಾಗಿ ವಿಷಯಕ್ಕೆ ಬರುವ ಖದೀಮರು, ನನಗೆ ತುರ್ತು ಹಣದ ಅವಶ್ಯಕತೆಯಿದೆ. ನಿಮ್ಮ ಗೂಗಲ್ ಅಥವಾ ಫೋನ್ ಪೇ ಮೂಲಕ ಹಣ ಕಳಿಸಿ. ನನ್ನ ಬ್ಯಾಂಕ್ ಖಾತೆ ಕೆಲಸ ನಿರ್ವಹಿಸುತ್ತಿಲ್ಲ ಎಂದು ಪುಸಲಾಯಿಸುವ ಕೆಲಸ ಮಾಡುತ್ತಿದ್ದಾರೆ. ಕೆಲವರು ಗಣ್ಯವ್ಯಕ್ತಿಗಳ ದಿಢೀರ್ ಸಂದೇಶದಿಂದ ಪುಳಕಗೊಂಡು ಯಮಾರಿರುವ ಉದಾಹರಣೆಗಳಿವೆ.

    ಗಣ್ಯರೇ ಟಾರ್ಗೆಟ್ ಯಾಕೆ?: ಸಾಮಾನ್ಯವಾಗಿ ಸಮಾಜದ ಬಹುತೇಕ ಗಣ್ಯರು ಮುಖಪುಟವನ್ನು ಬಳಸುತ್ತಿದ್ದಾರೆ. ಗಣ್ಯರು ಏನೋ ತುರ್ತು ಇರುವ ಕಾರಣಕ್ಕಾಗಿ ಈ ರೀತಿ ಸಹಾಯ ಕೇಳುತ್ತಿರಬಹುದು ಎಂದು ಯಾಮಾರುತ್ತಾರೆ ಎಂಬುದು ಖದೀಮರ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ವೈದ್ಯರು, ಸರ್ಕಾರಿ ಅಧಿಕಾರಿಗಳು ಸೇರಿದಂತೆ ಹಲವರ ಖಾತೆಗಳನ್ನು ಹ್ಯಾಕ್ ಮಾಡಿದ್ದಾರೆ.

    ಎಂಎಲ್‌ಸಿ ಪುಟ್ಟಣ್ಣ ಮುಖಪುಟವೂ ನಕಲಿ: ತಾಲೂಕಿನ ಕಾಡಂಕನಹಳ್ಳಿ ಗ್ರಾಮದವರಾದ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರ ೇಸ್‌ಬುಕ್ ಪುಟವನ್ನು ಈ ವಂಚಕರ ತಂಡ ನಕಲಿ ಮಾಡಿದೆ. ಈ ಮೂಲಕ ಹಲವರಿಗೆ ಹಣ ಸಹಾಯ ಮಾಡುವಂತೆ ಸಂದೇಶಗಳು ಹೋಗಿವೆ. ಕೂಡಲೇ ಈ ವಿಚಾರವನ್ನು ಅರಿತ ಅವರು, ತಮ್ಮ ಅಸಲಿ ಮುಖಪುಟದ ಮೂಲಕ ನನ್ನ ಫೇಸ್‌ಬುಕ್ ಪುಟವನ್ನು ನಕಲಿ ಮಾಡಿ, ಹಣ ಕೇಳುತ್ತಿದ್ದಾರೆ. ಇದಕ್ಕೆ ಯಾರು ಕೂಡ ಪ್ರತಿಕ್ರಿಯಿಸಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

    ಎಚ್ಚರಿಕೆ ಅವಶ್ಯಕ: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಫೇಸ್‌ಬುಕ್‌ಗೆ ಹೆಚ್ಚಾಗಿ ಆಂಟಿಕೊಂಡಿದ್ದಾರೆ. ಬಳಕೆದಾರರು ನಿಗಾವಹಿಸಬೇಕಾಗಿದೆ. ಯಾವುದೇ ರೀತಿಯ ಸಂದೇಶಗಳು ಬಂದ ಕೂಡಲೇ, ಸಂಬಂಧಪಟ್ಟವರ ದೂರವಾಣಿಗೆ ಕರೆ ಮಾಡಿ ವಿಚಾರ ಮುಟ್ಟಿಸಬೇಕಾದ ಅವಶ್ಯಕತೆಯಿದೆ. ಅಲ್ಲದೆ, ಪೊಲೀಸರಿಗೆ ದೂರು ನೀಡಬೇಕಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts