More

  ದಾಖಲೆ ಸೃಷ್ಟಿಸಿದ ಈರುಳ್ಳಿ; 8 ತಿಂಗಳಲ್ಲಿ 1,000 ಕೋಟಿ ರೂ. ವಹಿವಾಟು, 58 ಲಕ್ಷ ಕ್ವಿಂಟಾಲ್ ಆವಕ 

  ಕಳೆದೆರಡು ತಿಂಗಳುಗಳಿಂದ ಬೆಲೆ ಗಗನಕ್ಕೇರಿ ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ್ದ ಈರುಳ್ಳಿ, ಈಗ ಮತ್ತೊಂದು ದಾಖಲೆಗೆ ಬರೆದಿದೆ. ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಕಳೆದ 8 ತಿಂಗಳಲ್ಲಿ 58 ಲಕ್ಷ ಕ್ವಿಂಟಾಲ್ ಈರುಳ್ಳಿ ಆವಕವಾಗಿದ್ದು, ಇದರಿಂದ ಒಟ್ಟು 1 ಸಾವಿರ ಕೋಟಿ ರೂ.ಗೂ ಹೆಚ್ಚು ವಹಿವಾಟು ನಡೆದಿದೆ. ಕಳೆದ 3 ವರ್ಷಗಳಿಗೆ ಹೊಲಿಸಿದರೆ ಈ ಬಾರಿ ಅತಿ ಹೆಚ್ಚು ವಹಿವಾಟು ನಡೆದಿದೆ ಎಂದು ಎಪಿಎಂಸಿ ಜಂಟಿ ನಿರ್ದೇಶಕ ರಮೇಶ್ ತಿಳಿಸಿದ್ದಾರೆ.

  ನೆರೆ ನಡುವೆಯೂ ಉತ್ತಮ ವಹಿವಾಟು: ರಾಜ್ಯದ ಹಲವೆಡೆ ನೆರೆಹಾವಳಿಯಿಂದಾಗಿ ಈರುಳ್ಳಿ ಸಮರ್ಪಕವಾಗಿ ಮಾರುಕಟ್ಟೆಗೆ ಅವಕವಾಗದೆ ಸಾಕಷ್ಟು ಬೇಡಿಕೆ ಯುಂಟಾಗಿತ್ತು.ಹೀಗಾಗಿ ಹೊರ ರಾಜ್ಯಗಳಾದ ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ ಹಾಗೂ ಈಜಿಫ್ಟ್, ಟರ್ಕಿಗಳಿಂದಲೂ ಈರುಳ್ಳಿಯನ್ನು ಆಮದು ಮಾಡಿಕೊಳ್ಳಾಗಿತ್ತು. ಹೀಗಿದ್ದೂ ವಹಿವಾಟಿನಲ್ಲಿ ದಾಖಲೆ ನಿರ್ವಣವಾಗಿದೆ.

  10.23 ಕೋಟಿ ರೂ. ಬಳಕೆದಾರರ ಶುಲ್ಕ: 100 ರೂ ಗೆ 1 ರೂ.ನಂತೆ ಬಳಕೆದಾರರು ಎಪಿಎಂಸಿ ಮಾರುಕಟ್ಟೆಗೆ ಶುಲ್ಕ ಪಾವತಿಸುತಿದ್ದು, ಈ ಬಾರಿ 2019 ಏಪ್ರಿಲ್ – ನವೆಂಬರ್​ವರೆಗೂ 10.23 ಕೋಟಿ ರೂ. ಬಳಕೆದಾರರ ಶುಲ್ಕ ಶುಲ್ಕ ಎಎಪಿಎಂಸಿ ಮಾರುಕಟ್ಟೆಗೆ ಶುಲ್ಕ ಪಾವತಿಯಾಗಿದೆ. ಅಂದರೆ 1,023 ಕೋಟಿ ರೂ. ವಹಿವಾಟು ಮಾರುಕಟ್ಟೆಯಲ್ಲಿ ನಡೆದಿದೆ.

  ವ್ಯಾಪಾರಸ್ಥರಿಗೆ ವರವಾದ ಈರುಳ್ಳಿ 

  ಈರುಳ್ಳಿ ಬೆಲೆ ಏರಿಕೆ 2019- 20ನೇ ಸಾಲಿನಲ್ಲೂ ದಲ್ಲಾಳಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ವರವಾಗಿ ಪರಿಣಮಿಸಿದೆ. ಎಪಿಎಂಸಿಗಳಲ್ಲಿ ಕನಿಷ್ಠ 1,500 ರೂ.ದಿಂದ ಗರಿಷ್ಠ 6,500 ರೂ. ಈರುಳ್ಳಿ ಮಾರಾಟವಾಗುತ್ತಿದ್ದರೂ, ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 120ರಿಂದ 140 ರೂ. ಮಾರಾಟ ಮಾಡಲಾಯಿತು.

  ಸಣ್ಣ ಸಣ್ಣ ಗೆಡ್ಡೆಗಳು ಕೂಡ ಕೆಜಿಗೆ 70ರಿಂದ 80 ರೂ.ನಂತೆ ಮಾರಾಟವಾದವು. ಬೆಳೆಗಾರರಿಗೆ ತಕ್ಕಮಟ್ಟಿಗೆ ಇದರ ಲಾಭ ದೊರೆತಿದೆ ಎಂಬುದು ಸಮಾಧಾನದ ಸಂಗತಿ. ಆದರೂ ವ್ಯಾಪಾರಸ್ಥರು ಮತ್ತು ಚಿಲ್ಲರೆ ಮಾರಾಟಗಾರರು ರೈತರಿಗಿಂತ ದುಪ್ಪಟ್ಟು ಲಾಭ ಗಳಿಸಿದ್ದಾರೆ.

  ಕಳೆದ 3 ವರ್ಷಗಳಿಗೆ ಹೋಲಿಸಿದರೆ ಈ ವರ್ಷ 8 ತಿಂಗಳಿಗೇ ಯಶವಂತಪುರ ಮಾರುಕಟ್ಟೆಗೆ 58 ಲಕ್ಷ ಕ್ವಿಂಟಾಲ್ ಈರುಳ್ಳಿ ಆವಕವಾಗಿದೆ. ನೆರೆಹಾವಳಿ ನಡುವೆಯೂ ಉತ್ತಮ ವಹಿವಾಟು ನಡೆದಿದೆ. ಇನ್ನೂ ಮಾರ್ಚ್ ಅಂತ್ಯದವರೆಗೂ ಇನ್ನಷ್ಟು ಈರುಳ್ಳಿ ದಾಸ್ತಾನು ಮಾರುಕಟ್ಟೆಗೆ ಆವಕವಾಗಲಿದೆ.

   | ರಮೇಶ್ ಜಂಟಿ ನಿರ್ದೇಶಕ ಯಶವಂತಪುರ ಎಪಿಎಂಸಿ ಮಾರುಕಟ್ಟೆ   

  | ದ್ವಾರಕಾನಾಥ್ ಎಲ್. ಬೆಂಗಳೂರು 

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts