More

    ನಿವೃತ್ತನಾಗಿದ್ರೂ ಲಂಚಕ್ಕಾಗಿ ಹೊರಗುತ್ತಿಗೆ ನೌಕರನಾಗಿ ಬಂದ; ಕಡೆಗೂ ಸಿಕ್ಕಿಬಿದ್ದ…

    ಬೆಂಗಳೂರು: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗೆ ಬಂದ ರೈತನಿಂದ 1,500 ರೂ. ಲಂಚ ವಸೂಲಿ ಮಾಡುತ್ತಿದ್ದ ಹೊರಗುತ್ತಿಗೆ ನೌಕರ, ರೆಡ್ ಹ್ಯಾಂಡ್ ಆಗಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಸಿಲುಕಿದ್ದಾನೆ.

    ಕೆಂಗೇರಿ ಉಪನಗರದ ನಿವಾಸಿ ಲಿಂಗಯ್ಯ ಬಂಧಿತ. ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನೌಕರನಾಗಿ ಕರ್ತವ್ಯ ನಿರ್ವಹಿಸಿದ್ದ ಲಿಂಗಯ್ಯ, ಪ್ರತಿ ವರ್ಷ ರೈತರು ರಾಗಿ ತಂದಾಗ ಗುಣಮಟ್ಟ ಸರಿ ಇಲ್ಲವೆಂದು ಒಂದಿಲ್ಲೊಂದು ಕೊಂಕು ತೆಗೆದು 1 ಸಾವಿರದಿಂದ 5 ಸಾವಿರ ರೂ. ವರೆಗೂ ವಸೂಲಿ ಮಾಡುತ್ತಿದ್ದ.

    ಇದನ್ನೂ ಓದಿ: ಪೊಲೀಸರ ವಶದಲ್ಲಿದ್ದ ಆರೋಪಿ ಸಾವು; ಕಳ್ಳತನದ ಆರೋಪ ಎದುರಿಸುತ್ತಿದ್ದವ ಎದೆನೋವು ಎಂದ ಅಷ್ಟೇ..‌

    ಇದರ ಬಗ್ಗೆ ರೈತರು ಪ್ರಶ್ನೆ ಮಾಡಲು ಸಾಧ್ಯವಾಗದೆ ಅನಿವಾರ್ಯವಾಗಿ ಲಂಚ ಕೊಟ್ಟು ರಾಗಿ ಮಾರಾಟ ಮಾಡುತ್ತಿದ್ದರು. ಈತ ಕೆಲ ತಿಂಗಳ ಹಿಂದೆಯಷ್ಟೇ ನಿವೃತ್ತಿ ಹೊಂದಿದ್ದ. ಆದರೂ ಲಿಂಗಯ್ಯ ತನ್ನ ಪ್ರಭಾವ ಬಳಸಿ ಹೊರಗುತ್ತಿಗೆ ನೌಕರನಾಗಿ ಮತ್ತೆ ಅದೇ ಜಾಗಕ್ಕೆ ಬಂದಿದ್ದರು.

    ಇದನ್ನೂ ಓದಿ: ಬರೀ ಚಿಲ್ಲರೆ ಹಣದಲ್ಲೇ ಸ್ಕೂಟರ್ ಖರೀದಿಸಿದ ಭೂಪ!

    ಈ ಬಾರಿಯೂ 2021-22ನೇ ಸಾಲಿನಲ್ಲಿ ನಿಗಮ ವತಿಯಿಂದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಜನವರಿಯಲ್ಲಿ ರಾಗಿ ಮಾರಾಟಕ್ಕೆ ರೈತರು ಹೆಸರು ನೋಂದಣಿ ಮಾಡಿಕೊಂಡಿದ್ದರು. ಅದರಂತೆ ನಿಗದಿತ ದಿನದಂದು ಜ್ಞಾನಭಾರತಿ ಸಮೀಪದ ನಾಗದೇವನಹಳ್ಳಿ ರಾಗಿ ಕೇಂದ್ರಕ್ಕೆ ರಾಗಿ ತಂದು ಅನ್‌ಲೋಡ್ ಮಾಡಿ ಹೋಗುತ್ತಿದ್ದರು.

    ಇದನ್ನೂ ಓದಿ: ಮೈಲಾರಲಿಂಗೇಶ್ವರ ಕಾರ್ಣಿಕ ವಾಣಿ; ಏನು ಈ ಸಲದ ಭವಿಷ್ಯ?

    ಆದರೆ, ಲಿಂಗಯ್ಯ ತನ್ನ ಚಾಳಿ ಬಿಟ್ಟಿರಲಿಲ್ಲ. ನೊಂದ ತಾವರೆಕೆರೆ ಹೋಬಳಿ ಅರಳಿಮರಪಾಳ್ಯದ ರೈತ, ಈ ಬಗ್ಗೆ ಎಸಿಬಿಗೆ ದೂರು ನೀಡಿದ್ದರು. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಎಸಿಬಿ ಅಧಿಕಾರಿಗಳು ಶುಕ್ರವಾರ ಮಧ್ಯಾಹ್ನ ರೈತನಿಂದ ರಾಗಿ ಖರೀದಿಸಲು 1,500 ರೂ. ಲಂಚ ವಸೂಲಿ ಮಾಡುತ್ತಿದ್ದಾಗ ಲಿಂಗಯ್ಯನನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

    ಅಪ್ಪು ಜನ್ಮದಿನದಂದು ‘ಜೇಮ್ಸ್​’ ಉತ್ಸವ; 31 ಕಟೌಟ್ಸ್​, ಹೆಲಿಕಾಪ್ಟರ್​​ನಲ್ಲಿ ಹೂಮಳೆ; ಇನ್ನೇನಿರಲಿದೆ ಅಲ್ಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts