More

    ಸಾವಿರ ಗಡಿ ದಾಟಿದ ಕರೊನಾ

    ಉಡುಪಿ: ಜಿಲ್ಲೆಯಲ್ಲಿ ಶನಿವಾರ ಮತ್ತೆ 15 ಕರೊನಾ ಪಾಸಿಟಿವ್ ವರದಿಯಾಗಿದೆ. ಇದರೊಂದಿಗೆ ತಿಂಗಳೊಳಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಸಾವಿರ ಗಡಿ ದಾಟಿದ್ದು, 1006ಕ್ಕೆ ತಲುಪಿದೆ.
    ಎಲ್ಲ 15 ಮಂದಿಯೂ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. 8 ಪುರುಷರು, 5 ಮಹಿಳೆಯರು ಹಾಗೂ ಒಬ್ಬ 6 ವರ್ಷದ ಬಾಲಕಿ ಸೇರಿದ್ದಾರೆ. ಎಲ್ಲರನ್ನೂ ಕೋವಿಡ್ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕುಂದಾಪುರ 13 ಮಂದಿ, ಕಾರ್ಕಳದ ಇಬ್ಬರು ಸೋಂಕಿತರು ಎಂದು ತಿಳಿದು ಬಂದಿದೆ.
    ಮೇ 15ರ ವರೆಗೆ ಉಡುಪಿ ಜಿಲ್ಲೆಯಲ್ಲಿ ಕೇವಲ 3 ಮಂದಿಯಲ್ಲಿ ಕೋವಿಡ್ -19 ಸೋಂಕು ಕಂಡುಬಂದಿತ್ತು. ಅವರೆಲ್ಲರೂ ಗುಣಮುಖರಾಗಿ ಸತತವಾಗಿ 46 ದಿನಗಳವರೆಗೆ ಜಿಲ್ಲೆಯಲ್ಲಿ ಸೋಂಕು ಪತ್ತೆಯಾಗಿರಲಿಲ್ಲ. ಮೇ 15ರಂದು ಮತ್ತೆ ಸೋಂಕು ಕಾಣಿಸಿಕೊಂಡ ನಂತರ ಸೋಂಕಿನ ಸಂಖ್ಯೆ ಏರುತ್ತ 29 ದಿನಗಳಲ್ಲಿ 1003 ಮಂದಿಯಲ್ಲಿ ವೈರಸ್ ಕಂಡುಬಂದಿದೆ. 1006 ಮಂದಿ ಸೋಂಕಿತರಲ್ಲಿ 964 ಮಂದಿ ಮಹಾರಾಷ್ಟ್ರ ರಾಜ್ಯದಿಂದ ಬಂದವರಾಗಿದ್ದಾರೆ.
    29 ನೆಗೆಟಿವ್: ಜಿಲ್ಲೆಯಲ್ಲಿ ಶನಿವಾರ 29 ಮಂದಿಯ ವರದಿ ನೆಗೆಟಿವ್ ಬಂದಿದೆ. ಹಾಟ್‌ಸ್ಪಾಟ್ ಪ್ರದೇಶದಿಂದ ಬಂದ 53, ಇಲ್‌ನೆಸ್‌ಗೆ ಸಂಬಂಧಿಸಿ 8, ಕೋವಿಡ್ ಕಾಂಟಾಕ್ಟ್ 1, ತೀವ್ರ ಉಸಿರಾಟ ಸಮಸ್ಯೆ ಒಬ್ಬರು ಸೇರಿದಂತೆ ಒಟ್ಟು 63 ಮಂದಿಯ ಮಾದರಿ ಸಂಗ್ರಹಿಸಲಾಗಿದೆ. ಇನ್ನೂ 90 ಮಂದಿಯ ವರದಿ ಬರಲು ಬಾಕಿ ಇದೆ. ಇಲ್ಲಿವರೆಗೂ 720 ಮಂದಿ ಡಿಸ್ಚಾರ್ಜ್ ಆಗಿದ್ದು, 285 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts