More

    ಒಂದೇ ಸರಣಿ, 18 ಸೂಪರ್ ​ಹೀರೋಗಳು; ಮಾರ್ವಲ್ ರೀತಿ ಹೊಸ ಪ್ರಪಂಚ ಸೃಷ್ಟಿ ಸಾಧ್ಯತೆ

    ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಎಲ್ಲ ಬಗೆಯ ಚಿತ್ರಗಳೂ ಬಂದಿವೆ. ಆದರೆ, ತಂತ್ರಜ್ಞಾನದ ಕೊರತೆಯಿಂದಾಗಿ ಸೂಪರ್​ಹೀರೋ ಚಿತ್ರಗಳು ಹೆಚ್ಚು ಸಂಖ್ಯೆಯಲ್ಲಿ ಬಂದಿಲ್ಲ. ‘ಆನಾ’ ಎಂಬ ಸಿನಿಮಾ ಬಂದಿದ್ದರೂ, ಅದನ್ನು ಸಂಪೂರ್ಣ ಸೂಪರ್​ಹೀರೋ ಚಿತ್ರ ಎಂದು ಹೇಳಲು ಸಾಧ್ಯವಿಲ್ಲ. ಈಗ ಆ ಕೊರತೆ ನೀಗಿಸುವ ಬ್ರಹ್ಮ ಸೃಷ್ಟಿಯಾಗಿದ್ದಾನೆ. ಈ ಹಿಂದೆ, ‘ಸಿದ್ದಿಸೀರೆ’ ಎಂಬ ಚಿತ್ರ ನಿರ್ದೇಶಿಸಿದ್ದ ಬ್ರಹ್ಮ, ಸೂಪರ್​ಹೀರೋ ಸರಣಿಗೆ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಈ ಸರಣಿಯಲ್ಲಿ ಒಂದಲ್ಲ, ಎರಡಲ್ಲ 18 ಚಿತ್ರಗಳನ್ನು ರೂಪಿಸುವುದಕ್ಕೆ ಮುಂದಾಗಿದ್ದಾರೆ. ಈ ಸರಣಿಯ ಮೊದಲ ಚಿತ್ರವಾಗಿ ರಾಗಿಣಿ ಅಭಿನಯದ ‘ಸಾರಿ – ಕರ್ಮ ರಿಟರ್ನ್ಸ್’ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದೆ.

    ಈ ಕುರಿತು ಮಾತನಾಡುವ ಬ್ರಹ್ಮ, ‘ಸೂಪರ್ ಹೀರೋ ಚಿತ್ರಗಳಿಗೆ ಭಾರತೀಯ ಸಂಸ್ಕೃತಿಯೇ ಸ್ಪೂರ್ತಿ. ಹೀಮ್ಯಾನ್, ಸ್ಪೈಡರ್​ವ್ಯಾನ್ … ಹೀಗೆ ಎಲ್ಲ ಮ್ಯಾನ್​ಗಳಿಗೂ ಆಂಜನೇಯನೇ ಪ್ರೇರಣೆ. ‘ಪೈರೇಟ್ಸ್ ಆಫ್ ಕೆರಿಬಿಯನ್’, ‘ದಿ ಲಾಸ್ಟ್ ಸ್ಟಾ್ಯಂಡ್ ಫೈಟ್ ಸೀನ್’ ಸೇರಿದಂತೆ ಹಲವು ವರ್ಷಗಳ ಕಾಲ ಹಾಲಿವುಡ್ ಸೂಪರ್​ಹೀರೋ ಚಿತ್ರಗಳಲ್ಲಿ ಕೆಲಸ ಮಾಡಿರುವ ಕಾರಣ, ಅವರು ಹೇಗೆ ಸಿನಿಮಾ ಮಾಡುತ್ತಾರೆ ಎಂಬುದು ಗೊತ್ತು. ಸ್ಕೆಲಿಟನ್ ಅಥವಾ ಗ್ರೀನ್ ಸ್ಕ್ರೀನ್ ಓವರ್​ಲ್ಯಾಪಿಂಗ್ ಶೂಟ್ ಮಾಡುತ್ತಾರೆ. ಆದರೆ, ನಾವು ಎರಡೂ ರೀತಿಯಲ್ಲಿ ಚಿತ್ರೀಕರಿಸಿದ್ದೇವೆ. 18 ಸೂಪರ್​ಹೀರೋ ಚಿತ್ರಗಳನ್ನು ಮಾಡುವ ಆಲೋಚನೆಯಿದೆ. ಇದು ಭಾರತೀಯ ಚಿತ್ರರಂಗದಲ್ಲೇ ಒಂದು ದಾಖಲೆ. ಮಾರ್ವಲ್ ವರ್ಲ್ಡ್ ರೀತಿ ನಾನೂ ಒಂದು ಪ್ರಪಂಚ ಸೃಷ್ಟಿಸಲು ಪ್ರಯತ್ನಿಸುತ್ತಿದ್ದೇನೆ’ ಎನ್ನುತ್ತಾರೆ. ಮುಂದಿನ ಜನವರಿ, ಫೆಬ್ರವರಿ ಹೊತ್ತಿಗೆ 2ನೇ ಚಿತ್ರ ಪ್ರಾರಂಭಿಸುವ ಐಡಿಯಾ ಬ್ರಹ್ಮ ಅವರದು.

    ವಿಶೇಷ ಅಂದರೆ ಚಿತ್ರದ ಕೆಲವು ಭಾಗಗಳ ವಿಎಫ್​ಎಕ್ಸ್ ಮತ್ತು ಅನಿಮೇಷನ್ ಅಮೆರಿಕಾ, ಕೆನಡಾ, ಫಿಲಿಪ್ಪೀನ್ಸ್ ದೇಶಗಳಿಗೆ ಹೊರಗುತ್ತಿಗೆ ನೀಡಿದ್ದಾರಂತೆ. ‘ಸಾರಿ’ ಚಿತ್ರದಲ್ಲಿ ಸೂಪರ್ ಹೀರೋ ಆಗಿ ಕಾಣಿಸಿಕೊಂಡಿರುವ ರಾಗಿಣಿ ದ್ವಿವೇದಿ, ‘ನಾವು ಸಿನಿಮಾ, ತಂತ್ರಜ್ಞಾನ ಎಲ್ಲದರಲ್ಲೂ ಮುಂದಿದ್ದೇವೆ. ತಮಿಳು, ತೆಲುಗು, ಮಲಯಾಳಂನಲ್ಲೂ ನಟಿಸುತ್ತಿದ್ದೇನೆ. ಆದರೆ, ನನಗೆ ಕನ್ನಡದಲ್ಲಿ ಒಂದು ವಿಭಿನ್ನ ಸಿನಿಮಾ ಮಾಡುತ್ತಿರುವ ಹೆಮ್ಮೆಯಿದೆ. ಬಾಲ್ಯದಿಂದಲೂ ಸೂಪರ್​ಹೀರೋ ಕನಸು ಎಲ್ಲರಿಗೂ ಇರುತ್ತೆ. ನನಗೂ ಇತ್ತು’ ಎಂದು ಹೇಳಿಕೊಳ್ಳುತ್ತಾರೆ.

    ಪ್ರಯೋಗ ನಿರಂತರ…: ತಮ್ಮ ಮೊದಲ ಸೂಪರ್​ಹೀರೋ ಅನುಭವದ ಕುರಿತು ಮಾತನಾಡುವ ರಾಗಿಣಿ ದ್ವಿವೇದಿ, ‘ಇದುವರೆಗೂ ನನಗೆ ವಿಭಿನ್ನ ಎನಿಸಿದ ಹಲವು ಬಗೆಯ ಪಾತ್ರಗಳಲ್ಲಿ ನಟಿಸಿದ್ದೇನೆ. ಕೆಲವೊಮ್ಮೆ ಗೆದ್ದಿದ್ದೇನೆ, ಕೆಲವೊಮ್ಮೆ ಸೋತಿದ್ದೇನೆ. ಆದರೆ ಸೋಲು, ಗೆಲುವು ನೋಡಿಕೊಂಡು ಹೋದರೆ ವಿಭಿನ್ನ ಚಿತ್ರಗಳನ್ನು ಮಾಡುವುದಕ್ಕಾಗುವುದಿಲ್ಲ. ವಿಭಿನ್ನ ಪಾತ್ರಗಳಲ್ಲಿ ಪ್ರಯೋಗ ಮಾಡಿದ್ದಕ್ಕೇ ಕಳೆದ 11 ವರ್ಷಗಳಿಂದ ನಾನು ಚಿತ್ರರಂಗದಲ್ಲಿರಲು ಸಾಧ್ಯವಾಗಿದ್ದು’ ಎನ್ನುತ್ತಾರೆ.

    ಕಾರು ಚಲಾಯಿಸುತ್ತಿರುವಾಗಲೇ ಹೃದಯಾಘಾತ; ಹೊಲಕ್ಕೆ ನುಗ್ಗಿದ ವಾಹನ, 29 ವರ್ಷದ ಇಂಜಿನಿಯರ್ ಸಾವು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts