More

    ಆ್ಯಪ್ ಲೋನ್ ವಂಚಕರ ಮತ್ತೊಂದು ಜಾಲ ಸಿಸಿಬಿ ಬಲೆಗೆ; ಚೀನಾ ಮೂಲದ ಕಂಪನಿಗಳಿಂದ ದಂಧೆ!

    ಬೆಂಗಳೂರು: ಕಾನೂನು ಬಾಹಿರವಾಗಿ ಆ್ಯಪ್‌ಗಳ ಮೂಲಕ ಸಣ್ಣಮೊತ್ತದ ಸಾಲ ನೀಡಿ, ದುಪ್ಪಟ್ಟು ಬಡ್ಡಿಗಾಗಿ ಗ್ರಾಹಕರನ್ನು ಪೀಡಿಸುತ್ತಿದ್ದ ಮತ್ತೊಂದು ವಂಚಕರ ಜಾಲ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದೆ. ಚೀನಾ ಮೂಲದ ಕಂಪನಿಗಳೆಂಬುದು ತನಿಖೆಯಲ್ಲಿ ಬಯಲಾಗಿದ್ದು, ಸಾವಿರಾರು ಗ್ರಾಹಕರ ಮೊಬೈಲ್ ಡೇಟಾ ಕಳವು ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

    ಹೊಸಗುಡ್ಡದಹಳ್ಳಿ ನಿವಾಸಿ ಸೈಯದ್ ಮೆಹಬೂಬ್ (33), ಬಿ.ಟಿ.ಎಂ. ಲೇಔಟ್‌ನ ಸೈಯದ್ ಇರ್ಫಾನ್​ (28) ಮತ್ತು ರಾಮಗೊಂಡನಹಳ್ಳಿ ನಿವಾಸಿ ಆದಿತ್ಯ ಸೇನಾಪತಿ (26) ಬಂಧಿತರು. ಆರೋಪಿಗಳಿಂದ 35 ಲ್ಯಾಪ್‌ಟಾಪ್, 8 ಬ್ಯಾಂಕ್‌ಗಳ ದಾಖಲೆ, 200ಕ್ಕೂ ಅಧಿಕ ಮೊಬೈಲ್ ಫೋನ್​, 30 ಸಿಮ್‌ಕಾರ್ಡ್ ಸೇರಿ ಇನ್ನಿತರ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.

    ಲೋನ್ ಆ್ಯಪ್ ಕಂಪನಿಗಳು ವೈಯಕ್ತಿಕ ಮಾಹಿತಿ ಇಟ್ಟುಕೊಂಡು ಕಿರುಕುಳ ನೀಡುತ್ತಿರುವ ಕುರಿತು ಗ್ರಾಹಕರಿಂದ ನಗರದ ವಿವಿಧ ಸಿಇಎನ್ ಠಾಣೆಗಳಲ್ಲಿ ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಪ್ರಕರಣದ ತನಿಖೆಯನ್ನು ಸಿಸಿಬಿ ವರ್ಗಾವಣೆ ಮಾಡಿ ಆದೇಶಿಸಿದ್ದರು. ತನಿಖೆ ವೇಳೆ ಸಿಕ್ಕ ಮಾಹಿತಿ ಆಧರಿಸಿ ಭಾನುವಾರ ರಾತ್ರಿ ಕೋರಮಂಗಲದಲ್ಲಿರುವ ಆ್ಯಸ್ಪೆರಲ್ ಸರ್ವೀಸಸ್ ಕಂಪನಿ ಮೇಲೆ ದಾಳಿ ನಡೆಸಲಾಗಿತ್ತು. ಪರಿಶೀಲನೆ ವೇಳೆ, ಒಂದೇ ಕಂಚೇರಿಯಲ್ಲಿ ಹೈಜೇಕಿ ಸರ್ವೀಸ್ಡ್, ಎಕ್ಸೀಡ್ ವೆಲ್ ಸರ್ವೀಸ್, ಮಾಸ್ಕೋಟ್‌ಸ್ಟಾರ್ ಸರ್ವೀಸ್ ಹಾಗೂ ಅಕ್ವಾ ಸ್ಟೆಲ್ಲರ್ ಎಂಬ ನಾಲ್ಕು ಅನಧಿಕೃತ ಲೋನ್ ಆ್ಯಪ್ ಕಂಪನಿಗಳು ಕಾರ್ಯನಿರ್ವಹಿಸುತ್ತಿರುವುದು ಗೊತ್ತಾಗಿದೆ ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

    ಇದನ್ನೂ ಓದಿ: ಈ ನಾಲ್ಕು ರಸ್ತೆಗಳಲ್ಲಿ ಇನ್ಮುಂದೆ ಸಾರ್ವಜನಿಕರು ನಡೆದೇ ಸಂಚರಿಸಬೇಕಾದೀತು! 

    ಗ್ರಾಹಕರ ಗೌಪ್ಯ ಮಾಹಿತಿ ಕಳವು: ಈ ಐದು ಲೋನ್ ಆ್ಯಪ್ ಕಂಪನಿಗಳು ಚೀನಾ ಮೂಲದ್ದಾಗಿವೆ. ಆನ್‌ಲೈನ್‌ನಲ್ಲಿ ಜಾಹೀರಾತು ನೀಡಿ, ಕಂಪನಿಯ ಸ್ಥಳೀಯ ಕಚೇರಿಗಳಿಗೆ ನಿರ್ದೇಶಕರನ್ನು ಹಾಗೂ ಸಿಬ್ಬಂದಿಗಳನ್ನು ನೇಮಿಸಿಕೊಂಡಿದ್ದಾರೆ. ವ್ಯವಸ್ಥಿತ ರೀತಿಯಲ್ಲಿ ಕಂಪನಿಗಳನ್ನು ನಡೆಸಲಾಗುತ್ತಿದೆ. ಸಾಲ ಪಡೆದ ಸಾವಿರಾರು ಗ್ರಾಹಕರ ಮೊಬೈಲ್‌ನಿಂದ ಗೌಪ್ಯ ಮಾಹಿತಿ ಕಳವು ಮಾಡಿದ್ದಾರೆ. ಜಪ್ತಿ ಮಾಡಲಾದ ಲ್ಯಾಪ್‌ಟಾಪ್, ಮೊಬೈಲ್ ಹಾಗೂ ಸಿಮ್‌ಕಾರ್ಡ್‌ಗಳನ್ನು ಪರಿಶೀಲಿಸಲಾಗುತ್ತಿದೆ. ಬಂಧಿತರು ಚೀನಾದ ಕಂಪನಿಗಳ ಜತೆ ನೇರ ಸಂಪರ್ಕ ಹೊಂದಿದ್ದರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಪೊಲೀಸರಿಗೆ ಗೊತ್ತಾಗಿದೆ. ಚೀನಾದ ಪ್ರಮುಖ ಆರೋಪಿಗಳ ಪತ್ತೆಗಾಗಿ ತೀವ್ರ ಶೋಧ ನಡೆಸಿದ್ದಾರೆ.

    ಟೀಂ ವರ್ಕ್ ಕೆಲಸ: ಮೊದಲಿಗೆ ಒಂದು ಕಂಪನಿಯಿಂದ ಸಾಲ ನೀಡುತ್ತಾರೆ. ಗ್ರಾಹಕರು ಸಾಲ ತೀರಿಸಿದ ಬಳಿಕ ಮನಿ ಡೇ, ಪೈಸಾ ಪೇ, ಲೋನ್ ಟೈಮ್, ರುಪೀ ಡೇ, ರುಪೀ ಕಾರ್ಟ್, ಇನ್ ಕ್ಯಾಶ್ ಸೇರಿದಂತೆ ಇನ್ನಿತರ ಹೆಸರಿನ ಆ್ಯಪ್‌ಗಳಿಂದ ನೀಡುವುದಾಗಿ ಕರೆ ಮಾಡುತ್ತಿದ್ದರು. ಗ್ರಾಹಕರನ್ನು ಸೆಳೆಯಲು ಕಾಲ್ ಸೆಂಟರ್ ರೀತಿಯಲ್ಲಿ ಕಚೇರಿಯನ್ನು ನಿರ್ಮಿಸಿಕೊಂಡಿದ್ದರು. ಗ್ರಾಹಕರ ಮೊಬೈಲ್‌ನಿಂದ ಡೇಟಾ ಕದಿಯುವುದು, ಸಾಲ ತೀರಿಸದವರಿಗೆ ಬೆದರಿಸಲು ಹಾಗೂ ಗ್ರಾಹಕರ ೆಟೋಗಳನ್ನು ತಿರುಚಿ ಅವಹೇಳನ ಮಾಡಲು ಸೇರಿದಂತೆ ಹೀಗೆ ಬೇರೆಬೇರೆ ಕೆಲಸಗಳನ್ನು ತಂಡದ ರೂಪದಲ್ಲಿ ಮಾಡುತ್ತಿದ್ದರು. ಹಣಕಾಸಿನ ವಹಿವಾಟು ನಡೆಸಿರುವ ಬ್ಯಾಂಕ್ ಖಾತೆಗಳನ್ನು ತಡೆಹಿಡಿಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: ಬಿಎಂಟಿಸಿ ಬಸ್​ ಪ್ರಯಾಣ ದರದಲ್ಲಿ ಇಳಿಕೆ; ಜನವರಿ 1ರಿಂದಲೇ ಜಾರಿ…

    ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯ: ಚೀನಾದ ಅನಧಿಕೃತ ಲೋನ್ ಆ್ಯಪ್‌ಗಳು ಗೂಗಲ್ ಪ್ಲೇಸ್ಟೋರ್‌ನಲ್ಲಿ ಸೇರ್ಪಡೆಯಾಗಿರುವುದು ಪೊಲೀಸರಿಗೆ ಅಚ್ಚರಿ ಮೂಡಿಸಿದೆ. ಇದಕ್ಕೆ ಯಾವ ಮಾರ್ಗವನ್ನು ಅನುಸರಿಸಿದ್ದಾರೆ. ಯಾರೆಲ್ಲ ಸಹಕರಿಸಿದ್ದಾರೆ ಎಂಬುದು ತನಿಖೆಯಿಂದ ಹೊರಬೀಳಬೇಕಿದೆ. ಈ ಕುರಿತು ತಾಂತ್ರಿಕ ಮಾಹಿತಿಯನ್ನು ವಿಶ್ಲೇಷಿಸಲಾಗುತ್ತಿದೆ. ಗಂಭಿರ ಪ್ರಕರಣವಾಗಿರುವ ಹಿನ್ನೆಲೆಯಲ್ಲಿ ಮಾಹಿತಿಯನ್ನು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ನೀಡಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವಿಜಯವಾಣಿಗೆ ತಿಳಿಸಿದ್ದಾರೆ.

    ಪ್ರಕರಣಗಳ ಸಂಖ್ಯೆ ಹೆಚ್ಚಳ: ಆ್ಯಪ್ ಲೋನ್ ವಂಚನೆ, ಕಿರುಕುಳದ ಬಗ್ಗೆ ವಾರದ ಹಿಂದೆ ಸಿಐಡಿ ಸೈಬರ್ ಸೈಬರ್ ಕ್ರೈಂ ಹಾಗೂ ಸಿಇಎನ್ ಠಾಣೆಗಳಲ್ಲಿ 5 ಪ್ರಕರಣ ದಾಖಲಾಗಿದ್ದವು. ಕಳೆದ ಎರಡು ದಿನದ ಅವಧಿಯಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರದಲ್ಲಿನ ಜನರನ್ನು ಟಾರ್ಗೇಟ್ ಮಾಡಿಕೊಂಡು ದಂಧೆ ನಡೆಸುತ್ತಿದ್ದರು.

    VIDEO| ನಿತ್ಯ ಪೂಜೆ ವೇಳೆಗೆ ಬರುತ್ತೆ ಈ ಹಾವು! ಗಣಪತಿಗೆ ಪ್ರದಕ್ಷಿಣೆ ಹಾಕಿ ವಾಪಸ್​ ಹೋಗುತ್ತೆ

    ಮೆಟ್ರೋನಲ್ಲೇ​ ಕಿಸ್ಸಿಂಗ್​! ನಿರ್ಬಂಧಗಳನ್ನು ವಿರೋಧಿಸಿ ಸಾರ್ವಜನಿಕವಾಗಿ ಕಿಸ್ ಮಾಡಲು ಆರಂಭಿಸಿದ ಜೋಡಿಗಳು

    ‘ಸೆಕ್ಸ್​ಪರ್ಟ್’​ ಇನ್ನಿಲ್ಲ: ಇವರಿದ್ದಾಗ ಸಿಕ್ಕಿತ್ತು ಅದೆಷ್ಟೋ ಮಂದಿಗೆ ಸಾಂತ್ವನ-ಸಮಾಧಾನ…

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts