More

    ವೇದಿಕೆ ನೃತ್ಯದ ನೆಪದಲ್ಲಿ ವೇಶ್ಯಾವಾಟಿಕೆ ದಂಧೆ!: ಕೈತುಂಬ ಸಂಬಳ ಆಮಿಷ, ಪಂಜಾಬ್​ನಿಂದ ಬೆಂಗಳೂರಿಗೆ ಮಹಿಳೆ ಸಾಗಾಟ, ಗ್ಯಾಂಗ್​ನ ಓರ್ವ ಸದಸ್ಯೆ ಸೆರೆ

    ಬೆಂಗಳೂರು: ವೇದಿಕೆಯಲ್ಲಿ ಡಾನ್ಸ್ ಮಾಡಿದರೆ ತಿಂಗಳಿಗೆ 40 ಸಾವಿರ ರೂ. ಸಂಬಳ ಕೊಡುವ ಆಮಿಷವೊಡ್ಡಿ ಮಹಿಳೆಯನ್ನು ವೇಶ್ಯಾವಾಟಿಕೆ ದಂಧೆಗೆ ದೂಡಲು ಯತ್ನಿಸಿದ ಗ್ಯಾಂಗ್​ನ ಓರ್ವ ಸದಸ್ಯೆಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಪೊಲೀಸರು ಬಂಧಿಸಿದ್ದಾರೆ.

    ಪಂಜಾಬ್ ಮೂಲದ ಬೆಂಗಳೂರಿನ ನಿವಾಸಿ ಪ್ರೀತಿ (30) ಸೆರೆಸಿಕ್ಕ ಮಹಿಳೆ. ಸೋನಿಯಾ ಮತ್ತು ಗುರ್​ವಿುತ್ ಸಿಂಗ್ ಎಂಬುವರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆಬೀಸಲಾಗಿದೆ. ಇಬ್ಬರು ಸಂತ್ರಸ್ತೆಯರನ್ನು ರಕ್ಷಣೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ವಂಚನೆಗೊಳಗಾದ ದೆಹಲಿ ಮೂಲದ ಮಹಿಳೆಗೆ ಪಂಜಾಬ್​ನಲ್ಲಿ ನೃತ್ಯ ಕಾರ್ಯಕ್ರಮ ವೇಳೆ ಸೋನಿಯಾ ಎಂಬಾಕೆಯ ಪರಿಚಯವಾಗಿತ್ತು. ಬೆಂಗಳೂರಿನಲ್ಲಿ ವೇದಿಕೆಯಲ್ಲಿ ಡಾನ್ಸ್ ಮಾಡಿದರೆ ಮಾಸಿಕ 40 ಸಾವಿರ ರೂ. ವೇತನ ಸಿಗಲಿದೆ ಎಂದು ಆಕೆ ಆಸೆ ಹುಟಿಸಿದ್ದಳು. ಅದಕ್ಕೆ ಒಪ್ಪಿದ ಮಹಿಳೆ ಬೆಂಗಳೂರಿಗೆ ಹೋಗಲು ಸಮ್ಮತಿಸಿದ್ದಳು. ಕೆಲ ದಿನಗಳ ಬಳಿಕ ಪಂಜಾಬ್​ನಲ್ಲಿ ತಾನು ಇದ್ದ ಸ್ಥಳಕ್ಕೆ ಆಕೆಯನ್ನು ಕರೆಸಿಕೊಂಡ ಸೋನಿಯಾ, ಬೆಂಗಳೂರಿನಲ್ಲಿ ಪ್ರೀತಿ ಎಂಬಾಕೆ ಕೆಲಸಕ್ಕೆ ಸೇರಿಸುತ್ತಾಳೆ ಎಂದು ಹೇಳಿ ತನ್ನ ಕಡೆಯ ಒಬ್ಬಾಕೆಯೊಂದಿಗೆ ಚಂಡೀಗಢ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಕಳುಹಿಸಿದ್ದಳು. ಪ್ರಯಾಣದ ವೇಳೆ ಮಹಿಳೆ, ತನ್ನ ಜತೆಗಿದ್ದ ಯುವತಿ ಬಳಿ ಬೆಂಗಳೂರಿನ ಕೆಲಸದ ಬಗ್ಗೆ ವಿಚಾರಿಸಿದ್ದಳು. ಆಗ ಆಕೆ ವೇದಿಕೆ ನೃತ್ಯದ ಜತೆಗೆ ಪರ ಪುರುಷರ ಜತೆ ಮಲಗಬೇಕು ಎಂದು ಹೇಳಿದ್ದಳು.

    ಇದರಿಂದ ಬೆಚ್ಚಿಬಿದ್ದ ಮಹಿಳೆ, ಕೆಐಎನಲ್ಲಿ ವಿಮಾನ ಇಳಿದ ಕೂಡಲೇ ಜತೆಗಿದ್ದಾಕೆ ಜತೆಗೂಡಿ ಅಲ್ಲಿನ ಭದ್ರತಾ ಸಿಬ್ಬಂದಿಗೆ ದೂರು ನೀಡಿದ್ದಳು. ಯುವತಿಯನ್ನು ಕರೆದೊಯ್ಯಲು ಬಂದ ಪ್ರೀತಿ ಎಂಬಾಕೆಯನ್ನು ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ನಾಲ್ಕು ಹೆಣ್ಣುಮಕ್ಕಳ ತಾಯಿ: ವಂಚನೆಗೊಳಗಾದ ದೆಹಲಿ ಮೂಲದ ಮಹಿಳೆ ತಾನು ದುಡಿದ ಹಣದಲ್ಲಿಯೇ ಪತಿ ಮತ್ತು ನಾಲ್ವರು ಹೆಣ್ಣು ಮಕ್ಕಳನ್ನು ಸಾಕಬೇಕಾಗಿತ್ತು. ಪತಿ ಕೂಡ ಕೆಲಸವಿಲ್ಲದೆ ಮನೆಯಲ್ಲಿದ್ದರು. ಅದಕ್ಕಾಗಿ ಬೆಂಗಳೂರಿನಲ್ಲಿ ಕೈತುಂಬಾ ಹಣ ಸಂಪಾದನೆ ಮಾಡಬಹುದು ಎಂದು ಕುಟುಂಬ ಬಿಟ್ಟು ಬೆಂಗಳೂರಿಗೆ ಬಂದಿದ್ದಳು. ಆದರೆ, ವೇಶ್ಯಾವಾಟಿಕೆ ದಂಧೆ ಎಂಬುದು ಗೊತ್ತಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts