More

    ಮತ್ತೆ ಆಪರೇಷನ್ ಕಮಲ; ಘಟಾನುಘಟಿ ನಾಯಕರು ಬಿಜೆಪಿ ಸೇರ್ಪಡೆ ಖಚಿತ: ಸಚಿವ ಸೋಮಶೇಖರ್

    ಮೈಸೂರು: ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮುಂಚಿತವಾಗಿಯೇ ಅವನ್ನು ಎದುರಿಸುವ ತಯಾರಿಗಳು ನಡೆಯುತ್ತಿದ್ದು, ಆ ನಿಟ್ಟಿನಲ್ಲಿ ಆಪರೇಷನ್ ಕಮಲ ನಡೆಯುವ ಸಾಧ್ಯತೆಗಳು ಗೋಚರಿಸಲಾರಂಭಿಸಿವೆ. ವಿಶೇಷವೆಂದರೆ ಆಡಳಿತಾರೂಢ ಪಕ್ಷದವರೇ ಇದನ್ನು ಸ್ಪಷ್ಟಪಡಿಸಿದ್ದು, ಸದ್ಯದ ರಾಜಕೀಯ ಚಟುವಟಿಕೆಗಳು ಕುತೂಹಲ ಕೆರಳಿಸಿವೆ.

    ಹಳೇ ಮೈಸೂರು ಭಾಗದಲ್ಲಿ ಎರಡನೇ ಹಂತದ ಆಪರೇಷನ್ ಕಮಲಕ್ಕೆ ಸಿದ್ಧತೆ ನಡೆಯುತ್ತಿದ್ದು, ಶೀಘ್ರದಲ್ಲೇ ಮೈಸೂರು ಭಾಗದ ಐದಾರು ಘಟಾನುಘಟಿ ನಾಯಕರು ಬಿಜೆಪಿಗೆ ಸೇರ್ಪಡೆ ಆಗುವುದು ನಿಶ್ಚಿತ ಎಂದು ಮೈಸೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.

    ಆಪರೇಷನ್ ಕಮಲ ಸಂಬಂಧ ನಾಯಕರ ಜೊತೆಗೆ ಕೊನೆಯ ಹಂತದ ಮಾತುಕತೆಗಳು ನಡೆಯುತ್ತಿವೆ. ಬಿಜೆಪಿ ರಾಜ್ಯಾಧ್ಯಕ್ಷರ ಗ್ರೀನ್ ಸಿಗ್ನಲ್ ಬಾಕಿ‌ ಇದೆ. ಯಾವ ಕಂಡಿಷನ್ ಇಲ್ಲದೆ ಬಿಜೆಪಿ ಸೇರ್ಪಡೆ ಆಗಲು ಕೆಲವು ನಾಯಕರು ಒಪ್ಪಿದ್ದಾರೆ. ಇದರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷದವರು ಇದ್ದಾರೆ ಎಂದಿರುವ ಸಚಿವರು, ಆ ಕುರಿತು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

    ಯಾರು ಆ ನಾಯಕರು ಎಂಬುದನ್ನು ಈ ಹಂತದಲ್ಲಿ ಹೇಳಲು ಸಾಧ್ಯವಿಲ್ಲ. ಕೊನೆಯ ಹಂತದ ಮಾತುಕತೆ ಮುಗಿಯಲಿ. ನಾವೇ ಎಲ್ಲವನ್ನೂ ಸ್ಪಷ್ಟ ಪಡಿಸುತ್ತೇವೆ ಎಂಬುದಾಗಿ ಸಚಿವ ಸೋಮಶೇಖರ್ ತಿಳಿಸಿದ್ದಾರೆ.

    ಇನ್ನು ಬಿಜೆಪಿಗೆ ಸುಮಲತಾ ಬರಲಿ, ರಮ್ಯಾ ಬರಲಿ.. ಕರೆದುಕೊಳ್ಳುವುದಕ್ಕೆ ನಾವು ಸಿದ್ಧರಿದಿದ್ದೇವೆ ಎಂದು ಮತ್ತೊಬ್ಬರು ಸಚಿವ ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಇಂದು ಮಾತನಾಡಿದ ಅವರು, ಪಕ್ಷ ಸ್ಟ್ರಾಂಗ್ ಆದಾಗ ಎಲ್ಲರೂ ಬರುವುದಕ್ಕೆ ಪ್ರಯತ್ನ ಮಾಡುತ್ತಾರೆ. ನಮ್ಮ ಪಕ್ಷದ ನಾಯಕರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ಬದ್ಧ ಇದ್ದೀವೆ ಎಂದು ಹೇಳಿದರು.

    ಮತ್ತೊಂದೆಡೆ ಕಳೆದ ಕೆಲವು ದಿನಗಳಿಂದ ಮಾಜಿ ಸಂಸದೆ, ನಟಿ ರಮ್ಯಾ ತಮ್ಮ ಪಕ್ಷವಾದ ಕಾಂಗ್ರೆಸ್​ ನಾಯಕರ ವಿರುದ್ಧವೇ ದನಿ ಎತ್ತಿ, ವಾಕ್ಸಮರ ನಡೆಸಿದ್ದರಿಂದ ಸಾರ್ವಜನಿಕ ವಲಯದಲ್ಲಿ ಕೆಲವರು ರಮ್ಯಾ ಬಿಜೆಪಿಗೆ ಸೇರಲಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೀಗ ಸಚಿವರಿಬ್ಬರ ಹೇಳಿಕೆ ಅದಕ್ಕೆ ಪುಷ್ಟಿ ಕೊಡುವಂತಿರುವುದು ನಟಿ ರಮ್ಯಾ ಬಿಜೆಪಿಗೆ ಸೇರಲಿದ್ದಾರೆಯೇ ಎಂಬ ಕೌತುಕವನ್ನೂ ಉಂಟುಮಾಡಿದೆ.

    ಬಿಜೆಪಿಗೆ ಸುಮಲತಾ, ರಮ್ಯಾ ಬರಲಿ ಕರೆದುಕೊಳ್ಳೋದಕ್ಕೆ ರೆಡಿ: ಸಚಿವ ಕೆ.ಸಿ.ನಾರಾಯಣಗೌಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts