More

    ಶ್ರೀರಾಮನವಮಿಯಂದು ರಾಮತತ್ವವು ಸಾವಿರ ಪಟ್ಟು ಹೆಚ್ಚಂತೆ!

    ವಿಷ್ಣುವಿನ ಏಳನೆಯ ಅವತಾರನಾದ ಶ್ರೀರಾಮನ ಜನ್ಮ ಪ್ರೀತ್ಯರ್ಥವಾಗಿ ರಾಮ ನವಮಿಯನ್ನು ಆಚರಿಸುತ್ತಾರೆ. ಈ ದಿನ ಪುನರ್ವಸು ನಕ್ಷತ್ರದಲ್ಲಿ, ಮಧ್ಯಾಹ್ನದಲ್ಲಿ, ಕರ್ಕ ಲಗ್ನದಲ್ಲಿ ಸೂರ್ಯಾದಿ ಐದು ಗ್ರಹಗಳಿದ್ದಾಗ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಜನ್ಮವಾಯಿತು. ದೇವತೆಗಳು ಮತ್ತು ಅವತಾರಗಳ ಜನ್ಮತಿಥಿಯಂದು ಭೂಮಿಯ ಮೇಲೆ ಅವರ ತತ್ತ್ವವು ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ. ಶ್ರೀರಾಮ ನವಮಿಗೆ ಶ್ರೀರಾಮತತ್ತ್ವವು ಎಂದಿಗಿಂತ 1000 ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ರಾಮ ನವಮಿಗೆ ‘ಶ್ರೀರಾಮ ಜಯ ರಾಮ ಜಯ ಜಯ ರಾಮ’ ನಾಮಜಪ, ಹಾಗೆಯೇ ಶ್ರೀರಾಮನ ಇತರ ಉಪಾಸನೆಗಳನ್ನು ಭಾವ ಪೂರ್ಣವಾಗಿ ಮಾಡುವುದರಿಂದ ರಾಮತತ್ತ್ವದ ಲಾಭವನ್ನು ಆದಷ್ಟು ಹೆಚ್ಚು ಪಡೆಯಲು ಸಹಾಯವಾಗುತ್ತದೆ.

    ಆಚರಿಸುವ ಪದ್ಧತಿ ಅನೇಕ ರಾಮ ಮಂದಿರಗಳಲ್ಲಿ ಚೈತ್ರ ಶುಕ್ಲ ಪ್ರತಿಪದೆಯಿಂದ ಒಂಭತ್ತು ದಿನಗಳ ಕಾಲ ಈ ಉತ್ಸವವು ನಡೆಯುತ್ತದೆ. ರಾಮಾಯಣದ ಪಾರಾಯಣ, ಹರಿಕಥೆ ಮತ್ತು ರಾಮನ ಮೂರ್ತಿಗೆ ವಿವಿಧ ಶೃಂಗಾರ ಮುಂತಾದವುಗ ಳೊಂದಿಗೆ ಈ ಉತ್ಸವವನ್ನು ಆಚರಿಸುತ್ತಾರೆ. ನವಮಿಯಂದು ಮಧ್ಯಾಹ್ನ ರಾಮಜನ್ಮದ ಕೀರ್ತನೆಯಾಗುತ್ತದೆ. ಮಧ್ಯಾಹ್ನ ಕುಂಚಿಗೆ ಹಾಕಿದ ತೆಂಗಿನಕಾಯಿಯನ್ನು ತೊಟ್ಟಿಲಿನಲ್ಲಿಟ್ಟು ತೂಗುತ್ತಾರೆ. ಭಕ್ತರು ಅದರ ಮೇಲೆ, ಗುಲಾಲು ಮತ್ತು ಹೂವುಗಳನ್ನು ಅರ್ಪಿಸುತ್ತಾರೆ. (ಕೆಲವು

    ಕಡೆಗಳಲ್ಲಿ ತೆಂಗಿನ ಕಾಯಿಯ ಬದಲು ರಾಮನ ಮೂರ್ತಿಯನ್ನು ತೊಟ್ಟಿಲಿನಲ್ಲಿ ಇಡುತ್ತಾರೆ.) ಈ ಸಂದರ್ಭದಲ್ಲಿ ಶ್ರೀರಾಮ ಜನ್ಮದ ಗೀತೆಯನ್ನು ಹೇಳಲಾಗುತ್ತದೆ. ನಂತರರಾಮನ ಮೂರ್ತಿಯನ್ನು ಪೂಜಿಸುತ್ತಾರೆ ಮತ್ತು ಪ್ರಸಾದ ವೆಂದು ಶುಂಠಿಚೂರ್ಣವನ್ನು ಕೊಡುತ್ತಾರೆ. ಕೆಲವು ಕಡೆಗಳಲ್ಲಿ ಶುಂಠಿಚೂರ್ಣದೊಂದಿಗೆ ಮಹಾಪ್ರಸಾದವನ್ನೂ ನೀಡುತ್ತಾರೆ.

    ಶ್ರೀರಾಮನಲ್ಲಿ ವಿರಾಟನ ಸಾಮರ್ಥ್ಯವಿತ್ತು!: ಶೂರ್ಪ ಣಖಿಯು ಅವಳ ಸಹೋದರ ಖರ ಮತ್ತು ದೂಷಣ ಹಾಗೂ 10 ಸಾವಿರ ಸೈನ್ಯದೊಂದಿಗೆ ಬಂದಾಗ ರಾಮನು ಲಕ್ಷ್ಮಣನಿಗೆ, ‘ನೀನು ಸೀತೆಯನ್ನು ನೋಡಿಕೋ! ಈ ಸೈನ್ಯವನ್ನು ಸೋಲಿಸಲು ನಾನೊಬ್ಬನೇ ಸಾಕು’ ಎಂದು ಹೇಳಿದನು. ಇದರಿಂದ ರಾಮನ ಶೌರ್ಯದ ಕಲ್ಪನೆ ಬರುತ್ತದೆ. ಇಲ್ಲಿ ರಾಮನ ಮನಸ್ಸಿನ ವೈಶಾಲ್ಯವು ತಿಳಿಯುತ್ತದೆ. ರಾಮನ ಮನಸ್ಸು ವಿಶ್ವವ್ಯಾಪಕವಾಗಿತ್ತು. ಅವನು ಈಶ್ವರನ ಅಂಶವಾಗಿದ್ದನು. ಈಶ್ವರನ ಸಾಮರ್ಥ್ಯವು ಅವನಲ್ಲಿ ಬಂದಿತ್ತು. ಪೃಥ್ವಿ ಮತ್ತು ಪೃಥ್ವಿಯ ಮೇಲಿನ ಸೈನ್ಯವು ಅವನಿಗೆ ನಗಣ್ಯವಾಗಿತ್ತು.

    ಶ್ರೀರಾಮನವಮಿಯಂದು ರಾಮತತ್ವವು ಸಾವಿರ ಪಟ್ಟು ಹೆಚ್ಚಂತೆ!ಶ್ರೀರಾಮ ಜನಿಸಿದ ಚೈತ್ರ ಶುಕ್ಲ ನವಮಿಯಂದು ಬ್ರಹ್ಮಾಂಡ ದಲ್ಲಿನ ವಾತಾವರಣವನ್ನು ಸಾತ್ತಿ್ವಕ ಮತ್ತು ಚೈತನ್ಯಮಯವ ನ್ನಾಗಿಸಲು ವಿಷ್ಣುತತ್ತ್ವವು ಭೂಲೋಕದತ್ತ ಪ್ರಕ್ಷೇಪಿತವಾಗುತ್ತದೆ ಮತ್ತು ಆ ದಿನ ರಾಮನ ಅಂಶಾತ್ಮಕ ಜನ್ಮವಾಗುತ್ತದೆ ಎಂಬುದು ನಂಬಿಕೆ. ರಾಮ ತತ್ತ್ವಯುಕ್ತ ಸಾತ್ತಿ್ವಕತೆ ಮತ್ತು ಚೈತನ್ಯವನ್ನು ಪ್ರತಿಯೊಂದು ಸಜೀವ ಮತ್ತು ನಿರ್ಜೀವ ವಸ್ತುಗಳು ಗ್ರಹಿಸಿಕೊಳ್ಳುತ್ತವೆ ಮತ್ತು ಅದರಿಂದ ಅವುಗಳಿಗೆ ತಮ್ಮ ಕಾರ್ಯವನ್ನು ಒಳ್ಳೆಯ ರೀತಿಯಿಂದ ಮಾಡಲು ಸಾಧ್ಯವಾಗುತ್ತದೆ.

    ಪ್ರತಿಯೊಬ್ಬರೂ ಲಕ್ಷ್ಮಣರಾಗಬೇಕು!: ಲಕ್ಷ್ಮಣನು ವನವಾಸದಲ್ಲಿದ್ದಾಗ ರಾಮ ಮತ್ತು ಸೀತೆಯರ ಹಿಂದಿನಿಂದ ಹೋಗುತ್ತಿದ್ದನು. ಲಕ್ಷ್ಮಣನಿಗೆ ರಾಮನ ಬಗ್ಗೆ ಬಹಳ ಪ್ರೇಮವಿತ್ತು. ರಾಮನು ಯಾವಾಗಲೂ ತನ್ನ ಎದುರು ಇರಬೇಕೆಂದು ಅನಿಸುತ್ತಿತ್ತು. ಲಕ್ಷ್ಮಣನು ಸದಾ ರಾಮನಾಮ ಜಪಿಸುತ್ತಿದ್ದನು, ಭಜಿಸುತ್ತಿದ್ದನು. ಇಂತಹ ಈ ಭಕ್ತನು ಮಾಯೆಯ, ಅಂದರೆ ಸೀತೆಯ ಮುಖವನ್ನು ಯಾವತ್ತೂ ನೋಡಲಿಲ್ಲ. ಅವನು ಅವಳ ಪದಕಮಲಗಳ ಕಡೆಗೆ ನೋಡಿ ನಡೆಯುತ್ತಿದ್ದನು. ಅದರಿಂದ ಲಕ್ಷ್ಮಣನ ಮೇಲಿನ ಮಾಯೆಯ ಹಿಡಿತವು ಕಡಿಮೆಯಾಯಿತು ಮತ್ತು ಸೀತಾ- ರಾಮ- ಲಕ್ಷ್ಮಣ ಶಬ್ದವು ನಿರ್ವಣವಾಯಿತು.

    ರಾಮಭಕ್ತಿಯ ಸಾಮರ್ಥ್ಯ: ಒಮ್ಮೆ ಅಂಗದನು ರಾಮನದೂತನಾಗಿ ರಾವಣನ ರಾಜ್ಯ ಸಭೆಗೆ ಹೋದನು, ಆಗ ರಾವಣನು ತನ್ನ ಪ್ರಶಂಸೆಯನ್ನು ಮಾಡಿಕೊಂಡು ಅವನನ್ನು ಹೆದರಿಸಿದನು. ಆಗ ಅಂಗದನು ‘ಎಲೈ ರಾವಣನೇ, ಇಲ್ಲಿಯವರೆಗೆ ನಾನು ನಿನ್ನ ಶೌರ್ಯದ ಬಗ್ಗೆ ಕೇಳಿದೆ. ಈಗ ನಾನು ನನ್ನ ಕಾಲನ್ನು ಭೂಮಿಯ ಮೇಲೆ ಇಡುತ್ತೇನೆ, ನೀನು ಅಥವಾ ನಿನ್ನ ಸೈನಿಕರು ಅದನ್ನು ಎತ್ತಿ ತೋರಿಸಬೇಕು. ಅಂದರೆ ನಾನು ನಿನ್ನ ಮಾತುನ್ನು ನಿಜವೆಂದು ನಂಬುತ್ತೇನೆಂದನು. ಅಂಗದನು ‘ಜೈ ಶ್ರೀರಾಮ ಎಂದು ತನ್ನ ಕಾಲನ್ನು ಭೂಮಿಯ ಮೇಲೆ ಇಟ್ಟನು. ಆಶ್ಚರ್ಯದ ಸಂಗತಿಯೆಂದರೆ ರಾವಣ ಅಥವಾ ಅವನ ಎಲ್ಲ ಸೈನಿಕರಿಂದ ಅಂಗದನ ಕಾಲನ್ನು ಅಲುಗಾಡಿಸಲೂ ಆಗಲಿಲ್ಲ. ಇದೇ ರಾಮಭಕ್ತಿಯ ಪರಿಣಾಮ!

     

    ಕಾಂಗ್ರೆಸ್​ ವಿರುದ್ಧ ಎಫ್​ಐಆರ್ ದಾಖಲಿಸಿದ ಬಾಲಿವುಡ್​ ನಟ ಅಮೀರ್ ಖಾನ್..! ಕಾರಣ ಹೀಗಿದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts