More

    ನಿವೇಶನ, ಫ್ಲ್ಯಾಟ್​ ಖರೀದಿಗೆ ಡಿಡಿಎ ಮಾದರಿಯಲ್ಲಿ ಆನ್​ಲೈನ್​ ವ್ಯವಸ್ಥೆ

    ಬೆಂಗಳೂರು: ನಿವೇಶನ, ಫ್ಲ್ಯಾಟ್​ ಖರೀದಿಗಾಗಿ ಸಾರ್ವಜನಿಕರು ಬಿಡಿಎ ಕಚೇರಿಗೆ ಅಲೆಯುವ ತಾಪತ್ರಯ ತಪ್ಪಿಸಲು ದೆಹಲಿ ಅಭಿವೃದ್ಧಿ ಪ್ರಾಧಿಕಾರದ ವ್ಯವಸ್ಥೆ ಜಾರಿಗೊಳಿಸಲು ಬಿಡಿಎ ಅಧಿಕಾರಿಗಳು ಮುಂದಾಗಿದ್ದಾರೆ.

    ಬಿಡಿಎ ನಿಮಿರ್ಸಿರುವ ಬಡಾವಣೆಗಳಲ್ಲಿನ ನಿವೇಶನ ಅಥವಾ ಫ್ಲ್ಯಾಟ್​ ಖರೀದಿಗೆ ಅಜಿರ್ ಸಲ್ಲಿಸುವ ಸಾರ್ವಜನಿಕರು ದಾಖಲೆಗಳ ಸಲ್ಲಿಕೆ, ದಾಖಲೆಗಳ ಪರಿಶೀಲನೆ, ಶುಲ್ಕ ಪಾವತಿ ಹೀಗೆ ಹಲವು ಪ್ರಕ್ರಿಯೆಗಾಗಿ ಬಿಡಿಎ ಕಚೇರಿಗಳಿಗೆ ಅಲೆಯಬೇಕಾಗುತ್ತದೆ. ಒಮ್ಮೆ ಅರ್ಜಿ ಸಲ್ಲಿಸಿದವರು, ದಿನಗಟ್ಟಲೆ ಅದೇ ಕೆಲಸ ಮಾಡಬೇಕಿದೆ. ಈ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಮುಂದಾಗಿರುವ ಬಿಡಿಎ ಅಧಿಕಾರಿಗಳು, ಎಲ್ಲವನ್ನೂ ಆನ್​ಲೈನ್​ ವ್ಯವಸ್ಥೆ ಜಾರಿಗೊಳಿಸಲು ಕ್ರಮ ಕೈಗೊಳ್ಳುತ್ತಿದ್ದಾರೆ. ಅದರಂತೆ ಸಾರ್ವಜನಿಕರು ಆನ್​ಲೈನ್​ ಮೂಲಕವೇ ಅಜಿರ್ ಸಲ್ಲಿಸಿ, ಆರಂಭಿಕ ಶುಲ್ಕ ಪಾವತಿಸಬೇಕಿದೆ. ಅದಾದ ನಂತರ ನಿವೇಶನ ಅಥವಾ ಫ್ಲ್ಯಾಟ್ ನೋಂದಣಿ ಸಮಯದಲ್ಲಿ ಬಿಡಿಎ ಕಚೇರಿ ಅಥವಾ ಉಪನೋಂದಣಿ ಕಚೇರಿಗೆ ಬಂದರೆ ಸಾಕಾಗಲಿದೆ.

    ಇದನ್ನೂ ಓದಿ: ಲವ್​ ಸೆಕ್ಸ್ ಧೋಖಾ, ಡರ್ಟಿ ಪಿಕ್ಚರ್ ನಟಿ ಆರ್ಯಾ ಬ್ಯಾನರ್ಜಿ ಶವವಾಗಿ ಪತ್ತೆ

    ದೆಹಲಿ ಮಾದರಿ: ಸದ್ಯ ದೆಹಲಿ ಅಭಿವೃದ್ಧಿ ಪ್ರಾಧಿಕಾರದಲ್ಲಿ ಆನ್​ಲೈನ್​ ವ್ಯವಸ್ಥೆ ಜಾರಿಯಲ್ಲಿದೆ. ಅಲ್ಲೂ ಕೂಡ ಎಲ್ಲ ಪ್ರಕ್ರಿಯೆಯೂ ಆನ್​ಲೈನ್​ ಮೂಲಕವೇ ನಡೆಯಲಿದೆ. ಅದೇ ಮಾದರಿಯನ್ನು ಇದೀಗ ಬಿಡಿಎ ಅಳವಡಿಸಿಕೊಳ್ಳಲು ಮುಂದಾಗಿದೆ. ಅದಕ್ಕಾಗಿ ಪ್ರತ್ಯೇಕ ವೆಬ್​ಸೈಟ್​ ತೆರೆಯಲು ಬಿಡಿಎ ಚಿಂತನೆ ನಡೆಸಿದೆ.

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts