More

    16ರಂದು ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ

    ಬೆಳಗಾವಿ: ಗಡಿಭಾಗದಲ್ಲಿ ನಾಲ್ಕು ತಲೆಮಾರುಗಳಿಂದ ಸಾಮಾಜಿಕ ಸೇವೆಯನ್ನು ವ್ರತದಂತೆ ಸ್ವೀಕರಿಸಿರುವ ಕವಟಗಿಮಠ ಮನೆತನ ಸ್ಥಾಪಿಸಿರುವ ‘ಮಹಾಂತೇಶ ಕವಟಗಿಮಠ ಚಾರಿಟೇಬಲ್ ಟ್ರಸ್ಟ್’ ಉದ್ಘಾಟನೆ ಸಮಾರಂಭ ಜ.16ರಂದು ಸವದತ್ತಿ ಪಟ್ಟಣದಲ್ಲಿ ಜರುಗಲಿದೆ ಎಂದು ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ ತಿಳಿಸಿದರು.

    ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾತೋಶ್ರೀ ಶರಣೆ ಶಾಂತಾದೇವಿ ಮಲ್ಲಯ್ಯಸ್ವಾಮಿ ಕವಟಗಿಮಠ ಅವರ ಸದಿಚ್ಛೆಯಂತೆ ಕವಟಗಿಮಠ ಕುಟುಂಬ ಚಾರಿಟೇಬಲ್ ಟ್ರಸ್ಟ್ ಆರಂಭಿಸುತ್ತಿದೆ. ಸವದತ್ತಿಯು ತಾಯಿಯ ತವರು ಮನೆಯಾಗಿದ್ದು, ಶಕ್ತಿದೇವತೆ ಯಲ್ಲಮ್ಮದೇವಿ ಪವಿತ್ರ ಪುಣ್ಯಕ್ಷೇತ್ರದಲ್ಲಿ ಪೂಜ್ಯರ ಸಮ್ಮುಖದಲ್ಲಿ ಟ್ರಸ್ಟ್ ಉದ್ಘಾಟನೆಗೊಳ್ಳುತ್ತಿದೆ ಎಂದರು.

    ಸಹೋದರ ಜಗದೀಶ ಕವಟಗಿಮಠ ಅವರು 20 ವರ್ಷಗಳಿಂದ ಸಹಕಾರಿ ಮಂಡಳಿಗಳ ನಿಕಟಪೂರ್ವ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಿಕ್ಕೋಡಿ ತಾಲೂಕಿನ ಕೃಷಿ ಹುಟ್ಟುವಳಿ ಸಹಕಾರಿ ಮಾರುಕಟ್ಟೆ, ನಿಪ್ಪಾಣಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಸಿಎಲ್‌ಇ ಸಂಸ್ಥೆಗಳ ಮೂಲಕ 18 ಶಿಕ್ಷಣ ಸಂಸ್ಥೆಗಳನ್ನು ಗುಣಾತ್ಮಕವಾಗಿ ಬೆಳೆಸಿದ್ದಾರೆ. ಹೀಗೆ ಜಗದೀಶ ಕವಟಗಿಮಠ ಶಿಕ್ಷಣ ಹಾಗೂ ಸಹಕಾರಿ ನೆಲೆಯಲ್ಲಿ ಅಗಾಧ ಸೇವೆ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ತಿಳಿಸಿದರು. ಕಳೆದೊಂದು ಶತಮಾನದಿಂದ ಕವಟಗಿಮಠ ಕುಟುಂಬ ಕೃಷಿ, ಸಹಕಾರಿ, ವ್ಯಾಪಾರ, ಸರಾಫಿವೃತ್ತಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಮಹತ್ತರ ಕೊಡುಗೆ ನೀಡುತ್ತ ಬಂದಿದೆ. ಕೃಷಿ, ವಾಣಿಜ್ಯಗಳಲ್ಲದೆ ಸಹಕಾರಿ ಕ್ಷೇತ್ರದಲ್ಲೂ ಹೆಜ್ಜೆಗುರುತು ಮೂಡಿಸಿದ್ದರು. ಇದೀಗ ಶರತಚಂದ್ರ ಕವಟಗಿಮಠ ಅವರು ಮಹಾಂತೇಶ ಕವಟಗಿಮಠ ಸೌಹಾರ್ದ ಸಹಕಾರಿ ಸಂಘ ನಿಯಮಿತ ನೂತನ ಸೌಹಾರ್ದ ನಿಯಮಿತದ ಅಧ್ಯಕ್ಷರಾಗಿ ಸಹಕಾರಿ ಕ್ಷೇತ್ರಕ್ಕೆ ಸಾಕ್ಷಿಯಾಗಿದ್ದಾರೆ ಎಂದು ವಿವರಿಸಿದರು.

    ಕೆ.ವಿ.ಪಾಟೀಲ, ಶರತಚಂದ್ರ ಕವಟಗಿಮಠ, ಸಿ.ಆರ್.ಪಾಟೀಲ, ಪ್ರಮೋದ ಕೋಚರಿ, ರಾಜೇಂದ್ರ ಮುತಗೇಕರ, ಶಿವಯೋಗಿ ಮಠ, ಪ್ರಶಾಂತ ಹಿರೇಮಠ ಇತರರಿದ್ದರು.

    ಸವದತ್ತಿ ಪಟ್ಟಣದಲ್ಲಿ ಭವ್ಯ ಸಮಾರಂಭ

    ಸವದತ್ತಿಯ ಕೆಎಲ್‌ಇ ಸಂಸ್ಥೆಯ ಎಸ್.ವಿ.ಎಸ್.ಬೆಳ್ಳುಬ್ಬಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಆವರಣದಲ್ಲಿ ಜ.16ರಂದು ಬೆಳಗ್ಗೆ 10.30ಕ್ಕೆ ಟ್ರಸ್ಟ್ ಉದ್ಘಾಟನೆ ಸಮಾರಂಭ ಜರುಗಲಿದೆ. ಮೈಸೂರು ಸುತ್ತೂರಿನ ವೀರಸಿಂಹಾಸನಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ತುಮಕೂರು ಸಿದ್ಧಗಂಗಾಮಠದ ಸಿದ್ಧಲಿಂಗ ಸ್ವಾಮೀಜಿ, ಗದಗ ತೋಂಟದಾರ್ಯ ಸಂಸ್ಥಾನಮಠದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ, ಹುಬ್ಬಳ್ಳಿ ಮೂರುಸಾವಿರ ಮಠದ ಡಾ.ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಇಂಚಲ ಸಂಸ್ಥಾನ ಮಠದ ಶಿವಾನಂದ ಭಾರತಿ ಸ್ವಾಮೀಜಿ, ನಿಡಸೋಸಿ ಸಿದ್ಧಸಂಸ್ಥಾನಮಠದ ಪಂಚಮಶಿವಲಿಂಗೆಶ್ವರ ಸ್ವಾಮೀಜಿ, ಮುರಗೋಡ ಮಹಾಂತ ದುರದುಂಡೀಶ್ವರಮಠ ನೀಲಕಂಠ ಸ್ವಾಮೀಜಿ, ಧಾರವಾಡ ಮುರುಘಾಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ, ಕೂಡಲಸಂಗಮ ಪಂಚಮಸಾಲಿ ಲಿಂಗಾಯತ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ, ಹೊಸದುರ್ಗದ ಡಾ.ಪುರುಷೋತ್ತಮಾನಂದಪುರಿ ಸೇರಿ ವಿವಿಧ ಮಠಾಧೀಶರು ಆಗಮಿಸಲಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಭಾಗವಹಿಸಲಿದ್ದಾರೆ ಎಂದು ಮಹಾಂತೇಶ ಕವಟಗಿಮಠ ತಿಳಿಸಿದರು.

    ‘ಪಂಚ’ಉದ್ದೇಶ

    • ಬಡಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಶಿಕ್ಷಣದ ವರೆಗೆ ಧನಸಹಾಯ ಮಾಡುವುದು.
    • ಬಡರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆ ಸೌಲಭ್ಯ, ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಆಯೋಜಿಸುವುದು.
    • ಸಸಿಗಳನ್ನು ನೆಡುವುದು, ವನ ಮಹೋತ್ಸವ ಆಚರಿಸುವುದು, ಪ್ಲಾಸ್ಟಿಕ್ ತ್ಯಾಜ್ಯಗಳ ನಿವಾರಣೆ.
    • ಯುವಜನಾಂಗದಲ್ಲಿ ನೈತಿಕ ಶಿಕ್ಷಣಕ್ಕೆ ಆದ್ಯತೆ ನೀಡುವುದು.
    • ಸಹಕಾರಿ ಪತ್ತಿನ ಸಂಘದ ಮೂಲಕ ರೈತರನ್ನು ಸ್ವಾಭಿಮಾನಿಗಳನ್ನಾಗಿ ಮಾಡುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts