More

    ಒಲಿಂಪಿಕ್ಸ್​: ಕುಸ್ತಿಯಲ್ಲಿ ಕಂಚಿಗಾಗಿ ಕಾದಾಟ, ಜಾವಲಿನ್​ ಥ್ರೋನಲ್ಲಿ ಚಿನ್ನದಾಸೆ

    ಟೋಕಿಯೋ : ಜಪಾನಿನ ರಾಜಧಾನಿ ಟೋಕಿಯೋದಲ್ಲಿ ನಡೆಯುತ್ತಿರುವ 2020 ಒಲಿಂಪಿಕ್ಸ್​ನಲ್ಲಿ ಭಾರತೀಯ ಆಟಗಾರರ ಕೊನೆಯ ಎರಡು ಸ್ಪರ್ಧೆಗಳು ಇಂದು ಮಧ್ಯಾಹ್ನದ ನಂತರ ನಡೆಯಲಿವೆ. ದೇಶದ ಪದಕದ ಆಸೆಯು ಇನ್ನಿಬ್ಬರು ಆಟಗಾರರ ಮೇಲೆ ಅವಲಂಬಿತವಾಗಿದೆ.

    ಮಧ್ಯಾಹ್ನ 3.55 ಕ್ಕೆ ನಿಗದಿಯಾಗಿರುವ ಪುರುಷರ ಫ್ರೀಸ್ಟೈಲ್​​ 65 ಕೆಜಿ ವಿಭಾಗದ ಪಂದ್ಯದಲ್ಲಿ ಕುಸ್ತಿಪಟು ಭಜರಂಗ್​ ಪುನಿಯ ಅವರು ಕಂಚಿನ ಪದಕಕ್ಕಾಗಿ ಸೆಣೆಸಲಿದ್ದಾರೆ.

    ಇದನ್ನೂ ಓದಿ: ಬಾಕ್ಸಿಂಗ್​ನಲ್ಲಿ ಭಾರತಕ್ಕೆ ಕಂಚು; ಸೋತರೂ ಗೆದ್ದ ಲವ್ಲೀನಾ!

    ಪುರುಷರ ಜಾವಲಿನ್ ಥ್ರೋನಲ್ಲಿ ನೀರಜ್​ ಚೋಪ್ರ ಅವರು ಅಂತಿಮ ಸುತ್ತಿನಲ್ಲಿ ಸ್ಪರ್ಧಿಸುತ್ತಿದ್ದು, ಸಂಜೆ 4.30 ಕ್ಕೆ ಈ ಸ್ಪರ್ಧೆ ನಡೆಯಲಿದೆ. ಅರ್ಹತಾ ಸುತ್ತಿನಲ್ಲಿ ಮೊದಲ ಸ್ಥಾನ ಪಡೆದ 23 ವರ್ಷ ವಯಸ್ಸಿನ ನೀರಜ್​,​ ಭಾರತಕ್ಕೆ ಚಿನ್ನದ ಆಸೆ ಹುಟ್ಟಿಸಿದ್ದಾರೆ.

    ಇಂದು ಬೆಳಗಿನ ಜಾವದಿಂದಲೇ ಆರಂಭವಾಗಿ ನೆರವೇರಿದ ಮಹಿಳೆಯರ ಗಾಲ್ಫ್​​ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಬೆಂಗಳೂರಿನ ಅದಿತಿ ಅಶೋಕ್​ ನಾಲ್ಕನೇ ಸ್ಥಾನ ಗಳಿಸಿದ್ದು, ಪದಕ ಕೈತಪ್ಪಿದೆ. (ಏಜೆನ್ಸೀಸ್)

    ಒಲಿಂಪಿಕ್ಸ್​: ಮೊದಲನೇ ಎಸೆತದಲ್ಲೇ ಫೈನಲ್ಸ್​​ಗೆ ಆಯ್ಕೆಯಾದ ಭಾರತದ ನೀರಜ್​ ಚೋಪ್ರ

    ಗಾಲ್ಫ್​ನಲ್ಲಿ ಪದಕ ಜಸ್ಟ್​ ಮಿಸ್! ಒಲಿಂಪಿಕ್ಸ್​ನಲ್ಲಿ 4ನೇ ಸ್ಥಾನ ಗಳಿಸಿದ ಬೆಂಗಳೂರಿನ ಅದಿತಿ ಅಶೋಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts