More

    ಕ್ರೊಯೇಷಿಯಾದಲ್ಲಿ ವಾಸ್ತವ್ಯ ಹೂಡಲಿದೆ ಭಾರತದ ಒಲಂಪಿಕ್ ಶೂಟಿಂಗ್ ತಂಡ

    ನವದೆಹಲಿ : ಒಲಂಪಿಕ್ಸ್​ಗೆ ತಯಾರಾಗಿರುವ ಭಾರತದ ಶೂಟಿಂಗ್​ ತಂಡಕ್ಕೆ ಸುರಕ್ಷಿತ ಪರಿಸರದಲ್ಲಿ ಉತ್ತಮ ತರಬೇತಿ ಒದಗಿಸಲು, ಕ್ರೊಯೇಷಿಯಾದಲ್ಲಿ 78 ದಿನಗಳ ಕಾಲ ಉಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕ್ರೀಡಾ ಸಚಿವ ಕಿರೆನ್ ರಿಜಿಜು ಹೇಳಿದ್ದಾರೆ. ಈ ತಂಡದ ಭಾಗವಾದ 13 ಜನ ಶೂಟರ್​ಗಳು ಮೇ 10 ರಂದು ಚಾರ್ಟರ್ಡ್​ ವಿಮಾನದಲ್ಲಿ ಕ್ರೊಯೇಷಿಯಾದ ಜಗ್ರೇಬ್​ಗೆ ತೆರಳಲಿದ್ದಾರೆ ಎಂದು ಹೇಳಿದ್ದಾರೆ.

    “ಟೋಕಿಯೋಗೆ ಹೊರಟಿರುವ ಅಥ್ಲೀಟ್​ಗಳಿಗೆ ಅತ್ಯುತ್ತಮವಾದ ತರಬೇತಿಯನ್ನು ಸುರಕ್ಷಿತ ವಾತಾವರಣದಲ್ಲಿ ನೀಡುವ ಆಶಯ ನಮ್ಮದು. ಆದ್ದರಿಂದ ಕ್ರೀಡಾ ಇಲಾಖೆ ಮತ್ತು ಎನ್​ಆರ್​ಎಐ 13 ಸದಸ್ಯರ ಶೂಟಿಂಗ್ ಸ್ಕ್ವಾಡ್​​ಅನ್ನು ತರಬೇತಿಗಾಗಿ 78 ದಿನಗಳ ಕಾಲ ಕ್ರೊಯೇಷಿಯಾದಲ್ಲಿರಿಸಲು ನಿರ್ಧರಿಸಿವೆ” ಎಂದು ಸಚಿವರು ತಿಳಿಸಿದ್ದಾರೆ.

    ಇದನ್ನೂ ಓದಿ: ವೇಶ್ಯೆಯ ಬರ್ಬರ ಕೊಲೆ : ಪರಾರಿಯಾಗುತ್ತಿದ್ದ ಆರೋಪಿ ಪೊಲೀಸ್​ ವಶಕ್ಕೆ

    ಭಾರತದ ಒಲಂಪಿಕ್ ಶೂಟಿಂಗ್ ತಂಡವು ಈ ಮುನ್ನ ಯುರೋಪಿಯನ್ ಚಾಂಪಿಯನ್​ಶಿಪ್​ನಲ್ಲಿ ಪಾಲ್ಗೊಳ್ಳುವುದಕ್ಕಾಗಿ ಮೇ 11 ರಂದು ಹೊರಡುವ ಯೋಜನೆಯಿತ್ತು. ಮೇ 20 ರಿಂದ ಜೂನ್ 6 ರವರೆಗೆ ಈ ಸ್ಪರ್ಧೆಗಳು ನಡೆಯಲಿದ್ದು, ತದನಂತರ ಆಟಗಾರರು ಅಲ್ಲಿಯೇ ವಾಸ್ತವ್ಯ ಹೂಡಲು ಕ್ರೊಯೇಷಿನ್ ಶೂಟಿಂಗ್​ ಫೆಡರೇಷನ್​ನ ಸಹಯೋಗದೊಂದಿಗೆ ವ್ಯವಸ್ಥೆ ಮಾಡಲಾಗಿದೆ. ನಂತರ ಜುಲೈನಲ್ಲಿ ಜಪಾನಿನ ರಾಜಧಾನಿ ಟೋಕಿಯೋದಲ್ಲಿ ನಡೆಯಲಿರುವ ಒಲಂಪಿಕ್ಸ್​ನಲ್ಲಿ ಭಾಗವಹಿಸಲು ನೇರವಾಗಿ ತೆರಳಲಿದ್ದಾರೆ ಎನ್ನಲಾಗಿದೆ.

    ಕರೊನಾ ಸೋಂಕು ತಗುಲುವ ಸಾಧ್ಯತೆಯನ್ನು ಗರಿಷ್ಠ ಮಟ್ಟಕ್ಕೆ ಇಲ್ಲವಾಗಿಸಲು ಶೂಟರ್ಸ್​ ತಂಡದ ಪ್ರಯಾಣಕ್ಕೆ ಚಾರ್ಟರ್ಡ್​ ಪ್ಲೇನಿನ ವ್ಯವಸ್ಥೆ ಮಾಡಲಾಗಿದೆ. ಆಟಗಾರರ ಖಾಸಗಿ ಕೋಚ್​ಗಳು ಮತ್ತು ಸಹಾಯಕ ಸಿಬ್ಬಂದಿ ಕೂಡ ಅವರೊಂದಿಗೆ ತೆರಳಲಿದ್ದು, ಎಲ್ಲರಿಗೂ ಕರೊನಾ ಲಸಿಕೆ ನೀಡಲಾಗಿದೆ ಎನ್ನಲಾಗಿದೆ. (ಏಜೆನ್ಸೀಸ್)

    ಕರ್ಫ್ಯೂ ಇದೆ ಅಂತ ಆ್ಯಂಬುಲೆನ್ಸ್​ನಲ್ಲಿ ಪ್ರಯಾಣಿಸಿದ ಬಿಗ್​ ಬಾಸ್​ ಸ್ಪರ್ಧಿ

    ಸೈಬರ್​ ಖದೀಮರ ಕಳ್ಳಾಟ : ಔಷಧ, ಆಕ್ಸಿಜನ್​ ಪೂರೈಕೆ ಸೋಗಲ್ಲಿ ವಂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts