More

    ಸತತ ಪರಿಶ್ರಮದಿಂದ ಸಾಧನೆ ಸಾಧ್ಯ

    ಕಾನಹೊಸಹಳ್ಳಿ: ಶಾಲಾ ಪರಿಸರದಿಂದ ವಿದ್ಯಾರ್ಥಿಗಳ ಕಲಿಕೆ ಗುಣಮಟ್ಟ ಹೆಚ್ಚಲಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹೇಳಿದರು.

    ಗುಣಮಟ್ಟ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಿ

    ಸಮೀಪದ ಚಿಕ್ಕಜೋಗಿಹಳ್ಳಿ ಜವಾಹರ್ ನವೋದಯ ವಿದ್ಯಾಲಯದ ಆವರಣದಲ್ಲಿ 11ನೇ ಬ್ಯಾಚ್‌ನ ಹಳೆಯ ವಿದ್ಯಾರ್ಥಿಗಳ ಸಂಘವು ಭಾನುವಾರ ಆಯೋಜಿಸಿದ್ದ 2ನೇ ವರ್ಷದ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಗುಣಮಟ್ಟ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕಾರ ಮಾಡಬೇಕು ಎಂದರು.

    ಇದನ್ನೂ ಓದಿ: ಮುಂಬೈ ಇಂಡಿಯನ್ಸ್​ ತಂಡದ ನಾಯಕತ್ವ ಬದಲಾವಣೆ: ರೋಹಿತ್​ ಪತ್ನಿ ರಿತಿಕಾ ಕೊಟ್ಟ ಮೊದಲ ಪ್ರತಿಕ್ರಿಯೆ ಹೀಗಿದೆ…

    ನಾನು ನವೋದಯ ವಿದ್ಯಾಲಯದ ಪ್ರವೇಶ ಪರೀಕ್ಷೆ ಬರೆದ ಫೇಲ್ ಆಗಿದ್ದೆ. ಆದರೆ, ಸತತ ಪರಿಶ್ರಮದಿಂದ ಐಎಎಸ್ ಉತ್ತೀರ್ಣ ಹೊಂದಿ ಜಿಲ್ಲಾಧಿಕಾರಿಯಾಗಿರುವೆ. ಅಲ್ಲದೆ ಜವಾಹರ್ ನವೋದಯ ವಿದ್ಯಾಲಯದ ಅಧ್ಯಕ್ಷನಾಗಿ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಇದಕ್ಕೆ ಶೈಕ್ಷಣಿಕ ವಲಯದ ಪರಿಸರ ಕಾರಣ ಎಂದು ಹೇಳಿದರು.

    ವಿದ್ಯಾಲಯದ ಹಳೆಯ ವಿದ್ಯಾರ್ಥಿ ಹಾಗು ಐಆರ್‌ಎಸ್ ಅಧಿಕಾರಿ ಬೆಂಗಳೂರು ನೈರುತ್ಯ ವಲಯದ ಆಯುಕ್ತ ಡಾ.ಕೋಟ್ರಸ್ವಾಮಿ ಮರೇಗೌಡ ಮಾತನಾಡಿ, ವಿದ್ಯಾಲಯದಲ್ಲಿ ಕಲಿತ ಅನೇಕರು ಇಂದು ಉತ್ತಮ ಶಿಕ್ಷಣ ಪಡೆದ ಉನ್ನತ ಹುದ್ದೆ ಪಡೆದುಕೊಂಡಿದ್ದಾರೆ. ದೇಶ-ವಿದೇಶ, ರಾಜ್ಯದ ವಿವಿಧ ಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು .

    ಧಾರವಾಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಹಳೆಯ ವಿದ್ಯಾರ್ಥಿ ಡಾ.ಸಂದೀಪ್ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯ ಸುದೇಶ್ ಗೋಪಾಲ್ ಮಲಾಜರೆ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಚಾರ್ಯ ಯು.ಎಸ್.ಬಳ್ಳಾರಿ, ಕೆ.ವಿ.ವಿಜಯಲಕ್ಷ್ಮೀ, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಾ.ಶರಣಬಸವ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts