More

    ಒಕ್ಕಲಿಗರ ಸಂಘದಿಂದ ವಿಶ್ವವಿದ್ಯಾಲಯ ಸ್ಥಾಪನೆಗೆ ಚಿಂತನೆ: ಅಧ್ಯಕ್ಷ ಬಾಲಕೃಷ್ಣ

    ಚಿಕ್ಕಮಗಳೂರು: ಒಕ್ಕಲಿಗರ ಸಂಘದಿಂದ ವಿಶ್ವವಿದ್ಯಾಲಯ ಆರಂಭಿಸುವ ಚಿಂತನೆ ಇದೆ. ಮಂಡ್ಯದಲ್ಲಿ ನರ್ಸಿಂಗ್​ ಕಾಲೇಜು ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಶ್ರೀಗಂಧ ಕಾವಲ್​ನಲ್ಲಿ ಆಯುರ್ವೇದಿಕ್​ ಕಾಲೇಜು ಮಂಜೂರಾಗಿದ್ದು, ಶೀಘ್ರವೇ ಆರಂಭಿಸಲಾಗುವುದು ಎಂದು ಸಂಘದ ಅಧ್ಯಕ್ಷ ಸಿ.ಎನ್​.ಬಾಲಕೃಷ್ಣ ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿ.ಎನ್​.ಬಾಲಕೃಷ್ಣ, ನರ್ಸಿಂಗ್​ ಕಾಲೇಜು ಮತ್ತು ಬಿಐಟಿ ವಿದ್ಯಾರ್ಥಿನಿಯರಿಗೆ 25 ಕೋಟಿ ರೂ. ವೆಚ್ಚದಲ್ಲಿ ಹಾಸ್ಟೆಲ್​ ನಿರ್ಮಿಸಲಾಗುವುದು. ಚಿಕ್ಕಬಳ್ಳಾಪುರ, ಹಾಸನ, ತುಮಕೂರು, ಚನ್ನಪಟ್ಟಣದಲ್ಲಿ ಬಡ ಒಕ್ಕಲಿಗ ವಿದ್ಯಾರ್ಥಿಗಳಿಗೆ ಹಾಸ್ಟೆಲ್​ ಆರಂಭಿಸಲಾಗುತ್ತಿದೆ ಎಂದರು.

    ಚಿಕ್ಕಮಗಳೂರು ಜಿಲ್ಲೆಯಲ್ಲೂ ಒಕ್ಕಲಿಗ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಠಿಯಿಂದ ವಿದ್ಯಾರ್ಥಿ ನಿಲಯ ನಿರ್ಮಿಸಲಾಗುವುದು. ಕೆಂಪೇಗೌಡ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಸಂಘದಿಂದ ಜಿಲ್ಲಾ ಕೇಂದ್ರಗಳಿಗೆ ತಲಾ 1 ಲಕ್ಷ ಹಾಗೂ ತಾಲೂಕು ಕೇಂದ್ರಗಳಿಗೆ ತಲಾ 25 ಸಾವಿರ ರೂ. ನೀಡಲಾಗುವುದು ಎಂದರು.

    ಒಕ್ಕಲಿಗರ ಸಂಘ 5 ಲಕ್ಷ ಸದಸ್ಯರನ್ನು ಹೊಂದಿದೆ. ಹೊಸ ಸದಸ್ಯತ್ವಕ್ಕೆ 15 ರಿಂದ 20 ದಿನಗಳಲ್ಲಿ ಅರ್ಜಿ ಆಹ್ವಾನಿಸಲಾಗುವುದು. ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ತಿಳಿಸಿದರು. ಜಿಲ್ಲಾ ಒಕ್ಕಲಿಗರ ಸಂಘದ ಮುಖಂಡರಾದ ಪೂರ್ಣೇಶ್​, ಎಂ.ಸಿ.ಅಶೋಕ್​ ಇದ್ದರು.

    ರೇವಣ್ಣ ನಮ್ಮ ಪಕ್ಷದ ಜ್ಯೋತಿಷಿ… ಎನ್ನುತ್ತಲೇ ಇಂದು ನಡೆಯಬೇಕಿದ್ದ ಬಹುನಿರೀಕ್ಷಿತ ಕಾರ್ಯವನ್ನು ಮುಂದೂಡಿದ ಎಚ್​ಡಿಕೆ!

    ತಮಿಳು ಮಕ್ಕಳ ಕನ್ನಡ ಪ್ರೀತಿ! ಸ್ವಗ್ರಾಮದಲ್ಲಿ ತಮಿಳು ಶಾಲೆ ಇದ್ದರೂ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲೇ ಓದುತ್ತಿದ್ದಾರೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts