More

    ಹಾಸ್ಟೆಲ್‌ನಲ್ಲಿ ಉಚಿತ ಸೌಲಭ್ಯ ಕಲ್ಪಿಸಲು ಒಕ್ಕಲಿಗರ ಯುವ ವೇದಿಕೆ ಮನವಿ

    ಶಿವಮೊಗ್ಗ: ಒಕ್ಕಲಿಗರ ಮಹಿಳಾ ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಗುರುವಾರ ಜಿಲ್ಲಾ ಒಕ್ಕಲಿಗರ ಯುವ ವೇದಿಕೆ ಪದಾಧಿಕಾರಿಗಳು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ ಹಾಗೂ ನಿರ್ದೇಶಕ ಸಿರಿಬೈಲ್ ಧರ್ಮೇಶ್ ಅವರಿಗೆ ಮನವಿ ಸಲ್ಲಿಸಿದರು.
    ವಸತಿ ನಿಲಯದಲ್ಲಿ ಶುಲ್ಕ ಪಡೆಯಲಾಗುತ್ತಿದೆ. ಹಂತಹಂತವಾಗಿ ವಸತಿ ನಿಲಯದ ಪ್ರವೇಶ ಶುಲ್ಕ ಹೆಚ್ಚಿಸಿ ಹಾಲಿ ವಾರ್ಷಿಕ 28 ಸಾವಿರ ರೂ. ಪಡೆಯಲಾಗುತ್ತಿದೆ. ಇದರಿಂದ ಜಿಲ್ಲೆಯ ಬಡ ಒಕ್ಕಲಿಗ ಹೆಣ್ಣುಮಕ್ಕಳಿಗೆ ವಸತಿನಿಲಯದಲ್ಲಿ ಪ್ರವೇಶಾತಿ ಪಡೆಯುವುದು ಕಷ್ಟವಾಗಿದೆ ಎಂದು ದೂರಿದರು.
    ಜಿಲ್ಲೆಯ ಬೇರೆ ಬೇರೆ ಊರುಗಳಿಂದ ಶಿವಮೊಗ್ಗಕ್ಕೆ ಶಿಕ್ಷಣಕ್ಕಾಗಿ ಬರುವ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿ ಸಮಸ್ಯೆ ಇದ್ದು ಇದರಿಂದ ಹಲವು ಒಕ್ಕಲಿಗ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮೊಟಕುಗೊಳಿಸುತ್ತಿದ್ದಾರೆ. ಆದ್ದರಿಂದ ಜಿಲ್ಲೆಯ ಒಕ್ಕಲಿಗ ಬಾಲಕರ ಹಿತದೃಷ್ಟಿಯಿಂದ ರಾಜ್ಯ ಒಕ್ಕಲಿಗೆ ಸಂಘದಿಂದ ಶಿವಮೊಗ್ಗದಲ್ಲಿ ಒಂದು ಬಾಲಕರ ವಸತಿ ನಿಲಯ ಪ್ರಾರಂಭಿಸಬೇಕು ಎಂದು ಮನವಿ ಮಾಡಿದರು.
    ವೇದಿಕೆ ಅಧ್ಯಕ್ಷ ಚೇತನ್ ಗೌಡ, ಬಿ.ಎ.ರಮೇಶ್ ಹೆಗ್ಡೆ, ಜಿ.ವಿಜಯಕುಮಾರ್, ವೇದಿಕೆ ಪ್ರಧಾನ ಕಾರ್ಯದರ್ಶಿ ರಘುಗೌಡ, ಗುರುರಾಜ್ ಗೌಡ, ಪ್ರಮೋದ್ ಗೌಡ, ಸುವರ್ಣಾ ಶಂಕರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts