More

    ಪಾರದರ್ಶಕ ಚುನಾವಣೆಗೆ ಅಧಿಕಾರಿಗಳು ಸಜ್ಜಾಗಿ

    ರಾಯಚೂರು
    ಲೋಕಸಭೆ ಚುನಾವಣೆಯಲ್ಲಿ ನೀತಿ ಸಂಹಿತೆಯನ್ನು ಪಾಲಿಸುವ ಮೂಲಕ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಲು ಎಸ್‌ಎ್ಟಿ ಹಾಗೂ ಎಸ್‌ಎಸ್‌ಟಿ ತಂಡಗಳು ಕಾರ್ಯನಿರ್ವಹಿಸಬೇಕು ಎಂದು ಜಿ.ಪಂ. ಸಿಇಒ ರಾಹುಲ್ ತುಕಾರಾಮ್ ಪಾಂಡ್ವೆ ತಿಳಿಸಿದರು.
    ಸ್ಥಳೀಯ ಜಿ.ಪಂ. ಸಭಾಂಗಣದಲ್ಲಿ ಲೋಕಸಭೆ ಚುನಾವಣೆ ಕಾರ್ಯಕ್ಕಾಗಿ ನಿಯೋಜನೆಗೊಂಡ ಎಸ್‌ಎ್ಟಿ, ಎಸ್‌ಎಸ್‌ಟಿ ತಂಡದ ಸದಸ್ಯರಿಗೆ ಬುಧವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾದಲ್ಲಿ ಮಾತನಾಡಿ, ತಂಡದ ಸದಸ್ಯರು ನಿಯಮಗಳನ್ನು ಅರಿತುಕೊಂಡು ಪಾಲನೆ ಮಾಡಬೇಕು ಎಂದರು.
    ವಿಧಾನಸಭೆ ಕ್ಷೇತ್ರವಾರು ನೋಡಲ್ ಅಧಿಕಾರಿಗಳು, ಲೆಕ್ಕಪತ್ರ ನಿರ್ವಹಣೆ ತಂಡದ ಅಧಿಕಾರಿಗಳು ಅಭ್ಯರ್ಥಿಗಳ ವೆಚ್ಚ ನಿರ್ವಹಣೆ, ಚುನಾವಣೆ ಖರ್ಚುವೆಚ್ಚಗಳ ಮೇಲೆ ನಿಗಾ ವಹಿಸಬೇಕು. ಸಂಚಾರ ಜಾಗೃತ ದಳ, ವಿಡಿಯೋ ಕಣ್ಗಾವಲು ತಂಡ ತಮ್ಮ ಕರ್ತವ್ಯಗಳನ್ನು ಅರಿತುಕೊಳ್ಳಬೇಕು.
    ತಪಾಸಣೆ ವೇಳೆ ಹಣ ಮತ್ತು ಮದ್ಯ ಸಾಗಣೆ ಕಂಡು ಬಂದಲ್ಲಿ ದೂರು ದಾಖಲು ಮಾಡುವಾಗ ಅನುಸರಿಸಬೇಕಾದ ಕಾಯ್ದೆ, ಕಾನೂನುಗಳ ಮಾಹಿತಿ ತಿಳಿದುಕೊಳ್ಳಬೇಕು. ಸಂಬಂಧಿಸಿದ ವೆಚ್ಚ ತಂಡಕ್ಕೆ ಮಾಹಿತಿ ನೀಡುವುದು ಹಾಗೂ ವಾಹನ ಜಪ್ತಿ ನಂತರ ಯಾರ ವಶಕ್ಕೆ ನೀಡಬೇಕೆಂದು ಇರುವ ನಿಯಮಗಳನ್ನು ತಿಳಿದುಕೊಳ್ಳಬೇಕು.
    ತರಬೇತಿಯಲ್ಲಿ ತಮ್ಮ ಕರ್ತವ್ಯದ ಬಗ್ಗೆ ಮಾಹಿತಿ ಪಡೆದುಕೊಂಡು ನೇಮಕಗೊಂಡ ತಂಡದ ಸದಸ್ಯರು ಪಾರದರ್ಶಕವಾಗಿ ಕಾನೂನು ರೀತ್ಯ ಕರ್ತವ್ಯ ಪಾಲನೆ ಮಾಡಬೇಕು ಎಂದು ರಾಹುಲ್ ತುಕಾರಾಮ್ ಪಾಂಡ್ವೆ ತಿಳಿಸಿದರು.
    ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಚುನಾವಣೆ ತರಬೇತಿ ಅಧಿಕಾರಿ ಎನ್.ವಿ.ಶಿರಗಾಂವಕರ್ ಹಾಗೂ ಎಸ್‌ಎ್ಟಿ, ಎಸ್‌ಎಸ್‌ಟಿ ತಂಡದ ಸದಸ್ಯರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts