More

    ವಿದ್ಯಾರ್ಥಿಗಳ ಮನೆಗೆ ಅಧಿಕಾರಿಗಳು ಭೇಟಿ

    ಚಾಮರಾಜನಗರ: ಕರೊನಾ ಎಫೆಕ್ಟ್‌ನಿಂದಾಗಿ ಮುಂದೂಡಲ್ಪಟ್ಟಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಜೂ.22ರಿಂದ ಜು.4ವರೆಗೆ ನಡೆಸಲು ಸರ್ಕಾರ ನಿರ್ಧರಿಸಿರುವ ಹಿನ್ನೆಲೆ ಜಿಲ್ಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಶುಕ್ರವಾರ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಕಲಿಕಾ ಚಟುವಟಿಕೆಗಳ ಬಗ್ಗೆ ಪರಿಶೀಲಿಸಿದರು.

    ತಾಲೂಕಿನ ಹರದನಹಳ್ಳಿ, ಬಂಡಿಗೆರೆ ಗ್ರಾಮಗಳ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಲಕ್ಷ್ಮೀಪತಿ ಮತ್ತು ತಂಡ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಬದಲಾಗಿರುವ ನೂತನ ವೇಳಾಪಟ್ಟಿಯ ಬಗ್ಗೆ, ಚಂದನವಾಹಿನಿ ಮತ್ತು ಮಕ್ಕಳ ವಾಣಿಯಲ್ಲಿ ಪ್ರಸಾರವಾಗುತ್ತಿರುವ ಪರೀಕ್ಷಾ ಕೇಂದ್ರಿತ ಪಾಠಗಳ ಕುರಿತು, ರಜಾ ಅವಧಿಯಲ್ಲಿ ಓದಬೇಕಾದ ವಿಷಯಗಳ ಬಗ್ಗೆ ಮಕ್ಕಳೊಂದಿಗೆ ಚರ್ಚಿಸಿದರು.

    ಪುನರ್ಮನನ ತರಗತಿಗಳಿಗಾಗಿ ಶಾಲೆಗೆ ಹಾಜರಾಗುವ ಹಾಗೂ ಪರೀಕ್ಷಾ ಕೇಂದ್ರಗಳಿಗೆ ಹೋಗುವಾಗ ಮಕ್ಕಳಿಗೆ ಕರೊನಾ ತಗುಲದಂತೆ ವಹಿಸಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.

    ಸಾರ್ವಜನಿಕ ಶಿಕ್ಷಣ ಇಲಾಖೆಯ ಕನ್ನಡ ವಿಷಯ ಪರಿವೀಕ್ಷಕ ಎ.ಜಿ. ಬಸವಣ್ಣ, ಶಿಕ್ಷಣ ಸಂಯೋಜಕ ಸಿದ್ದಮಲ್ಲಪ್ಪ, ಹರದನಹಳ್ಳಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಜಯಸ್ವಾಮಿ, ಎಸ್‌ಡಿಎಂಸಿ ಅಧ್ಯಕ್ಷ ಜಯಸ್ವಾಮಿ, ಶಿಕ್ಷಕ ಪರಶಿವಮೂರ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts