More

    ಅತಿವೃಷ್ಟಿ ಕಾಮಗಾರಿಗಳು ಬಹುತೇಕ ಅಪೂರ್ಣ

    ಮೂಡಿಗೆರೆ: ಅತಿವೃಷ್ಟಿಯಿಂದ ಸಂಪೂರ್ಣ ನಾಶವಾಗಿದ್ದ ಮಲೆಮನೆ, ದುರ್ಗದಹಳ್ಳಿ ಚನ್ನಡ್ಲು ಗ್ರಾಮಕ್ಕೆ ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳು ಭೇಟಿ ನೀಡಿ ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದರೂ ಕಾಮಗಾರಿಗಳು ಮುಗಿದಿಲ್ಲ. ಈ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಎಂಎಲ್​ಸಿ ಎಂ.ಕೆ.ಪ್ರಾಣೇಶ್ ಅಧಿಕಾರಿಗಳಿಗೆ ಸೂಚಿಸಿದರು.

    ಮಂಗಳವಾರ ತಾಪಂ ಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಕಂದಾಯ ಇಲಾಖೆ, ತಾಲೂಕು ಕಚೇರಿಯಲ್ಲಿ ಲಂಚದ ಹಾವಳಿ ಹೆಚ್ಚಾಗಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಈ ಬಗ್ಗೆ ಕ್ರಮ ಕೈಗೊಂಡು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

    ಅತಿವೃಷ್ಟಿಯಿಂದ ಹಾನಿಯಾದ 32 ಶಾಲೆ ದುರಸ್ತಿಗೆ 1.16 ಕೋಟಿ ರೂ. ಮೀಸಲಿರಿಸಲಾಗಿತ್ತು. ಅದರಲ್ಲಿ 27 ಶಾಲೆಗಳ ದುರಸ್ತಿ ಪೂರ್ಣಗೊಂಡಿದೆ. ಉಳಿದ 7 ಶಾಲೆ ಕಾಮಗಾರಿ ಪ್ರಗತಿಯಲ್ಲಿದೆ. ಕೆಂಜಿಗೆಯ ಎರಡು ಶಾಲೆ ದುರಸ್ತಿ ಕಾರ್ಯಯನ್ನು ನಬಾರ್ಡ್​ಗೆ ಸೇರಿಸಲಾಗಿದೆ. ಹಂತೂರು, ಕನ್ನೇಹಳ್ಳಿ ಶಾಲೆಗಳ ದುರಸ್ತಿಗೆ ಟೆಂಡರ್ ಕರೆಯಲಾಗಿದೆ ಎಂದು ಜಿಪಂ ಎಇಇ ಚಂದ್ರಶೇಖರ್ ಮಾಹಿತಿ ನೀಡಿದರು.

    ನೀವು ನೀಡುತ್ತಿರುವ ವರದಿಗೂ ಶಿಕ್ಷಣ ಇಲಾಖೆ ನೀಡಿದ ವರದಿಗೂ ತಾಳೆಯಾಗುತ್ತಿಲ್ಲ. ಸಭೆಗೆ ಸುಳ್ಳು ಮಾಹಿತಿ ನೀಡುತ್ತಿದ್ದೀರಿ ಎಂದು ಎಇಇ ಚಂದ್ರಶೇಖರ್​ಗೆ ಎಂಎಲ್​ಸಿ ಎಂ.ಕೆ.ಪ್ರಾಣೇಶ್ ತರಾಟೆಗೆ ತೆಗೆದುಕೊಂಡರು.

    ದುರಸ್ತಿಯಾಗಿರುವ ಎಲ್ಲ ಶಾಲೆಗಳಿಗೆ ಭೇಟಿ ನೀಡಿ ಮುಂದಿನ ಕೆಡಿಪಿ ಸಭೆಯಲ್ಲಿ ವರದಿ ನೀಡುವಂತೆ ಬಿಇಒ ಹೇಮಂತ್​ರಾಜ್​ಗೆ ತಾಪಂ ಅಧ್ಯಕ್ಷ ಕೆ.ಸಿ.ರತನ್ ಸೂಚಿಸಿದರು.

    ಎತ್ತರ ಪ್ರದೇಶದ ಮನೆಗಳನ್ನು ಸ್ಥಳಾಂತರಗೊಳಿಸಲು ನಿರ್ಲಕ್ಷ್ಯಹಿಸಿದ ಕಿರುಗುಂದ ಗ್ರಾಮ ಲೆಕ್ಕಾಧಿಕಾರಿ ಕವನ್ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿಗೆ ಶಿಫಾರಸು ಮಾಡುವುದು ಹಾಗೂ ಅತಿವೃಷ್ಟಿ ಹಾನಿ ಕಾಮಗಾರಿಗಳಿಗೆ ಅನುದಾನ ಕೊರತೆ ಇರುವುದರಿಂದ ಹೆಚ್ಚಿನ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಣಯ ಕೈಗೊಳ್ಳಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts