More

    ಪಠ್ಯದ ಜತೆಗೆ ಕ್ರೀಡೆಗಳಲ್ಲೂ ಪಾಲ್ಗೊಳ್ಳಲಿ

    ರಾಮದುರ್ಗ: ವಿದ್ಯಾರ್ಥಿಗಳು ಪಠ್ಯದ ಜತೆಗೆ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಜೀವನ ರೂಪಿಸಿಕೊಳ್ಳಬೇಕು ಎಂದು ರಾಜ್ಯ ದೈಹಿಕ ಶಿಕ್ಷಕರ ಸಂಘದ ಗೌರವಾಧ್ಯಕ್ಷ ರವಿ ಗೋಲಾ ಹೇಳಿದರು.

    ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಮತ್ತು ಸಿ.ಎಸ್. ಬೆಂಬಳಗಿ ಕಲಾ, ಶಾ.ಎಂ.ಆರ್. ಪಾಲರೇಶಾ ವಿಜ್ಞಾನ ಹಾಗೂ ಜಿ.ಎಲ್. ರಾಠಿ ವಾಣಿಜ್ಯ ಮಹಾವಿದ್ಯಾಲಯದ ಸಹಯೋಗದಲ್ಲಿ ಪಟ್ಟಣದ ಬೆಂಬಳಗಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಂತರ್ ಕಾಲೇಜ್ ಏಕ ವಲಯ ಪುರುಷರ ಹಾಗೂ ಮಹಿಳೆಯರ ಚೆಸ್ ಪಂದ್ಯಾವಳಿ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿ, ಚೆಸ್ ಆಡುವುದರಿಂದ ಜ್ಞಾನ ಮತ್ತು ಏಕಾಗ್ರತೆ ತಂದುಕೊಡುತ್ತದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ವಿದ್ಯಾ ಪ್ರಸಾರಕ ಸಮಿತಿಯ ಅಧ್ಯಕ್ಷ ಟಿ. ದಾಮೋದರ ಮಾತನಾಡಿ, ಕ್ರೀಡಾಪಟುಗಳು ಜೀವನದಲ್ಲಿ ಸೋಲನ್ನು ಸವಾಲಾಗಿ ಸ್ವೀಕರಿಸಿ ಗೆಲುವನ್ನು ಸಾಧಿಸಬೇಕೆಂದು ಕರೆ ನೀಡಿದರು. ವಿದ್ಯಾ ಪ್ರಸಾರಕ ಸಮಿತಿಯ ಗೌರವ ಕಾರ್ಯದರ್ಶಿ ಎಸ್.ಎಸ್.ಸುಲ್ತಾನಪುರ, ಹಿರಿಯ ಸದಸ್ಯರಾದ ಡಾ.ವೈ.ಬಿ. ಕುಲಗೋಡ, ವಿ.ಜಿ. ಬೈಲವಾಡ, ಶಿಕ್ಷಣ ತಜ್ಞ ಪ್ರೊ. ಬಿ.ಬಿ.ವಂದಾಲ, ದೈಹಿಕ ಶಿಕ್ಷಣ ನಿರ್ದೇಶಕ ಬಿ.ಬಿ. ಕಬಾಡಗಿ, ಪ್ರಾಚಾರ್ಯ ಎಸ್.ಎಂ. ಸಕ್ರಿ, ಎ.ಡಿ. ಕಾಮತ್, ಡಾ. ವಿ.ಎಂ. ಜಬಡೆ, ಎಸ್.ಬಿ.ಆಲಗುಂಡಿ, ಎಸ್.ವೈ ಮೇದಾರ, ವಿಜಯಲಕ್ಷ್ಮೀ ಮರಿಬಾಶೆಟ್ಟಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts