More

    ಹದಗೆಟ್ಟ ಆರೋಗ್ಯ ಸ್ಥಿತಿ: ಕರೊನಾ ಸೋಂಕಿತ ಮಾವನನ್ನು ಹೊತ್ತು ಆಸ್ಪತ್ರೆಗೆ ಸಾಗಿದ ಸೊಸೆ!

    ಭುವನೇಶ್ವರ್​: ಅತ್ತೆ-ಮಾವ ಅಂದರೆ ಮೂಗು ಮುರಿಯುವಂತಹ ಈ ಕಾಲದಲ್ಲಿ ಇಲ್ಲೊಬ್ಬ ಮಹಿಳೆ ಕರೊನಾ ಚಿಕಿತ್ಸೆಗಾಗಿ ತನ್ನ ಮಾವನ್ನು ಹೊತ್ತು ಸಾಗುವ ಮೂಲಕ ಮಾನವೀಯತೆ ಜತೆಗೆ ಸಂಬಂಧಗಳ ಮೌಲ್ಯಗಳನ್ನು ಸಾರಿದ್ದಾರೆ.

    ಪತಿ ಸೂರಜ್​ ಕೆಲಸದ ನಿಮಿತ್ತ ಹೊರ ಹೋಗಿದ್ದಾರೆ. ಹೀಗಾಗಿ ಇಡೀ ಮನೆಯ ಜವಬ್ದಾರಿ ಇದೀಗ ಸೂರಜ್​ ಪತ್ನಿ ನಿಹಾರಿಕ ಮೇಲೆ ಬಿದ್ದಿದೆ. ಹೀಗಿರುವಾಗ ಇತ್ತೀಚೆಗೆ ಮಾವ ತುಳೆಶ್ವರ್​ ದಾಸ್​ಗೆ ಕರೊನಾ ಸೋಂಕು ತಗುಲಿದೆ. ಇತ್ತ ಆರೋಗ್ಯ ಸ್ಥಿತಿ ಬಿಗಡಾಯಿಸುತ್ತಿದ್ದಂತೆ ಏನು ಮಾಡುವುದು ಗೊಂದಲಕ್ಕೀಡಾದ ನಿಹಾರಿಕ ಮರುಗಳಿಗೆ ತಾನೇ ಮಾವನನ್ನು ಹೊತ್ತುಕೊಂಡ ಕೋವಿಡ್​ ಸೆಂಟರ್​ಗೆ ತೆರಳಿದ್ದಾರೆ.

    ತುಳೇಶ್ವರ್​ ದಾಸ್​ಗೆ 75 ವರ್ಷ ವಯಸ್ಸಾಗಿದೆ. ಈತ ರಹಾದಲ್ಲಿರುವ ಭಟಿಂಗಾವ್ ಮೂಲದ ನಿವಾಸಿ. ಹತ್ತಿರದ ಕೋವಿಡ್​ ಕೇರ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರೊನಾ ಪಾಸಿಟಿವ್​ ಇರುವುದರಿಂದ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಕೋವಿಡ್​ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.

    ಮಾವನನ್ನು ಆಸ್ಪತ್ರೆಗೆ ದಾಖಲಿಸಿದ ಸೊಸೆ ನಿಹಾರಿಕಳನ್ನು ಮನೆಯಲ್ಲೇ ಪ್ರತ್ಯೇಕವಾಗಿ ಇರಲು ವೈದ್ಯರು ಸೂಚನೆ ನೀಡಿದ್ದಾರೆ. ಆದರೆ, ಮಾವನೊಬ್ಬನನ್ನೇ ಕೋವಿಡ್​ ಕೇಂದ್ರಕ್ಕೆ ಕಳುಹಿಸಲು ನಿಹಾರಿಕ ನಿರಾಕರಿಸಿದ್ದಾರೆ. ಇದಕ್ಕೆ ಸ್ಪಂದಿಸಿದ ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್​ ಮಾಡಿ ಇಬ್ಬರನ್ನು ಕೋವಿಡ್​ ಆಸ್ಪತ್ರೆಗೆ ಕಳುಹಿಸಿದ್ದಾರೆ.

    ತನ್ನ ಪ್ರಾಣವನ್ನು ಲೆಕ್ಕಿಸದೇ ಕರೊನಾ ಸೋಂಕಿತ ಮಾವನನ್ನು ಹೊತ್ತು ಆಸ್ಪತ್ರೆಗೆ ಧಾವಿಸಿದ ನಿಹಾರಿಕ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. (ಏಜೆನ್ಸೀಸ್​)

    ಇನ್ನು 24*7 ಬ್ಯಾಂಕ್ ಸೇವೆ; ಆ.1ರಿಂದ ಗ್ರಾಹಕರಿಗೆ ಎನ್​ಎಸಿಎಚ್ ಸೌಲಭ್ಯ ಲಭ್ಯ

    ಅಮೆರಿಕ ಮಾಜಿ ಅಧ್ಯಕ್ಷರಿಗೆ ಶಾಕ್​ ಕೊಟ್ಟ​ ಫೇಸ್​ಬುಕ್​: 2 ವರ್ಷ ಡೊನಾಲ್ಡ್​ ಟ್ರಂಪ್ ಖಾತೆ ಬ್ಯಾನ್​!

    ವರ್ಚಸ್ಸು ವೃದ್ಧಿ ಮಂತ್ರ, ಜಂಟಿ ಕಾರ್ಯತಂತ್ರ: ನಿರ್ಧಾರಗಳ ಅನುಷ್ಠಾನಕ್ಕೆ ದೃಢಸಂಕಲ್ಪ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts