More

    ಕೈ ವಿರುದ್ಧ ಸಿಎಂ ಟೀಕೆಗೆ ಕೋರಾ ಆಕ್ಷೇಪ

    ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯನ್ನು ಕಾಂಗ್ರೆಸ್ ದಶಕಗಳಿಂದ ನಿರ್ಲಕ್ಷಿಸಿದೆ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ರಾಜಕೀಯ ದುರುದ್ದೇಶದ್ದಾಗಿದೆ ಎಂದು ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ, ಮಾಜಿ ಸಂಸದ ಪಿ.ಕೋದಂಡರಾಮಯ್ಯ ಹೇಳಿದ್ದಾರೆ.

    ಶುಕ್ರವಾರ ಹೇಳಿಕೆ ನೀಡಿರುವ ಅವರು, ರಾಜಕೀಯ ಕಾರಣಕ್ಕಾಗಿ ಪಕ್ಷವೊಂದರ ವಿರುದ್ಧ ಟೀಕೆ ಮಾಡಿರುವುದು ಸರಿಯಲ್ಲ. ಯೋಜನೆ ಜಾರಿಗೆ ನಿರ್ಲಕ್ಷ್ಯ ವಹಿಸಿದ ಸಾಲಿನಲ್ಲಿ ಎಲ್ಲ ಪಕ್ಷಗಳಿವೆ ಎಂಬ ವಾಸ್ತವ ಸತ್ಯವನ್ನು ಸಿಎಂ ತಿಳಿಯಲಿ ಎಂದು ಹೇಳಿದ್ದಾರೆ.

    ಭದ್ರೆಗೆ 5300 ಕೋಟಿ ರೂ. ಅನುದಾನ ಘೋಷಿಸಿರುವುದನ್ನು ಪಕ್ಷಾತೀತವಾಗಿ ಎಲ್ಲರೂ ಸ್ವಾಗತಿಸಿದ್ದಾರೆ. ಇಂಥ ಸಂದರ್ಭದಲ್ಲಿ ರಾಜಕೀಯ ಲಾಭಕ್ಕಾಗಿ ಸಿಎಂ ಮುಂದಾಗಬಾರದಾಗಿತ್ತು ಎಂದಿದ್ದಾರೆ.

    ಯೋಜನೆ ಜಾರಿಗೆ ಜಿಲ್ಲೆ ಜನರು, ಸಂಘ-ಸಂಸ್ಥೆಗಳು ಜಿಲ್ಲಾ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ದಶಕಗಳ ಕಾಲ ನಡೆಸಿದ ಚಳವಳಿ ಮುಖ್ಯ ಕಾರಣ. ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ 2003ರಲ್ಲಿ ಯೋಜನೆ ಜಾರಿ ಘೋಷಣೆ ಮಾಡಿತ್ತು. ಬಳಿಕ ಮುಖ್ಯಮಂತ್ರಿಗಳಾಗಿದ್ದ ಧರ್ಮಸಿಂಗ್,

    ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ ಹಾಗೂ ತಾವು ಯೋಜನೆಗೆ ಸಹಕರಿಸಿದ್ದೀರಿ. ಜನರಲ್ಲಿ ಈ ಕುರಿತು ಕೃತಜ್ಞತೆ ಇದೆ. ಆದರೆ, ಯೋಜನೆ ಜಾರಿ ಒಂದು ಪಕ್ಷದ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುವ ಪ್ರಯತ್ನ ಮತ್ತು ಮತ್ತೊಂದು ಪಕ್ಷ ಏನೂ ಮಾಡಿಲ್ಲವೆಂಬ ಹೇಳಿಕೆ ನ್ಯಾಯ ಸಮ್ಮತವಲ್ಲ.

    ಈ ಹೇಳಿಕೆ ಅನಗತ್ಯ ವಿವಾದಕ್ಕೆ ಎಡೆಮಾಡಿ ಕೊಡುವುದರ ಜತೆಗೆ ಜನರ ಹೋರಾಟಕ್ಕೆ ಅಪಮಾನ ಮಾಡಿದಂತೆ ಆಗುತ್ತದೆ. ಸಾಂವಿಧಾನಿಕ ಸ್ಥಾನದಲ್ಲಿರುವವರು ಚುನಾವಣೆ ಹೊಸ್ತಿಲಲ್ಲಿ ರಾಜಕೀಯ ಲಾಭ ಪಡೆಯಲು ಆಧಾರ ರಹಿತ ಹೇಳಿಕೆ ನೀಡಬಾರದೆಂದು ಕೋದಂಡರಾಮಯ್ಯ ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts