More

    ಓಬವ್ವ ಜಯಂತಿ ಆಚರಣೆಯಲ್ಲಿ ಸರಳತೆಯಿರಲಿ

    ಯಲಬುರ್ಗಾ: ವೀರವನಿತೆ ಒನಕೆ ಓಬವ್ವ ಜಯಂತಿಯನ್ನು ಸರಳ ಮತ್ತು ಅರ್ಥಪೂರ್ಣ ಆಚರಣೆಗೆ ತಾಲೂಕಾಡಳಿತ ನಿರ್ಧರಿಸಿದೆ ಎಂದು ತಹಸೀಲ್ದಾರ್ ಬಸವರಾಜ ತೆನ್ನಳ್ಳಿ ಹೇಳಿದರು.

    ಇದನ್ನೂ ಓದಿ: ಒನಕೆ ಓಬವ್ವ ಜಯಂತಿ 11ರಂದು

    ಪಟ್ಟಣದ ತಹಸಿಲ್ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಒನಕೆ ಓಬವ್ವ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

    ನ.11ರಂದು ತಾಲೂಕಾಡಳಿತದಿಂದ ಓಬವ್ವ ಜಯಂತಿ ನಿಮಿತ್ತ ಕಚೇರಿಯಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಬೇವೂರು ರಸ್ತೆ ಪಕ್ಕದಲ್ಲಿರುವ ಓಬವ್ವ ವೃತ್ತಕ್ಕೆ ಮಾಲಾರ್ಪಣೆ ಮಾಡಲಾಗುತ್ತದೆ.

    ತಾಲೂಕು ಮಟ್ಟದ ಇಲಾಖೆಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಓಬವ್ವ ಭಾವಚಿತ್ರಕ್ಕೆ ಕಡ್ಡಾಯವಾಗಿ ಪೂಜೆ ಸಲ್ಲಿಸಬೇಕು. ಎಲ್ಲ ಅಧಿಕಾರಿಗಳು ಜಯಂತಿಯಲ್ಲಿ ಪಾಲ್ಗೊಳ್ಳಬೇಕೆಂದು ಸೂಚಿಸಿದರು.

    ಛಲವಾದಿ ಮಹಾಸಭಾದ ತಾಲೂಕು ಅಧ್ಯಕ್ಷ ಅಂದಪ್ಪ ಹಾಳಕೇರಿ, ಮುಖಂಡ ಸಿದ್ದಪ್ಪ ಕಟ್ಟಿಮನಿ, ಗ್ರೇಡ್2 ತಹಸೀಲ್ದಾರ್ ನಾಗಪ್ಪ ಸಜ್ಜನ, ಅಧಿಕಾರಿಗಳಾದ ರಮೇಶ ಚಿಣಗಿ, ಬಸವರಾಜ, ಚನ್ನಯ್ಯ ಹಿರೇಮಠ, ಕಸಾಪ ಅಧ್ಯಕ್ಷ ಬಾಲದಂಡಪ್ಪ ತಳವಾರ್, ನೌಕರರ ಸಂಘದ ತಾಲೂಕು ಅಧ್ಯಕ್ಷ ವೈ.ಜಿ.ಪಾಟೀಲ್, ನೌಕರರಾದ ರಮೇಶ ಬೇಲೇರಿ, ಹನುಮಗೌಡ ಪಾಟೀಲ್, ಶ್ರೀಧರಗೌಡ ಸೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts