More

    7 ದಿನಗಳಲ್ಲಿ 20 ಲಕ್ಷ ಕರೊನಾ ಪ್ರಕರಣ, ಹೆಚ್ಚಿದ ಆತಂಕ, ಯಾಕೆ?

    ಸ್ವಿಜರ್ಲೆಂಡ್​: ಜಗತ್ತಿನಲ್ಲಿ ಕಳೆದ ಏಳು ದಿನಗಳಲ್ಲಿ ಒಟ್ಟು 20 ಲಕ್ಷ ಕರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು, ಇದು ಜನರಲ್ಲಿನ ಕರೊನಾ ಆತಂಕವನ್ನು ಹೆಚ್ಚಿಸಿದೆ.

    ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ, ಕಳೆದೊಂದು ವಾರದಲ್ಲಿ ಜಗತ್ತಿನಲ್ಲಿ ದಾಖಲೆ ಸಂಖ್ಯೆಯಲ್ಲಿ ಕರೊನಾ ಪ್ರಕರಣಗಳು ದಾಖಲಾಗಿವೆ. ಅಂದರೆ, ಸೆ. 14ರಿಂದ 20ರ ವರೆಗೆ ಸುಮಾರು 20 ಲಕ್ಷ ಮಂದಿಯಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಇದುವರೆಗಿನ ಲೆಕ್ಕಾಚಾರದ ಪ್ರಕಾರ ಒಂದು ವಾರದಲ್ಲಿ ಇಷ್ಟೊಂದು ದೊಡ್ಡಮಟ್ಟದಲ್ಲಿ ಸೋಂಕು ಪತ್ತೆಯಾಗಿದ್ದು ಇದೇ ಮೊದಲು. ಮತ್ತೊಂದೆಡೆ ಹಿಂದಿನ ವಾರಕ್ಕೆ ಹೋಲಿಸಿದೆ ಇದು ಶೇ. 6 ಹೆಚ್ಚಳ ಎಂದು ಡಬ್ಲ್ಯುಎಚ್​ಒ ಹೇಳಿದೆ.

    ಸಮಾಧಾನದ ಸಂಗತಿ ಎಂದರೆ ಇದೇ ಅವಧಿಯಲ್ಲಿ ಕರೊನಾದಿಂದ ಸಾಯುವವರ ಪ್ರಮಾಣ ಶೇ. 10 ತಗ್ಗಿದೆ. ಕಳೆದ ಒಂದು ವಾರದಲ್ಲಿ ವಿಶ್ವದಲ್ಲಿ ಕರೊನಾ ಸೋಂಕಿನಿಂದಾಗಿ 36, 764 ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ-ಅಂಶಗಳು ತಿಳಿಸಿವೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts