More

    ಇನ್ನು ಮ್ಯಾಂಗೋ ವಾರ್!?: ಹಲಾಲ್​-ಜಟ್ಕಾ ಬಳಿಕ ಮಾವಿಗೂ ಬಂತು ಧರ್ಮಸಂಘರ್ಷ..

    ಹಾಸನ: ಶಾಲೆಯಲ್ಲಿ ಹಿಜಾಬ್ ಧರಿಸಿ ತರಗತಿ ಹಾಜರಾಗಲು ಅವಕಾಶ ಕೊಡಬೇಕು ಎಂದು ಆರು ಜನ ಮುಸ್ಲಿಂ ವಿದ್ಯಾರ್ಥಿನಿಯರು ಉಡುಪಿಯಲ್ಲಿ ಹುಟ್ಟುಹಾಕಿದ ಉಡುಪಿನ ವಿವಾದ ಬಳಿಕ ಹಿಜಾಬ್​-ಕೇಸರಿ ಶಾಲು ಸಂಘರ್ಷವಾಗಿ ಮಾರ್ಪಟಿದ್ದು ಎಲ್ಲರಿಗೂ ಗೊತ್ತಿರುವಂಥದ್ದೇ.

    ಹೀಗೆ ಉಂಟಾದ ವಿವಾದ ನಂತರ ದೇವಸ್ಥಾನಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಕೊಡಬಾರದು, ಅವರಿಂದ ಹಿಂದುಗಳು ಏನನ್ನೂ ಖರೀದಿಸಬಾರದು ಎಂಬುದು ಆಂದೋಲನ ರೀತಿ ನಡೆಯಲಾರಂಭಿಸಿದ್ದು, ಅದು ಮೊನ್ನೆಮೊನ್ನೆಯಷ್ಟೇ ಹಲಾಲ್​-ಜಟ್ಕಾ ಸಂಘರ್ಷವಾಗಿ ಬದಲಾಗಿದೆ.

    ಇದು ಇನ್ನೂ ಮುಂದುವರಿದಿದ್ದು, ಈಗಿನ ಸೀಸನ್​ಗೆ ತಕ್ಕಂತೆ ಮಾವಿನ ಹಣ್ಣಿಗೂ ತಲುಪಿದೆ. ಮಾವಿನ ಹಣ್ಣಿನ ಹೋಲ್​ಸೇಲ್ ಮಾರ್ಕೆಟ್​ ಹಿಂದುಗಳ ಪಾಲಾಗಬೇಕು ಎಂಬ ಒತ್ತಾಯ ಕೇಳಿಬಂದಿದೆ. ಹಾಸನದ ಕೆಲವೆಡೆ ವಾಟ್ಸ್​ಆ್ಯಪ್​ ಗ್ರೂಪ್​ಗಳಲ್ಲಿ ಇಂಥ ಸಂದೇಶಗಳು ಫಾರ್ವರ್ಡ್​ ಆಗಿವೆ ಮತ್ತು ಸಾಮಾಜಿಕ ಜಾಲತಾಣಗಳಲ್ಲೂ ಇವು ಪೋಸ್ಟ್ ಆಗಿವೆ. ಮಾವಿನ ಹಣ್ಣಿನ ಮಾರುಕಟ್ಟೆ ನಮ್ಮದಾಗಬೇಕು, ಹಿಂದು ಯುವಕರೇ ಮುಂದೆ ಬನ್ನಿ ಎಂಬಂಥ ಸಂದೇಶಗಳು ಪ್ರಸಾರವಾಗುತ್ತಿವೆ.

    ಇನ್ನು ಮ್ಯಾಂಗೋ ವಾರ್!?: ಹಲಾಲ್​-ಜಟ್ಕಾ ಬಳಿಕ ಮಾವಿಗೂ ಬಂತು ಧರ್ಮಸಂಘರ್ಷ.. ಇನ್ನು ಮ್ಯಾಂಗೋ ವಾರ್!?: ಹಲಾಲ್​-ಜಟ್ಕಾ ಬಳಿಕ ಮಾವಿಗೂ ಬಂತು ಧರ್ಮಸಂಘರ್ಷ..

    ಭೀಕರ ಅಪಘಾತ, ಬಿಜೆಪಿ ಮುಖಂಡನ ಕಾಲು ತುಂಡು: ಇನ್ನಿಬ್ಬರ ಪರಿಸ್ಥಿತಿ ಚಿಂತಾಜನಕ, ಒಟ್ಟು ಐವರಿಗೆ ಗಾಯ..

    ವಡೆಯರ್-ಪುರಾಣಿಕ್ ಜೋಡಿಯ ಚೊಚ್ಚಲ ಸಾಹಸ ‘ಡೊಳ್ಳು’ ಚಿತ್ರಕ್ಕೆ ಮತ್ತೆರಡು ಪ್ರಶಸ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts