More

    ಮಥುರಾ ಶ್ರೀಕೃಷ್ಣಜನ್ಮಭೂಮಿ ವಿಮೋಚನಾ ಹೋರಾಟ ಶುರು: 80 ಸಾಧುಗಳನ್ನೊಳಗೊಂಡ ಟ್ರಸ್ಟ್​ ರಚನೆ

    ಮಥುರಾ: ಐದು ಶತಮಾನಗಳ ನಿರೀಕ್ಷೆ ರಾಮಮಂದಿರ ನಿರ್ಮಾಣದ ಕನಸು ಈಡೇರುತ್ತಿದೆ. ಮಂದಿರ ನಿರ್ಮಾಣದ ಭೂಮಿಪೂಜೆ ನಿನ್ನೆ ಸಾಂಪ್ರದಾಯಿಕವಾಗಿ, ವೈಭವಯುತವಾಗಿ ನೆರವೇರಿದೆ.

    ರಾಮಜನ್ಮಭೂಮಿಯ ವಿವಾದ ಇತ್ಯರ್ಥವಾಗಿ, ಶ್ರೀರಾಮಮಂದಿರ ನಿರ್ಮಾಣಕ್ಕೆ ನಾಂದಿ ಹಾಡಲಾದ ಬೆನ್ನಲ್ಲೇಯಲ್ಲಿ ಕೃಷ್ಣಜನ್ಮಭೂಮಿ ಮಥುರಾದಲ್ಲೂ ಒಂದು ಮಹತ್ವದ ಬೆಳವಣಿಗೆ ನಡೆದಿದೆ.

    ಶ್ರೀಕೃಷ್ಣಜನ್ಮಭೂಮಿ ನಿರ್ಮಾಣ್ ನ್ಯಾಸ್ ಎಂಬ ಟ್ರಸ್ಟ್​ ರಚನೆಯಾಗಿದ್ದು, 14 ರಾಜ್ಯಗಳ 80 ಧಾರ್ಮಿಕ ಗುರುಗಳು, ಸಾಧುಗಳನ್ನು ಇದು ಒಳಗೊಂಡಿದೆ. ಈ ಟ್ರಸ್ಟ್​​ನ ಮುಖ್ಯಸ್ಥ ಆಚಾರ್ಯ ದೇವಮುರಾರಿ ಬಾಪು ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
    ಜು.23ರಂದು ಆಚರಿಸಲಾದ ಮುಂಗಾರಿನ ಪ್ರಸಿದ್ಧ ಹಬ್ಬ ಹರ್ಯಾಲಿ ತೀಜ್​ನಂದು ಟ್ರಸ್ಟ್​ನ್ನು ನೋಂದಾಯಿಸಿದ್ದೇವೆ. ವೃಂದಾವನದ 11 ಸಂತರನ್ನು ಟ್ರಸ್ಟ್​ ಒಳಗೊಂಡಿದೆ ಎಂದು ಹೇಳಿದ್ದಾರೆ.

    ಶ್ರೀಕೃಷ್ಣ ಜನ್ಮಭೂಮಿ ವಿಮೋಚನೆಗಾಗಿ ಸಹಿ ಅಭಿಯಾನ ಶುರುಮಾಡಿದ್ದೇವೆ. ಅದಾದ ಬಳಿಕ ದೇಶಾದ್ಯಂತ ಇದೇ ವಿಚಾರಕ್ಕೆ ಚಳವಳಿ ಪ್ರಾರಂಭ ಮಾಡುತ್ತೇವೆ. ನಮ್ಮ ಕಾರ್ಯ ಫೆಬ್ರವರಿಯಿಂದಲೇ ಆರಂಭವಾಗಿದ್ದು, ಲಾಕ್​ಡೌನ್​ ಕಾರಣದಿಂದ ಅಲ್ಲಿಗೇ ನಿಂತಿತ್ತು. ಇದೀಗ ಟ್ರಸ್ಟ್ ಕೂಡ ರಚನೆಯಾಗಿದ್ದು, ಮತ್ತೆ ವಿಮೋಚನಾ ಚಳವಳಿ ಶುರುವಾಗಲಿದೆ ಎಂದಿದ್ದಾರೆ. ಇದನ್ನೂ ಓದಿ: ಸುಷ್ಮಾ ಸ್ವರಾಜ್​ ಮೊದಲ ಪುಣ್ಯತಿಥಿಯಂದು ಗೌರವ ಸಲ್ಲಿಸಿದ ಪ್ರಧಾನಿ ಮೋದಿ…

    ಮಥುರಾದಲ್ಲಿ ಕೂಡ ಮಸೀದಿ ನಿರ್ಮಾಣಕ್ಕೆ ಮೂಲ ದೇವಾಲಯವನ್ನು ನೆಲಸಮ ಮಾಡಲಾಗಿದೆ ಎಂದು ಉಲ್ಲೇಖವಿದೆ. ಅದಕ್ಕೆ ಪುರಾವೆಗಳೂ ಇವೆ ಎನ್ನಲಾಗುತ್ತಿದೆ. ಸದ್ಯ ಅಲ್ಲಿ ಶಾಹಿ ಈದ್ಗಾ ಮಸೀದಿ ವಿವಾದ ನಡೆಯುತ್ತಿದೆ. ಕೃಷ್ಣ ದೇವಾಲಯಕ್ಕೆ ಹೊಂದಿಕೊಂಡು ಈ ಮಸೀದಿ ಇದೆ. ಆದರೆ ವಾಸ್ತವವಾಗಿ ಶಾಹಿ ಈದ್ಗಾ ಮಸೀದಿ ನಿರ್ಮಾಣಕ್ಕಾಗಿ ಔರಂಗಜೇಬ್​ ಮೂಲ ಕೃಷ್ಣದೇವಾಲಯವನ್ನು ನಾಶ ಮಾಡಿದ್ದಾನೆ ಎಂದು ಇತಿಹಾಸಕಾರರು ಹೇಳುತ್ತಾರೆ.

    ಬಾಬ್ರಿ ಮಸೀದಿಯನ್ನು 1992ರಲ್ಲಿ ಧ್ವಂಸ ಮಾಡಿದ ಬಳಿಕ, ಮಥುರಾ ನಮ್ಮ ಮುಂದಿನ ಕಾರ್ಯಾಚರಣೆ ಎಂಬುದಾಗಿ ವಿಎಚ್​ಪಿ ಕೂಡ ಪ್ರತಿಪಾದಿಸುತ್ತಲೇ ಇದೆ. ಇದೀಗ ಟ್ರಸ್ಟ್​ ಮುಖ್ಯಸ್ಥ ದೇವಮುರಾರಿ ಬಾಪು ಅವರು, ನಮಗೆ ಸಣ್ಣಪುಟ್ಟ ಕಾನೂನು ಅಡೆತಡೆಗಳೂ ಇವೆ. ಆದರೆ ಶ್ರೀಕೃಷ್ಣಜನ್ಮಭೂಮಿ ವಿಮೋಚಾನ ಚಳವಳಿಯ ದೃಢಸಂಕಲ್ಪ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

    ‘ಸುಷ್ಮಾ ಸ್ವರಾಜ್​ ರಾಜತಾಂತ್ರಿಕತೆಯ ಬಹುದೊಡ್ಡ ಶಕ್ತಿಯಾಗಿದ್ದರು’: ಮಾಲ್ಡೀವ್ಸ್​ ಸಚಿವ ಅಬ್ದುಲ್ ಶಾಹೀದ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts