More

    20ನೇ ಗ್ರಾಂಡ್ ಸ್ಲಾಂ ಗೆದ್ದ ನೊವಾಕ್ ಜೋಕೊವಿಕ್

    ಲಂಡನ್: ವಿಶ್ವ ನಂ.1 ನೊವಾಕ್ ಜೋಕೊವಿಕ್ ವಿಂಬಲ್ಡನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದರು. ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಹ್ಯಾಟ್ರಿಕ್ ಪ್ರಶಸ್ತಿ ಗೆದ್ದ ಸಾಧನೆಯೊಂದಿಗೆ 20ನೇ ಗ್ರಾಂಡ್ ಸ್ಲಾಂಗೆ ಮುತ್ತಿಕ್ಕಿದ ಜೋಕೋ, ಅತಿ ಹೆಚ್ಚು ಗ್ರಾಂಡ್ ಸ್ಲಾಂ ಜಯಿಸಿರುವ ರೋಜರ್ ಫೆಡರರ್ ಮತ್ತು ರಾಫೆಲ್ ನಡಾಲ್ ದಾಖಲೆ ಸರಿಗಟ್ಟಿದರು. ಅಲ್ಲದೆ, ಪ್ರಸಕ್ತ ವರ್ಷ ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್ ಜಯಿಸಿದ್ದ ಜೋಕೋ ಇದೀಗ ಮೂರನೇ ಗ್ರಾಂಡ್ ಸ್ಲಾಂ ಒಲಿಸಿಕೊಂಡರು. ಗ್ರಾಸ್ ಕೋರ್ಟ್ ಗ್ರಾಂಡ್ ಸ್ಲಾಂನಲ್ಲಿ 7ನೇ ಬಾರಿಗೆ ಫೈನಲ್ ಆಡಿದ 34 ವರ್ಷದ ಸೆರ್ಬಿಯಾ ಆಟಗಾರ 6ನೇ ಬಾರಿ ಚಾಂಪಿಯನ್ ಪಟ್ಟವೇರಿದರು.

    ಇದನ್ನೂ ಓದಿ:ವಿಂಬಲ್ಡನ್ ಚಾಂಪಿಯನ್ ಆದ ಮಾಜಿ ಕ್ರಿಕೆಟ್ ಆಟಗಾರ್ತಿ..!

    ಸೆಂಟರ್ ಕೋರ್ಟ್‌ನಲ್ಲಿ ಭಾನುವಾರ ನಡೆದ ಪ್ರಶಸ್ತಿ ಹಣಾಹಣಿಯಲ್ಲಿ ಆರಂಭಿಕ ಹಿನ್ನಡೆ ನಡುವೆಯೂ ತಿರುಗೇಟು ನೀಡಲು ಯಶಸ್ವಿಯಾದ ಜೋಕೊವಿಕ್ 6-7, 6-4, 6-4, 6-3 ಸೆಟ್‌ಗಳಿಂದ ಇಟಲಿ ಮ್ಯಾಟಿಯೊ ಬೆರೆಟಿನಿ ಎದುರು 3 ಗಂಟೆ 23 ನಿಮಿಷಗಳಲ್ಲಿ ಜಯ ದಾಖಲಿಸಿದರು. 30ನೇ ಗ್ರಾಂಡ್ ಸ್ಲಾಂ ಫೈನಲ್ ಆಡಿದ ಜೋಕೋ ಪ್ರಶಸ್ತಿ ಹಾದಿಗೆ ಇಟಲಿ ಆಟಗಾರ ಕಠಿಣ ಸವಾಲು ನೀಡಿದರು. ಮುಕ್ತ ಟೆನಿಸ್ ಯುಗದಲ್ಲಿ ಎಲ್ಲ 4 ಗ್ರಾಂಡ್ ಸ್ಲಾಂಗಳಲ್ಲಿ ಕನಿಷ್ಠ ತಲಾ 2 ಬಾರಿ ಪ್ರಶಸ್ತಿ ಜಯಿಸಿದ ವಿಶ್ವದ ಮೊದಲ ಆಟಗಾರ ಎನಿಸಿರುವ ಜೋಕೊವಿಕ್, ಎಂದಿನಂತೆ ಆರಂಭಿಕ ಹಿನ್ನಡೆ ನಡುವೆಯೂ ಎದುರಾಳಿ ಆಟಗಾರನಿಗೆ ತಿರುಗೇಟು ನೀಡಿದರು.ಮತ್ತೊಂದೆಡೆ, ವಿಂಬಲ್ಡನ್ ಫೈನಲ್ ಆಡಿದ ಇಟಲಿಯ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ ಬೆರೆಟಿನಿ 46 ವರ್ಷಗಳ ಬಳಿಕ ಇಟಲಿಗೆ ಗ್ರಾಂಡ್ ಸ್ಲಾಂ ಗೆದ್ದುಕೊಡುವ ಅಪರೂಪದ ಅವಕಾಶ ಕಳೆದುಕೊಂಡರು.

    ಮುಂದಿನ ಗ್ರಾಂಡ್ ಸ್ಲಾಂ: ಯುಎಸ್ ಓಪನ್
    ಯಾವಾಗ : ಆಗಸ್ಟ್ 30 ರಿಂದ ಸೆ.12 ರವರೆಗೆ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts