More

    ಜೋಕೋಗೆ ಎಟಿಪಿ ಫೈನಲ್ಸ್ ಪ್ರಶಸ್ತಿ: ದಾಖಲೆಯ 7ನೇ ಬಾರಿಗೆ ಚಾಂಪಿಯನ್ ಪಟ್ಟ

    ಟುರಿನ್ (ಇಟಲಿ): ಸೆರ್ಬಿಯಾ ತಾರೆ ನೊವಾಕ್ ಜೋಕೊವಿಕ್ ಎಟಿಪಿ ಫೈನಲ್ಸ್ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ದಾಖಲೆಯ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯೊಂದಿಗೆ ಹಾಲಿ ಋತುವಿನಲ್ಲಿ ಶುಭಾರಂಭ ಮಾಡಿದ್ದ ಜೋಕೋ ಏಳನೇ ಬಾರಿಗೆ ಎಟಿಪಿ ೈನಲ್ಸ್ ಗೆದ್ದು ಹಾಲಿ ಋತುವಿಗೆ ತೆರೆ ಎಳೆದಿದ್ದಾರೆ. ಭಾನುವಾರ ತಡರಾತ್ರಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯಲ್ಲಿ ಅಗ್ರ ಶ್ರೇಯಾಂಕಿತ ಜೋಕೊವಿಕ್ 6-3, 6-3 ನೇರ ಸೆಟ್‌ಗಳಿಂದ ಆತಿಥೇಯ ಇಟಲಿಯ ಜಾನಿಕ್ ಸಿನ್ನರ್ ಎದುರು ಗೆಲುವು ದಾಖಲಿಸಿದರು. 36 ವರ್ಷದ ಜೋಕೋ 1 ಗಂಟೆ 43 ನಿಮಿಷಗಳಲ್ಲಿ ಜಯ ಒಲಿಸಿಕೊಂಡು ರೌಂಡ್ ರಾಬಿನ್ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡರು.
    ಕಳೆದ 15 ವರ್ಷಗಳಲ್ಲಿ ಎರಡನೇ ಬಾರಿಗೆ ಆಟಗಾರನೊಬ್ಬ ಎಲ್ಲ 4 ಗ್ರಾಂಡ್ ಸ್ಲಾಮ್ ಟೂರ್ನಿ ಹಾಗೂ ಎಟಿಪಿ ೈನಲ್ಸ್ ಪ್ರವೇಶಿಸಿದ ಎಂಬ ಕೀರ್ತಿಗೆ ಜೋಕೊವಿಕ್ ಪಾತ್ರರಾದರು. 2015 ರಲ್ಲಿ ಮೊದಲವ ಬಾರಿ ಜೋಕೊವಿಕ್ ಈ ಸಾಧನೆ ಮಾಡಿದ್ದರು. ಸೆಮಿೈನಲ್‌ನಲ್ಲಿ ಕಾರ್ಲೋಸ್ ಅಲ್ಕರಾಜ್ ಎದುರು 24 ಗ್ರಾಂಡ್ ಸ್ಲಾಮ್ ಒಡೆಯ ಜೋಕೋ ಗೆಲುವು ದಾಖಲಿಸಿದ್ದರು. ಎಟಿಪಿ ಫೈನಲ್ಸ್‌ನಲ್ಲಿ ಆರಂಭಿಕ ಪಂದ್ಯ ಗೆಲ್ಲುವ ಮೂಲಕ ವರ್ಷಾಂತ್ಯದ ನಂ.1 ಶ್ರೇಯಾಂಕ ಪಡೆದುಕೊಂಡಿದ್ದ ಜೋಕೋ, ನಂ.1 ಪಟ್ಟವನ್ನು 400ನೇ ವಾರಕ್ಕೆ ವಿಸ್ತರಿಸಿದ್ದಾರೆ.

    7: ಜೋಕೊವಿಕ್ ದಾಖಲೆಯ 7ನೇ ಬಾರಿಗೆ ಎಟಿಪಿ ಪ್ರಶಸ್ತಿ ಜಯಿಸಿದರು. ಇದಕ್ಕೂ ಮುನ್ನ 2008, 2012, 2013. 2014, 2015, 2022, 2023ರಲ್ಲಿ ಚಾಂಪಿಯನ್ ಎನಿಸಿದ್ದರು. ರೋಜರ್ ೆಡರರ್ (6) ನಂತರದ ಸ್ಥಾನದಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts