More

    ಚರಂಡಿಗಳ ಹೂಳೆತ್ತಲು ಸೂಚನೆ

    ಭಟ್ಕಳ:ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯಿಂದ ರಸ್ತೆಯಲ್ಲಿ ನೀರು ನಿಲ್ಲದಂತೆ ಶಾಶ್ವತ ಯೋಜನೆ ರೂಪಿಸಲು ಭಟ್ಕಳಕ್ಕೆ ಆಗಮಿಸಿದ ಜಿಲ್ಲಾ ಯೋಜನಾಧಿಕಾರಿ ಶಾಹಿಲಾ ವರ್ಗೀಸ್ ನೇತೃತ್ವದ ಐವರ ತಂಡ ಭಟ್ಕಳ ಉಪವಿಭಾಗಾಧಿಕಾರಿ ಡಾ. ನಯನಾ ಅಧ್ಯಕ್ಷತೆಯಲ್ಲಿ ಪುರಸಭೆ ಸದಸ್ಯರ ಹಾಗೂ ಸಾರ್ವಜನಿಕರ ಸಭೆ ನಡೆಸಿ ಅಗತ್ಯ ಸಲಹೆ-ಸೂಚನೆ ನೀಡಿದೆ.
    ಪಟ್ಟಣದ ರಂಗಿನಕಟ್ಟೆ, ಶಂಸುದ್ದೀನ್ ಸರ್ಕಲ್ ಹಾಗೂ ಮಣ್ಕುಳಿ ಭಾಗಗಳಲ್ಲಿ ನೀರು ನಿಂತು ಕೃತಕ ನೆರೆ ಸೃಷ್ಟಿಯಾಗುತ್ತಿರುವ ಬಗ್ಗೆ ಪುರಸಭೆ ಸದಸ್ಯರು ಹಾಗೂ ಸಾರ್ವಜನಿಕರಿಂದ ಕಾರಣ ತಿಳಿದುಕೊಂಡ ಉಪವಿಭಾಗಾಧಿಕಾರಿ ಡಾ. ನಯನಾ ನೀರು ಸಮರ್ಪಕವಾಗಿ ನೀರು ಹರಿದು ಹೋಗಲು ಎಷ್ಟು ಆಳದ ಚರಂಡಿ ನಿರ್ಮಿಸಬೇಕು ಮತ್ತು ನದಿಗೆ ಸಂಪರ್ಕಿಸುವ ಚರಂಡಿಗಳ ಮಾಹಿತಿ ಪಡೆದುಕೊಂಡರು.
    ಪಟ್ಟಣ ಭಾಗದಲ್ಲಿ ಚರಂಡಿಗಳ ಹೂಳೆತ್ತದ ಬಗ್ಗೆ ಪುರಸಭೆ ಸದಸ್ಯರಿಂದ ದೂರು ಬಂದ ಹಿನ್ನೆಲೆಯಲ್ಲಿ ಚರಂಡಿಗಳ ಹೂಳೆತ್ತಲು ಕ್ರಮ ವಹಿಸುವಂತೆ ಪುರಸಭೆ ಮುಖ್ಯಾಧಿಕಾರಿಗೆ ಜಿಲ್ಲಾ ಯೋಜನಾಧಿಕಾರಿ ಶಾಹಿಲಾ ವರ್ಗೀಸ್ ಸೂಚಿಸಿದರು. ಈ ಹಿಂದೆ ಇದ್ದಂತಹ ಮಾರ್ಗದಲ್ಲಿ ಚರಂಡಿಗಳನ್ನು ಐಆರ್‌ಬಿ ಹಾಗೂ ಪುರಸಭೆಯಿಂದ ಮುಚ್ಚಲಾಗಿದ್ದು, ಅದನ್ನು ಪುನಃ ತೆರೆದು ಬಿಡಿಸಿಕೊಟ್ಟರೆ ಶಂಸುದ್ದೀನ್ ಸರ್ಕಲ್ ಹಾಗೂ ರಂಗಿನಕಟ್ಟೆಯಲ್ಲಿ ನೀರು ನಿಲ್ಲುವುದಿಲ್ಲ ಎಂಬ ಸಲಹೆಯನ್ನು ಪುರಸಭೆಯ ಬಹುತೇಕ ಸದಸ್ಯರು ಜಿಲ್ಲಾ ತಂಡಕ್ಕೆ ನೀಡಿದರು. ಇದಕ್ಕೆ ಒಪ್ಪಿದ ಜಿಲ್ಲಾ ತಂಡ ಆಜಾದ ನಗರ, ಜೆಎಂಎಫ್‌ಸಿ ನ್ಯಾಯಾಲಯ ಹಾಗೂ ಗುಡಲಕ್ ರಸ್ತೆಗಳಲ್ಲಿ ಚರಂಡಿ ವ್ಯವಸ್ಥೆ ಮಾಡಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡಿಕೋಡುವ ಬಗ್ಗೆ ವರದಿ ನೀಡುವುದಾಗಿ ತಿಳಿಸಿದರು.
    ಹೆದ್ದಾರಿ ಹೋರಾಟ ಸಮಿತಿ ಅಧ್ಯಕ್ಷ ರಾಜೇಶ ನಾಯಕ, ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಸತೀಶಕುಮಾರ ನಾಯ್ಕ, ತಂಜೀಂ ಅಧ್ಯಕ್ಷ ಇನಾಯಿತುಲ್ಲಾ ಶಾಬಂದ್ರಿ, ಪುರಸಭೆ ಸದಸ್ಯರಾದ ಅಲ್ತ್ಾ ಖರೂರಿ, ಕೈಸರ್ ಮೊಹತಿಶ್ಯಾಂ, ಅಜೀಮ್, ಇಂಶಾದ್ ಮೊಹತಿಶ್ಯಾಂ, ಒಳಚರಂಡಿ ಹಾಗೂ ನೀರು ಸರಬರಾಜು ಮಂಡಳಿ ಅಭಿಯಂತರ ಶಿವರಾಮ ನಾಯ್ಕ ಇತರ ಅಧಿಕಾರಿಗಳು ಸಾರ್ವಜನಿಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts