More

    ಉದ್ಘಾಟನೆಗೆ ಕೂಡಿ ಬರದ ಕಾಲ

    ಗಜೇಂದ್ರಗಡ: ಪಟ್ಟಣದ ಗದಗ ರಸ್ತೆಯಲ್ಲಿ ನಿರ್ವಿುಸಲಾದ ಡಾ. ಬಾಬು ಜಗಜೀವನರಾವ್ ಸಮುದಾಯ ಭವನದ ಕಾಮಗಾರಿ ಮುಗಿದು ವರ್ಷ ಕಳೆದರೂ ಉದ್ಘಾಟನೆಗೆ ಇನ್ನೂ ಮುಹೂರ್ತ ಕೂಡಿಬಂದಿಲ್ಲ.

    2012-13ನೇ ಸಾಲಿನ ಸಮಾಜ ಕಲ್ಯಾಣ ಇಲಾಖೆ ಅನುದಾನದಲ್ಲಿ 14 ಗುಂಟೆ ಜಾಗದಲ್ಲಿ 1 ಕೋಟಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಸಮುದಾಯ ಭವನ ನಿರ್ವಣಕ್ಕೆ ಚಾಲನೆ ನೀಡಲಾಗಿತ್ತು. ಕಳೆದ ವರ್ಷವೇ ಕಾಮಗಾರಿ ಪೂರ್ಣಗೊಂಡಿದ್ದರೂ ಅಧಿಕಾರಿಗಳ ಅಸಡ್ಡೆಯಿಂದ ಕಟ್ಟಡ ಉದ್ಘಾಟನೆಯಾಗಿಲ್ಲ.

    ಆಯಾ ಸಮುದಾಯದವರ ವಿವಿಧ ಕಾರ್ಯಕ್ರಮಗಳಿಗೆ ಅನುಕೂಲವಾಗಲಿ ಎನ್ನುವ ಸದುದ್ದೇಶದಿಂದ ನಿರ್ವಿುಸಲಾದ ಸಮುದಾಯ ಭವನ ಸಮರ್ಪಕ ನಿರ್ವಹಣೆ ಇಲ್ಲದೇ ಸಂಪೂರ್ಣ ಪಾಳು ಬಿದ್ದಿದೆ. ಈಗಾಗಲೇ ಸಮುದಾಯ ಭವನದ ಆವರಣ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು, ಇಸ್ಪೀಟ್ ಎಲೆಗಳು ಬಿದ್ದಿವೆ. ಸರ್ಕಾರ ಕೋಟಿಗಟ್ಟಲೇ ಹಣ ವ್ಯಯಿಸಿ ಇಂತಹ ಕಟ್ಟಡ ನಿರ್ವಿುಸಿದರೆ ಅವು ಪುಂಡಪೋಕರಿಗಳ ತಾಣವಾಗುತ್ತಿರುವುದು ದುರ್ದೈವದ ಸಂಗತಿ.

    ಸರ್ಕಾರಿ ವೆಚ್ಚದಲ್ಲಿ ಕಟ್ಟಡ ಪೂರ್ಣಗೊಳಿಸಲಾಗಿದೆ. ಆದರೆ, ಅದನ್ನು ಲೋಕಾರ್ಪಣೆ ಮಾಡದಿದ್ದರೆ ಎಷ್ಟು ಖರ್ಚು ಮಾಡಿ ಏನು ಪ್ರಯೋಜನ. ಸಂಬಂಧಪಟ್ಟ ಅಧಿಕಾರಿಗಳು ಮುತುವರ್ಜಿವಹಿಸಿ ಕೂಡಲೆ ಸಮುದಾಯ ಭವನದ ಉದ್ಘಾಟನೆಗೆ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಸ್ಥಳೀಯರು.

    ಸಮುದಾಯ ಭವನದ ಕಾಮಗಾರಿ ಪೂರ್ಣಗೊಂಡಿದೆ. ಹೊರವಿದ್ಯುದೀಕರಣದ ಕೆಲಸ ಮಾತ್ರ ಬಾಕಿ ಇದೆ. ಅನುದಾನ ಬಂದ ತಕ್ಷಣವೇ ಉದ್ಘಾಟಿಸಿ ಜನರಿಗೆ ಅನುಕೂಲ ಮಾಡಿಕೊಡಲಾಗುತ್ತದೆ.

    | ಬಾಲಚಂದ್ರ ಸಂಗನಾಳ

    ತಾಲೂಕು ಸಮಾಜ ಕಲ್ಯಾಣಾಧಿಕಾರಿ, ರೋಣ

    ಡಾ.ಬಾಬುಜಗಜೀವನರಾವ್ ಸಮುದಾಯ ಭವನದ ಕಾಮಗಾರಿ ಪೂರ್ಣಗೊಂಡು ವರ್ಷ ಕಳೆದಿದೆ. ಆದರೆ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಉದ್ಘಾಟನೆಯಾಗದೆ ಪಾಳು ಬಿದ್ದಿದೆ. ಈ ಸಮುದಾಯ ಭವನ ಅತ್ಯಂತ ವಿಶಾಲವಾದ ಕಟ್ಟಡ ಹೊಂದಿದ್ದು ಪಟ್ಟಣದಲ್ಲಿಯೇ ಅತಿ ದೊಡ್ಡ ಸಮುದಾಯ ಭವನವಾಗಿದೆ. ಸಕಲ ಸೌಕರ್ಯವೂ ಒಳಗೊಂಡಿದೆ. ಈ ಭವನ ಶೀಘ್ರವೇ ಲೋಕಾರ್ಪಣೆಯಾಗಿ ಜನರಿಗೆ ಅನುಕೂಲವಾಗಲಿ.

    | ಬಸವರಾಜ ಚನ್ನಿ ಜಿಲ್ಲಾಧ್ಯಕ್ಷ

    ಡಿಕೆಶಿ ಅಭಿಮಾನಿ ಸಂಘ, ಗಜೇಂದ್ರಗಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts