More

    ಸ್ವಸಹಾಯ ಸಂಘದಿಂದ ಮಹಿಳಾ ಸಬಲೀಕರಣ

    ನೊಣವಿನಕೆರೆ: ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆಯಿಂದ ಸ್ವಸಹಾಯ ಸಂಗಳ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣವಾಗುತ್ತಿದೆ. ಧಾರ್ಮಿಕ ಆಚರಣೆಗಳ ಜತೆಗೆ ಮದ್ಯವರ್ಜನ ಶಿಬಿರದಂಥ ಕಾರ್ಯಕ್ರಮಗಳ ಮೂಲಕ ವ್ಯಸನ ಮುಕ್ತ ಸವಾಜ ನಿರ್ವಾಣದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಕಾಡಸಿದ್ದೇಶ್ವರ ಮಠದ ಡಾ.ಶ್ರೀಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಹೇಳಿದರು.

    ತಿಪಟೂರು ತಾಲೂಕಿನ ನೊಣವಿನಕೆರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಮೈದಾನದಲ್ಲಿ ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ ನೊಣವಿನಕೆರೆ ವಲಯ, ಸ್ವ-ಸಹಾಯ ಸಂ, ಒಕ್ಕೂಟ ಹಾಗೂ ವಿಜಯವಾಣಿ, ದಿಗ್ವಿಜಯ ನ್ಯೂಸ್ ವಾಧ್ಯಮ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸಾಧನ ಸವಾವೇಶದ ಸಾನ್ನಿಧ್ಯವಹಿಸಿ ಮಾತನಾಡಿದರು.

    ಸಮಾಜದಲ್ಲಿ ಸಂಘಟನೆ ಎಂಬುದು ಬಹಳ ಮುಖ್ಯ. ನೊಣವಿನಕೆರೆ ಭಾಗದಲ್ಲಿ ನಾವು ಪೀಠಾಧ್ಯಕ್ಷರಾದ ಸಂದರ್ಭದಲ್ಲಿ ಧಾರ್ಮಿಕ ಕಾರ್ಯಗಳಿಗೆ ಹಾಗೂ ಸಂಟನೆಗೆ ದಿವಂಗತ ಕಾಬೋರಪ್ಪ ಹೆಸರಾಗಿದ್ದರು. ಅಂತಹ ವ್ಯಕ್ತಿಗಳು ಹುಟ್ಟಿ ಬೆಳೆದ ಸ್ಥಳದಲ್ಲಿ ಧಾರ್ಮಿಕ ಆಚರಣೆಗಳು ನಡೆಯುತ್ತಿರುವುದು ಅವರ ಅಂದಿನ ಸಂಟನೆ ಶಕ್ತಿಗೆ ವಾದರಿ ಎಂದರು.

    ಕಾರ್ಯಕ್ರಮಕ್ಕೆ ಸಹಯೋಗ ನೀಡಿದ ವಿಜಯವಾಣೆ, ದ್ವಿಗಿಜಯ ನ್ಯೂಸ್ ಸಂಸ್ಥೆ ರಾಜ್ಯದಲ್ಲಿ ಸಾವಾಜಿಕ ಕಾರ್ಯಗಳಿಗೆ ಸಹಕಾರ ನೀಡುವುದರ ಜತೆಗೆ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಆಶೀರ್ವದಿಸಿದರು. ಶಾಸಕ ಬಿ.ಸಿ.ನಾಗೇಶ್ ವಾತನಾಡಿ, ಮದ್ಯವರ್ಜನ ಶಿಬಿರದಂಥ ವಾನಸಿಕ ಸ್ವಸ್ಥತೆ ಕಾಪಾಡುವ ಯೋಜನೆಗಳ ಜತೆಗೆ ಪರಂಪರೆ, ಸಂಸ್ಕೃತಿ ಉಳಿಸುವ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಯೋಜನೆಯ ಜಿಲ್ಲಾ ನಿರ್ದೇಶಕಿ ದಯಾಶೀಲ ವಾತನಾಡಿ, 1982ರಲ್ಲಿ ಯೋಜನೆ ಪ್ರಾರಂಭವಾಗಿ ಯಶಸ್ವಿ ಕಾರ್ಯನಿರ್ವಹಿಸುತ್ತಿದೆ. ಜನಸಾವಾನ್ಯರಿಗೆ ಆರ್ಥಿಕ ಸಹಕಾರದ ನೀಡುವ ಮೂಲಕ ಸ್ವಾವಲಂಬಿ ಜೀವನಕ್ಕೆ ಸಹಕಾರ ನೀಡಲಾಗುತ್ತಿದೆ. ಸಾವಾಜಿಕ ಬದುಕಿನಲ್ಲಿ ಸತ್ಯನಾರಾಯಣ ಸ್ವಾಮಿಯ ಕೃಪೆಯಿಂದ ಶಾಂತಿ, ನೆಮ್ಮದಿ ನೆಲೆಸಲಿ ಎಂದರು.

    ತಾಲೂಕು ಪಂಚಾಯಿತಿ ಅಧ್ಯಕ್ಷ ಜಿ.ಎಸ್.ಶಿವಸ್ವಾಮಿ, ತಾಲೂಕು ಯೋಜನಾಧಿಕಾರಿ ಶಾಂತನಾಯಕ್, ಪೂಜಾ ಸಮಿತಿ ಅಧ್ಯಕ್ಷ ದಯಾನಂದ್ ಕಾಬೋರಪ್ಪ, ಗ್ರಾಮ ಪಂಚಾಯಿತಿ ಉಪಾದ್ಯಕ್ಷ ಎ.ಪಿ.ಕೆಂಪರಾಜು, ನೆಲ್ಲಿಕೆರೆ ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್, ವಲಯ ಮೇಲ್ವಿಚಾರಕ ಎ.ಜಿ.ಪ್ರವೀಣ್, ಒಕ್ಕೂಟಗಳ ಕಾರ್ಯದರ್ಶಿಗಳಾದ ದೇವಾನಂದ್, ರಂಗಪ್ಪ, ಜಿಲ್ಲಾ ಜನಜಾಗೃತಿ ಸದಸ್ಯರಾದ ಬಿ.ವಿ.ವೆಂಕರಾಮಯ್ಯ, ಎಸ್.ಬಸವರಾಜು , ಪ್ರಗತಿ ಬಂಧು ಸ್ವ ಸಹಾಯ ಸಂ ಹಾಗೂ ಒಕ್ಕೂಟದ ಸದಸ್ಯರು ಇದ್ದರು.

    ಪ್ರಶಸ್ತಿ ಪ್ರಧಾನ:ಸ್ವ-ಸಹಾಯ ಸಂಗಳಿಗೆ ನಡೆಸಿದ್ದ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುವಾನ, ಉತ್ತಮ ಕಾರ್ಯ ನಿರ್ವಹಿಸಿದ ಸಂಗಳಿಗೆ ಪ್ರಶಸ್ತಿ ಪತ್ರ ವಿತರಣೆ ಮತ್ತು ಕನಾಟಕ ಪಬ್ಲಿಕ್ ಶಾಲೆ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಶಿಕ್ಷಕ ಎಸ್.ಆರ್.ಸುರೇಶ್‌ಗೆ ಶಾಲೆಯ ಅಭಿವೃದ್ಧಿ ಹಾಗೂ 450 ಹೆಚ್ಚು ವಿದ್ಯಾರ್ಥಿಗಳ ದಾಖಲಾತಿ ಗುರುತಿಸಿ ಗೌರವಿಸಲಾಯಿತು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts